50 ಸಾವಿರ ಗಡಿಯತ್ತ ಮಲೆನಾಡ ರಾಶಿ,ರೈತ ಮೊಗದಲಿ ಖುಷಿ!! ,ಅಡಿಕೆ ಬೆಳೆಗೆ ಬಂಪರ್ ಬೆಲೆ, ಬೆಳೆಗಾರರಲ್ಲಿ ಮಂದಹಾಸ

ಶಿವಮೊಗ್ಗ: ಜಿಲ್ಲೆಯಲ್ಲಿ ಅಗ್ರಗಣ್ಯ ವಾಣಿಜ್ಯ ಬೆಳೆ ಯಾಗಿ ಅಡಿಕೆ ಬೆಳೆಗೆ ಬಂಪರ್  ಬೆಲೆ  ಸಿಗುವ ಮುನ್ಸೂಚನೆಯಿದ್ದು ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದ್ದು ಈಗಾಗಲೇ ಅಡಿಕೆ ಬೆಲೆ ಏರಿಕೆ ನೀರಿಕ್ಷೆ ಇಲ್ಲದೆ ಸಣ್ಣ ಮಧ್ಯಮ ರೈತರು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಅಡಿಕೆ ಕೊಟ್ಟು ನಿರಾಸೆಯಲ್ಲಿದ್ದಾರೆ..!!!
ವರ್ಷದಿಂದ  ಸ್ಥಿರತೆ ಕಾಯ್ದುಕೊಂಡಿದ್ದ,
ಅಡಿಕೆಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್​ಗೆ 38 ರಿಂದ 40 ಸಾವಿರವಿದ್ದ ಅಡಕೆ ಬೆಲೆ ಇದೀಗ  ದಿಢೀರ್ 50ಸಾವಿರ ರೂಪಾಯಿಯ ಗಡಿಯತ್ತ ಸಾಗಿದೆ.

ಮಲೆನಾಡ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಬೆಲೆ ಏರಿಕೆಯಾಗಿರುವುದರಿಂದ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ.
ಈ ಬಾರಿ ವಾಡಿಕೆ ಮಳೆಯ ಪ್ರಮಾಣ ಅಷ್ಟೊಂದು ಇಲ್ಲದ ಕಾರಣ ಅಡಿಕೆ ತಗಲುವ ಕೊಳೆ ರೋಗ ಭಾದೆ ಸಹ ಕಡಿಮೆ ಪ್ರಮಾಣದಲ್ಲಿದ್ದು ರೈತರು ಉತ್ತಮ ಬೆಳೆಯ ನೀರಿಕ್ಷೆಯಲ್ಲಿದ್ದಾರೆ..


ಇಂಡೋನೇಷಿಯ,ಮಲೇಷಿಯಾದಿಂದ ಬರುತ್ತಿದ್ದ ಕಳಪೆ ಅಡಿಕೆ ಸ್ಥಗಿತವಾಗಿದ್ದು, ಕೆಲ ಗುಟ್ಕಾ ಕಂಪನಿಗಳು ರೈತರಿಂದಲೇ ನೇರ ಅಡಿಕೆ ಖರೀದಿಗೆ ಇಳಿದಿದ್ದಾರೆ ಹೀಗಾಗಿ ಅಡಿಕೆ ಬೆಲೆ ಏರಿಕೆ ಕಂಡಿದೆ
ಎಂದು ಅಡಿಕೆ ವ್ಯಾಪಾರಿಗಳು ಅಂದಾಜು ಮಾಡಿದ್ದಾರೆ..


Post a Comment

Previous Post Next Post