ಸರ್ಕಾರಿ ಸಾರಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಶಾಸಕರನ್ನ ಭೇಟಿ ಮಾಡಿ ಮನವಿಮಾಡಿದ BJYM ಹೊಸನಗರ


ಹೊಸನಗರ : ಹಲವಾರು ವರ್ಷಗಳಿಂದ ಹೊಸನಗರ ತಾಲೂಕು .ಮಾರುತಿಪುರ ಪಂಚಾಯತ್  ವ್ಯಾಪ್ತಿಯ ಕಚ್ಚಿಗೆಬೈಲು -ವಿಜಾಪುರ ಮಾರ್ಗದಲ್ಲಿ ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದೆ ವಿಶೇಷವಾಗಿ ವಿಜಾಪುರ,ನೆಲಗಳಲೆ, ಗ್ರಾಮಸ್ಥರು, ಶಾಲಾ ಮಕ್ಕಳು 10 ರಿಂದ 15ಕಿ.ಮೀ ಪ್ರಯಾಣ ಮಾಡುವ ದುಸ್ಥಿತಿ ಇದೆ.

ಹೌದು.ವಿಜಾಪುರ,ಸಂಪಳ್ಳಿ ನೆಲಗಳಲೆ, ಮಂಕೋಡು ಭಾಗದವಿದ್ಯಾರ್ಥಿಗಳು 10  ಕಿ ಮೀ ಹೆಚ್ಚು ದೂರದ ಪ್ರೌಢಶಾಲೆ ಮಾರುತಿಪುರಕ್ಕೆ ತೆರಳುವುದೇ ಗಂಭೀರ ಸಮಸ್ಯೆಯಾಗಿದ್ದು!!!ಹಾಗೂ 

ಸಾರ್ವಜನಿಕರು ,ಆಸ್ಪತ್ರೆಗಳಿಗಾಗಲಿ, ಶಾಲಾ-ಕಾಲೇಜುಗಳಿಗಾಗಲಿ, ಹಾಗೂ ನಿತ್ಯಕೆಲಸ ಕಾರ್ಯಗಳಿಗೆ ಹೋಗಲು,ಸಾಗರ-ಹೊಸನಗರ ಹೆದ್ದಾರಿ ಮುಖ್ಯ ರಸ್ತೆ ಅಂದರೆ, ಕಚ್ಚಿಗೆಬೈಲಿಗೆ 10 ಕಿ.ಮೀ ಹೆಚ್ಚು ನೆಡೆದುಕೊಂಡೆ ಬಂದು, ತಾಲೂಕು ಕೇಂದ್ರಕ್ಕೆ ಬರುವ ಅನಿವಾರ್ಯತೆ ನಿರ್ಮಾಣವಾಗಿದೆ...!

ಈ ಮೊದಲು ಕೊರೋನ ಪೂರ್ವ ವಿಜಾಪುರ ಮಾರ್ಗ ಖಾಸಗಿ ಬಸ್ಸುಗಳು ತಮ್ಮ ಸೇವೆಯನ್ನು ನೀಡಿದ್ದವು.ಈಗ ಲಾಕ್ ಡೌನ್ ಸಡಿಲಕೆ ಆದರೂ ಸಹ ಪ್ರಯಾಣಿಕರ ಕೊರತೆಯಿಂದ ಬಸ್ಸುಗಳ ಸೇವೆ ಸ್ಥಗಿತಗೊಂಡಿದ್ದು.ಶಾಲಾ ಕಾಲೇಜು ಪುನ್ಹ ಆರಂಭವಾದ ಹಿನ್ನೆಲೆ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹೊಸನಗರಕ್ಕೆ ಬರಲು ಸುಮಾರು 10ಕಿ.ಮೀ ನೆಡೆದುಕೊಂಡು ಬರುವಂತಾಗಿದೆ.

ಈ ಹಿನ್ನೆಲೆ ವಿಜಾಪುರ ಗ್ರಾಮಸ್ಥರು ಹಾಗೂ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಹೊಸನಗರ ಮಂಡಲ ವತಿಯಿಂದ  ಹೊಸನಗರ - ಸಾಗರ ಕ್ಷೇತ್ರದ ಶಾಸಕರಾದ  ಶ್ರೀ ಹರತಾಳು  ಹಾಲಪ್ಪ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಲಿಖಿತ ರೂಪದಲ್ಲಿ ಸಮಸ್ಯೆ ಬಗ್ಗೆ ತಿಳಿಸಿ,ಸರ್ಕಾರಿ ಬಸ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಗರ ನಿತಿನ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಮಂಡ್ರಿ, ಉಪಾಧ್ಯಕ್ಷರು ಕೇಶವ ಸೋರೆಕೊಪ್ಪ, ನಂದಿ ಸಂತೋಷ,ದೀಕ್ಷಿತ್ ಮಾಸ್ತಿಕಟ್ಟೆ,ಮಹೇಶ್ ದೇವರಸಲಿಕೆ 
ಮತ್ತಿತರರು ಉಪಸ್ಥಿತರಿದ್ದರು.....

ನಮ್ಮ ಗುಂಪು ಸೇರಿ.....

ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ✍️✍️✍️




Post a Comment

Previous Post Next Post