ಸಾಗರ :ಪ್ರಕೃತಿ ಮಡಿಲಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ಆನಂದಪುರ ರಾಯಲ್ ಕ್ಲಬ್ ಸದಸ್ಯರು

ಭಾರತವು ಹಲವು ಭಾಷೆಗಳ ವೈವಿಧ್ಯಮಯ ದೇಶವಾಗಿದೆ.ಈ ದೇಶದಲ್ಲಿ ಕನ್ನಡಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ.ಕನ್ನಡ ನಾಡು ನುಡಿ ಜಲ ಭೂಮಿಗಾಗಿ ಹೋರಾಡುವ ಅದೆಷ್ಟೋ ಕೋಟ್ಯಂತರ ಕನ್ನಡಿಗರು ನಮ್ಮ ನಾಡಿನಲ್ಲಿ ಇದ್ದಾರೆ.ನಮ್ಮ ನಾಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿವೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಕೊಲ್ಲಿ ಬಚ್ಚಲು ಡ್ಯಾಂ ಪ್ರದೇಶದಲ್ಲಿ ಕಳೆದ 3 ತಿಂಗಳಿನಿಂದ ಗಿಡಗಂಟಿಗಳಿಂದ ಕೂಡಿದ ಕೊಲ್ಲಿಬಚ್ಚಲು ಅರಣ್ಯ ಪ್ರದೇಶ ಸ್ವಚ್ಚಗೊಳಿಸಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಹಿನ್ನೀರಿನ ಪ್ರದೇಶದಲ್ಲಿ ಆಚರಿಸಬೇಕೆಂದು ಅನಂದಪುರದ ಲಾಯನ್ಸ್ ಕ್ಲಬ್ ಸದಸ್ಯರು ಪಣತೊಟ್ಟಿದ್ದರು.ಅದರಂತೆ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿವಿಧ ಧರ್ಮಗಳ ಧರ್ಮಗುರುಗಳ ಸಮ್ಮುಖದಲ್ಲಿ ನೂರಾರು ಜನರ ಆಶೀರ್ವಾದದೊಂದಿಗೆ ಅದ್ದೂರಿಯಾಗಿ ನೆರವೇರಿಸಿದರು.

ಕನ್ನ ಡದ ಕವ ಕವಯತ್ರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅದ್ದೂರಿಯಾಗಿ ನೆರವೇರಿದ್ದು 

ಪ್ರಕೃತಿ ಮಡಿಲಿನಲ್ಲಿ ಹಿನ್ನೀರಿನ ಪ್ರದೇಶದಲ್ಲಿ ಜನನಿಬಿಡ ಪ್ರದೇಶದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ರಾಯಲ್ ಕ್ಲಬ್ ಹೆಮ್ಮೆಯ ಕಾರ್ಯಕ್ರಮವಾಗಿದೆ.


ವರದಿ : ಪವನ್ ಕುಮಾರ್ ಕಠಾರೆ.

Post a Comment

Previous Post Next Post