ಮಂತ್ರಿಗಾದಿ ರೇಸ್ ನಲ್ಲಿದ್ದಾರೆ ಶಿವಮೊಗ್ಗ ಶಾಸಕರು ಹಾಗಾದ್ರೆ ಯಾರಿಗೆ ಒಲಿಯಲಿದೆ, ಮಂತ್ರಿ ಭಾಗ್ಯ??
ಹೌದು ಕಳೆದ ಎರಡು ದಿನಗಳ ಕರ್ನಾಟಕ ರಾಜ್ಯ ಬಿಜೆಪಿಯಲ್ಲಾದ ರಾಜಕೀಯ ವಿದ್ಯಮಾನಕ್ಕೆ ಅನುಗುಣವಾಗಿ ಹೊಸ ಸಿಎಂ ಆಗಿ ಶ್ರೀ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು. ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ದಿಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲೇ ರಾಜ್ಯದಲ್ಲಿ ಮಂತ್ರಿಗಿರಿ ಆಕಾಂಕ್ಷಿಗಳು ಹಾಗೂ ಹಾಲಿ ಮಂತ್ರಿಗಳು ತಮ್ಮ್ ಸ್ಥಾನ ಉಳಿಸಿಕೊಳ್ಳುವ ಚಟುವಟಿಕೆ ಗರಿಗೆದರಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಹ ಮಂತ್ರಿಗಿರಿಗಾಗಿ ಪ್ರಬಲ ಆಕಾಂಕ್ಷಿಗಳಿದ್ದು ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.!!
ಹರತಾಳು ಹಾಲಪ್ಪ :
ಮೊದಲನೇದಾಗಿ ಸಾಗರ -ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ MSIL ಅಧ್ಯಕ್ಷರು, ಮಾಜಿ ಸಚಿವರು ಆದ ಹರತಾಳು ಹಾಲಪ್ಪ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಪ್ತ ವಲಯದಲ್ಲಿದ್ದು ಹಾಗೂ ಬಿ ಎಸ್ ಯಡಿಯೂರಪ್ಪನವರ ಆಪ್ತರು ಸಹ ಆಗಿದ್ದು, ಈಡಿಗ ಸಮುದಾಯದ ಪ್ರಬಲ ನಾಯಕರಾಗಿದ್ದು, ಈಗಾಗಲೇ ಸಚಿವರಾಗಿ ಅನುಭವ ಹೊಂದಿದ್ದು, ಮಲೆನಾಡ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತರುವ ಮೊದಲಿಗರು.
ಆರಗ ಜ್ಞಾನೇಂದ್ರ
ತೀರ್ಥಹಳ್ಳಿ-ವಿಧಾನ ಸಭಾ ಕ್ಷೇತ್ರದ ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಆದ ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು,ಹಾಗೂ ಮಲೆನಾಡ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು,ಹಾಗೂ ಸಂಘ ಪರಿವಾರದಲ್ಲಿ ಸಾಕಷ್ಟು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು ಸಹ ಒಮ್ಮೆಯೂ ಮಂತ್ರಿಸ್ಥಾನ ಒಲಿದಿಲ್ಲ.ಈ ಬಾರಿ ಸಚಿವಸ್ಥಾನ ಸಿಗುವುದೋ ಕಾದುನೋಡಬೇಕಾಗಿದೆ .
ಕುಮಾರ್ ಬಂಗಾರಪ್ಪ
ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮತ್ತೋರ್ವ ಶಾಸಕರಾದ ಸೊರಬ ಕ್ಷೇತ್ರ ಶಾಸಕರು ಹಾಗೂ ಮಾಜಿ ಸಚಿವರು ಶ್ರೀ ಕುಮಾರ್ ಬಂಗಾರಪ್ಪ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು.ಈಡಿಗ ಸಮುದಾಯದ ಪ್ರಭಾವಿ ಯುವ ನಾಯಕರಾಗಿರಲ್ಲಿ ಒಬ್ಬರು. ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನವರ ಪುತ್ರರಾಗಿದ್ದು, ಈ ಹಿಂದೆಯೂ ಸಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದ್ದು, ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ*✍️✍️✍️
WhatsApp group: https://chat.whatsapp.com/Fg3GgcyKcftDE2mITYSeEq