ಹೊಸನಗರ : ಪಾಲನೆಯಾಗದ ಸರ್ಕಾರಿ ಆದೇಶ,ಮಾಸ್ಕ್ ಸಾಮಾಜಿಕ ಅಂತರ ಕೇಳೋರಿಲ್ಲ? ಹೇಳೋರಿಲ್ಲ?

ರಾಜ್ಯದಲ್ಲಿ ರೂಪಾಂತರ ಕೊರೋನಾ ಆತಂಕದ ನಡುವೆ ಅಲ್ಲಲ್ಲಿ ಕೆಲವರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನ, ಕೊರೋನಾ  ಆಘಾತಕ್ಕೆ ಅಣಿಯಾಗುತ್ತಿರುವಂತೆ, ಕಾಣುತ್ತಿದೆ.ಹೌದು ಶಿವಮೊಗ್ಗ ಹಾಗೂ ಮಲೆನಾಡ ಜನತೆ ಯಾಕೋ ಕೊರೋನಾ ನಿಯಮವನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ.  ಈಗಾಗಲೇ ರಾಜ್ಯ ಹಾಗೂ ತಾಲೂಕು ಎರಡನೇ ಅಲೆಯ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ,ಈ ಮದ್ಯೆ ಮಾಸ್ಕ್  ಹಾಗೂ ಸಾಮಾಜಿಕ ಅಂತರ ಕೇಳುವವರೇ ಇಲ್ಲ

ಹೌದು ಸದ್ಯ ಹೊಸನಗರದಲ್ಲಿ  ಪಟ್ಟಣದಲ್ಲಿ ಯಾವುದೇ ಮಾಸ್ಕ್ ಸಾಮಾಜಿಕ ಅಂತರ ಇಲ್ಲದೆ,  ಸಾರ್ವಜನಿಕರ ಸಂಚರಿಸುವ ದೃಶ್ಯಗಳು,ಸರ್ವೇಸಾಮಾನ್ಯವಾಗಿದ್ದು,ಸರ್ಕಾರಿ ಆದೇಶವಿದ್ದರೂ ಸಹ  ಕೇಳುವವರಿಲ್ಲದೆ, ಹೇಳುವವರಿಲ್ಲದೆ, ಆದೇಶ ಕೇವಲ ಕಾಗದ ಪತ್ರದಲ್ಲಿ ಉಳಿದಂತೆ ಕಾಣುತ್ತಿದೆ!!


ಸದ್ಯದ ಪರಿಸ್ಥಿತಿ ಕರೋನ ವೈರಸ್ ನಾ ಹಾವಳಿ ಸದ್ಯ ಭಾರತದಲ್ಲಿ ಕಡಿಮೆ ಇದ್ದು, ವಿದೇಶಗಳಲ್ಲಿ ಮತ್ತೊಮ್ಮೆ ಲಾಕ್ಡೌನ್ ಪರಿಸ್ಥಿತಿ ಉಂಟಾಗಿದ್ದು,  ಪರಿಸ್ಥಿತಿ ಚಿಂತಾಜನಕವಾಗಿದೆ.ಈಗಾಗಲೇ 100 ಕೋಟಿಗೂ ಅಧಿಕ ಜನ ಕೊರನಾ ಲಸಿಕೆ ತೆಗೆದುಕೊಂಡಿದ್ದಾರೆ. ವ್ಯಾಕ್ಸಿನ್  ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಗಂಭೀರವಾಗಿ ಸೂಚನೆ ನೀಡಿದೆ.

ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ಅಷ್ಟಾಗಿ ಅನಾರೋಗ್ಯಕ್ಕೆ ಒಳಪಡದೆ, ವ್ಯಕ್ತಿ ವಿಷಮ ಸ್ಥಿತಿಯನ್ನು ತಲುಪದ ಮಟ್ಟದಲ್ಲಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಂತ ಲಸಿಕೆ ತೆಗೆದುಕೊಂಡಿದ್ದೇವೆ ಎಂದು ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್ ಹಾಗೂ ಅಂತರವನ್ನ ಮರೆತರೆ ಹೆಚ್ಚಿನ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.

ಅದಕ್ಕೂ ಮೊದಲು ನಾವು ಜಾಗೃತೆಯಿಂದ ಕೊರೋನ ವಿರುದ್ಧ ಈಗಲೇ ಹೋರಾಡಬೇಕಾಗಿದೆ ಸದ್ಯಕ್ಕೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಒಂದೇ ನಮ್ಮನ್ನೆಲ್ಲಾ ರಕ್ಷಿಸುವ ರಾಮಬಾಣ ಇನ್ನಾದರೂ ಅಧಿಕಾರಿಗಳು ಸ್ಪಷ್ಟ ನಿಲುವುನೊಂದಿಗೆ ಪಟ್ಟಣದಲ್ಲಿ ಮಾಸ್ಕ್ ಜೊತೆಗೆ ಸಂಚಾರ ಕಡ್ಡಾಯಗೊಳಿಸುವ  ಕೋರೋನ ಮುಕ್ತ ನಗರಕ್ಕೆ ಹೋರಾಡಬೇಕಾಗಿದೆ.

ಇನ್ನಾದರೂ ತಾಲೂಕು ಆಡಳಿತ ಕಠಿಣ ರೀತಿಯಲ್ಲಿ ಸಾರ್ವಜನಿಕರಿಗೆ ಕೊರನಾ ನಿಯಮ ಮನ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗುತ್ತದೆ ಎಂದು ಕಾದುನೋಡಬೇಕಾಗಿದೆ.

Post a Comment

Previous Post Next Post