ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ರೈಲ್ವೆ ನಿಲ್ದಾಣವನ್ನು ಕಳೆದ 5 ವರ್ಷದ ಈಚೆಗೆ ಸರ್ಕಾರ ಬಹು ಅಭಿವೃದ್ಧಿಪಡಿಸಿ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಾಳಗುಪ್ಪದಿಂದ ಬೆಂಗಳೂರಿಗೆ ಮೈಸೂರಿನಿಂದ ತಾಳಗುಪ್ಪಕ್ಕೆ ಎರಡೂ ರೈಲನ್ನು ಸಂಚರಿಸುವ ವ್ಯವಸ್ಥೆಯನ್ನು ಮಾಡಿತು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ರೈಲನ್ನು ಪ್ರಾರಂಭಿಸಿತು.
ಮಲೆನಾಡ ಮಡಿಲಾದ ಆನಂದಪುರ ರೈಲ್ವೆ ನಿಲ್ದಾಣ ಸುತ್ತಮುತ್ತಲ ಇತರ ಎಲ್ಲಾ ರೈಲ್ವೇ ನಿಲ್ದಾಣ ಗಳಿಗಿಂತ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟಿತು ಆದರೆ ಸರ್ಕಾರ ಕಳೆದ 5 ವರ್ಷದ ಈ ಕಡೆ ಎರಡನೇ ಪ್ಲಾಟ್ ಫಾರ್ಮ್ ಅನ್ನು ಸಹ ನಿರ್ಮಿಸಿತು ಆದರೆ ಎರಡನೇ ಪ್ಲಾಟ್ ಫಾರ್ಮ್ ಗೆ ಪ್ರಯಾಣಿಕರು ದಾಟಲು ಫ್ಲೈಓವರ್ ನ ವ್ಯವಸ್ಥೆಯನ್ನು ಮಾಡದೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವಂತೆ ಮಾಡಿದೆ!!
ಪ್ರತಿದಿನ ಸಾವಿರಾರು ಜನರು ಈ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿದ್ದು ಕೆಲವೊಂದು ಬಾರಿ 2ಪ್ಲಾಟ್ ಫಾರ್ಮ್ ಗೆ ಎರಡೂ ರೈಲುಗಳು ಒಟ್ಟಿಗೆ ಬರುವಂತಹ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರು ಮೊದಲನೇ ಪ್ಲಾಟ್ ಫಾರ್ಮ್ ನಿಂದ ಎರಡನೇ ಪ್ಲಾಟ್ ಫಾರ್ಮ್ ಗೆ ಹೋಗಲು ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ರೈಲ್ವೆ ಹಳಿಯ ಮೇಲೆ ಓಡಾಡಿಕೊಂಡು ಪ್ಲಾಟ್ ಫಾರ್ಮ್ ನ ದಾಟುವಂತಹ ಹೀನಾಯ ಪರಿಸ್ಥಿತಿಗೆ ಬಂದಿದ್ದಾರೆ.
ವೃದ್ಧರು,ಬಾಣಂತಿಯರು, ಅಂಗವಿಕಲರಿಗೆ ನಿಜವಾಗಲೂ ಕೂಡ ಈ ವ್ಯವಸ್ಥೆಯಿಂದ ಕಂಗೆಟ್ಟಿದ್ದಾರೆ ಚಿಕ್ಕ ಮಕ್ಕಳು ಸಹ ಪ್ಲಾಟ್ ಫಾರಂನ್ನು ದಾಟುವಂತಹ ಸಂದರ್ಭದಲ್ಲಿ ಅನೇಕ ಬಾರಿ ಎಡವಿ ಗಾಯ ಮಾಡಿಕೊಂಡಿದ್ದಾರೆ.
ಕೋಟ್ಯಾಂತರ ರೂ ವೆಚ್ಚಮಾಡಿ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ನಿರ್ಮಿಸಿದಂತಹ ಸರ್ಕಾರ ಫ್ಲೈಓವರ್ ನ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕರಿಗೆ ಹಾಗೂ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕೆಂದು ಸ್ಥಳೀಯರಾದ ಪವನ್ ಕುಮಾರ್ ಕಠಾರೆ ಆಗ್ರಹಿಸಿದ್ದಾರೆ
ಕೃಪೆ :✍️✍️✍️ಪವನ್ ಕುಮಾರ್ ಕಠಾರೆ