ಮಲೆನಾಡಿನಲ್ಲಿ ಹೆಚ್ಚುತ್ತಿರುವ ನೆಟ್ವರ್ಕ್ ಹೋರಾಟದ ಕಾವು!!
ಸಾಗರ :ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಹಲವಡೆ ಮೊಬೈಲ್ ನೆಟ್ವರ್ಕ್ ಎಂಬ ದಶಕಗಳ ಸಮಸ್ಯೆ ಬಗೆಹರಿಯದೆ ಈಗ ಹಳ್ಳಿಯ ಜನರು ದಿಕ್ಕು ತೋಚದೆ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆಗೆ ಬಂದಿದ್ದಾರೆ. ಸಾಗರ ತಾಲೂಕಿನ ಬಹುತೇಕ ಕಡೆಗೆ ನೆಟ್ವರ್ಕ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಇಂದಿನ ಆಧುನಿಕ ಜಗತ್ತಿನಲ್ಲಿ
ಸಹ ಸಂವಹನ ಅಸಾಧ್ಯವಾಗದೆ ಇದ್ದುದ್ದು ತುರ್ತು ಸಂದರ್ಭದಲ್ಲಿ ಕರೆ ಮಾಡಲಾಗದೆ ಪ್ರಾಣಕ್ಕೆ ಕುತ್ತು ತಂದುಒಡ್ದಿದ ನಿದರ್ಶನಗಳು ಮಲ್ನಾಡ್ನಲ್ಲಿ ಕಂಡು ಬಂದಿದೆ.
ಇಂಥಹ ಸಮಸ್ಯೆಗಳ ವಿರುದ್ಧ ಸಿಡಿದೆದ್ದಿದ್ದಾರೆ ಈಗ ಸಾಗರ ತಾಲೂಕು, ಎಸ್, ಎಸ್ ಬೋಗ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು.!!!
ನೆಟ್ವರ್ಕ್ ಸಂಬಂಧಪಟ್ಟಂತೆ ಮೊದಲಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಊರಿನ ಗ್ರಾಮಸ್ಥರು ಸಭೆ ಸೇರಿ ಸಮಿತಿ ರಚನೆ ಮಾಡಿ ಹೋರಾಟದ ರೂಪುರೇಷವನ್ನು ಸಿದ್ದಪಡಿಸಿ ಹೋರಾಟಕ್ಕೆ ಸಿದ್ದರಾಗಿದ್ದಾರೆ.
ಮಲೆನಾಡಿನಲ್ಲಿ ನೆಟ್ವರ್ಕ್ ಹೋರಾಟದ ಕಾವು..ಹೆಚ್ಚಾಗಿದ್ದು !! ಹೌದು, ಮಲೆನಾಡು ಎಂದ ತಕ್ಷಣವೇ ನಮಗೆ ನೆನಪಾಗುವುದು, ಅಲ್ಲಿಯ ಸ್ವಚ್ಚಂದ ಹಸಿರ ಪರಿಸರ ಆದರೇ ಅಲ್ಲಿಯ ಜನರ ಬದುಕು ಹೇಳ ತೀರದು. ಯಾಕೆಂದರೆ ಅಲ್ಲಿಯ ನೆಟ್ವರ್ಕ್ ಸಮಸ್ಯೆ. ಮುಖ್ಯವಾಗಿ ಸಾಗರ ತಾಲೂಕು ಕರೂರು ಹೋಬಳಿಯ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅಲ್ಲಿಯ ಮಕ್ಕಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಯಾವುದೇ ಅನಾರೋಗ್ಯ, ಅಪಘಾತ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ನೆಟ್ವರ್ಕ್ ಹುಡುಕಿ ಕಿಲೋಮೀಟರ್ ಅಲೆಯುವ ಪರಿಸ್ಥಿತಿ ಎದುರಾಗಿದೆ, ಮಾನ್ಯ ಪ್ರಧಾನ ಮಂತ್ರಿಗಳ "ಡಿಜಿಟಲ್ ಇಂಡಿಯಾ" ಯೋಜನೆಯಿಂದ ಈ ಭಾಗದ ಜನರು ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಹಾಗೂ ನಿತ್ಯ ನೆಟ್ವರ್ಕ್ ಕಿರಿಕಿರಿಗೆ ಯಾವಾಗ ಮುಕ್ತಿ ಎಂದು ಜನ ಬೇಸತ್ತು ಹೋಗಿದ್ದಾರೆ ಎಂದು ಸಮಿತಿ ಹೋರಾಟಗಾರರು ಮಾಹಿತಿ ತಿಳಿಸಿದರು. ಆದ ಕಾರಣದಿಂದ ಎಸ್. ಎಸ್ ಭೋಗ್ ಗ್ರಾಮ ಪಂಚಾಯತಿ ಎದುರು ನೆಟ್ವರ್ಕ್ ಹೋರಾಟ ಸಮಿತಿಯ ಯುವಕರು ಒಂದುಗೂಡಿ ಮೊಬೈಲ್ ಟವರ್ ನಿರ್ಮಿಸಿ ಕೊಡುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ಮಾಡಿದರು. ಹಾಗೂ ಮಾನ್ಯ ಶಾಸಕರಿಗೆ, ಸಂಸದರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿ ಪತ್ರವನ್ನು ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು ಈ ಸಂದರ್ಭದಲ್ಲಿ ಹೋರಾಟದ ಮುಖ್ಯ ಸದಸ್ಯರಾದ ಟೈಬು ರಾಘವೇಂದ್ರ, ಆದರ್ಶ್ ಕಪ್ಪದೂರು, ಚರಣ್ ಹಾಬಿಗೆ, ವಿನಯ್ ಮೂರ್ತಿ, ಪ್ರಶಾಂತ್, ಚೇತನ್, ಪ್ರವೀಣ್, ದಿನೇಶ್, ಪ್ರದೀಪ್, ಅರುಣ್, ಮಂಜು, ಸುಜಿತ್, ಶಶಿಕಾಂತ್, ಸುದೇಶ್, ಜೊತೆಗೆ ಗ್ರಾಮಸ್ಥರು ಪಾಲ್ಗೊಂಡಿದ್ದರು, |
Tags:
ಮಲೆನಾಡು