ಮಾರುತಿಪುರ :ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾದ ಮೂಲಭೂತ ಸೌಕರ್ಯ ಸಮಸ್ಯೆ!!

ಹೊಸನಗರ: ತಾಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್  ವ್ಯಾಪ್ತಿಯ ಹೊಸಕೆಸರೆ ಗ್ರಾಮಕ್ಕೆ ಹೊಂದಿಕೊಂಡಿರುವ ಊರಿನಲ್ಲಿ ಸರಿಯಾದ ರಸ್ತೆ ಮಾರ್ಗಕ್ಕಾಗಿ ದಿನ ನಿತ್ಯ ಕಿರಿ ಕಿರಿ ಅನುಭವಿಸುವ  ಗೋಳಾಟವನ್ನ ಕೇಳೋರಿಲ್ಲದ್ದೆ ಗ್ರಾಮಸ್ಥರು ಹೈರಾಣಗಿದ್ದಾರೆ.!
ಹೌದು ಕಳೆದ ನಾಲ್ಕು- ಐದು ವರ್ಷದಿಂದ ಬಾಣಿಗ ದಿಂದ ಹುಣಸೆಕೊಪ್ಪ ನಿಂಬೇಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಕಿರು ಸೇತುವೆ ಸಹ ದುರಸ್ತಿ ಇಲ್ಲದೆ. ಶಿಥಿಲಗೊಂಡಿವೆ.!!
ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು. ರಸ್ತೆಯಲ್ಲಿ ಜನ ಓಡಾಡಲು ಹಾಗೂ ವಾಹನ ಚಲಾವಣೆ ಮಾಡಲು ಭಯಬೀತರಾಗಿದ್ದಾರೆ.
ದಿನ ನಿತ್ಯ ಶಾಲಾ ಮಕ್ಕಳು ಸಹ ಇದೆ ಮಾರ್ಗದಲ್ಲಿ ಸಂಚರಿಸುವ ದಾರಿಯಾಗಿದ್ದು, ಮಳೆಗಾಲದ ನೀರಿನ ಹರಿವಿಗೆ ಸೇತುವೆಯ ತಡೆಗೋಡೆ ಮುರಿದಿದ್ದು, ಹಾಗೂ ರಸ್ತೆ ಪಕ್ಕದಲ್ಲಿ ಮಣ್ಣು ಕುಸಿದಿದ್ದು ಕಂದಕ ಸೃಷ್ಟಿಯಾಗಿದ್ದು ಮಕ್ಕಳನ್ನ ಹೊರಗಡೆ ಕಳಿಸಲು ಪೋಷಕರಿಗೆ ತಲೆನೋವಾಗಿದೆ.

ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಆಡಳಿತ ಸಿಬ್ಬಂದಿಗಳಿಗೆ ಹಾಗೂ ಸದಸ್ಯರುಗಳ ಹತ್ತಿರ ಮೌಖಿಕವಾಗಿ ಗ್ರಾಮಸ್ಥರು ಅಳಲನ್ನ ತೋಡಿಕೊಂಡರೂ ಏನು ಪ್ರಯೋಜನ ಆಗಿಲ್ಲ. ಎಂದು ಗ್ರಾಮದ ಯುವಕ ವೆಂಕಟೇಶ್ ದೂರಿದ್ದಾರೆ..
ರಸ್ತೆಗಳು ಹಾಗೂ ಕಿರು ಸೇತುವೆಗಳು ಮಾಡಲು ಸಾಕಷ್ಟು ಅನುದಾನ ಹಾಗೂ ಲೋಕೋಪಯೋಗಿ ಇಲಾಖೆಯ ಸಹಬಾಗಿತ್ವ ಬೇಕಾಗಿದ್ದು, ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು,ಸದಸ್ಯರು, ಹಾಗೂ ಪಂಚಾಯತ್ ಅಧ್ಯಕ್ಷರು,ಅಧಿಕಾರಿಗಳು  ಕ್ಷೇತ್ರದ ಶಾಸಕರ, ಹಾಗೂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕಾಗಿ ಊರಿನ ಯುವಕ ವೆಂಕಟೇಶ್ ಒತ್ತಾಯ ಮಾಡಿದ್ದಾರೆ.
ಪಕ್ಷಾತೀತಾವಾಗಿ, ಊರಿನ ಮೂಲಭೂತ ಸೌಕರ್ಯಗಳ ಕಡೆಗೆ ಗಮನ ಹರಿಸಿದರೆ ಮಾತ್ರ ಗ್ರಾಮಗಳ ಸರ್ವತೋಮುಖ ಅಭಿರುದ್ದಿ ಸಾಧ್ಯವಾಗಲಿದೆ.ಎಂದಿದ್ದಾರೆ..


ನಮ್ಮ ಗುಂಪು ಸೇರಿ.....

ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ✍️✍️


ವರದಿ:ಅಜಿತ್ ಗೌಡ ಬಡೇನಕೊಪ್ಪ 





Post a Comment

Previous Post Next Post