ಸರ್ಕಾರಿ ಪ್ರೌಢ ಶಾಲೆ ಮಾರುತಿಪುರ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿ ವಿಕೃತಿ..?
ಮಾರುತಿಪುರ: 2021-22 ಶೈಕ್ಷಣಿಕ ಸಾಲಿನ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲು ಒದಗಿಸಿದ್ದ 300 ಹೆಚ್ಚು ಸಮವಸ್ತ್ರಗಳು ಬೆಂಕಿಗೆ ಆಹುತಿ !
ಹೊಸನಗರ ತಾಲೂಕು, ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳ ಸಮವಸ್ತ್ರನ್ನ ಇಟ್ಟಿದ್ದ ಕೊಠಡಿಗೆ ಬೆಂಕಿ ಬಿದ್ದು ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು,ಶಾಲಾ ಮುಖ್ಯೋಪಾಧ್ಯರು ಹಾಗೂ ಪೋಷಕರು ಆತಂಕಗೊಂಡಿದ್ದಾರೆ. ಎಂದಿನಂತೆ ಶಾಲಾ ಮುಖ್ಯೋಪಾಧ್ಯರು ಇಂದು ಗೇಟ್ ಬೀಗ ತೆಗೆದು ನೋಡಿದಾಗ ಸುಟ್ಟ ವಾಸನೆ ಕೊಠಡಿಯಿಂದ ಬರುದನ್ನ ಕಂಡು ನೋಡಿದಾಗ ಸಂಪೂರ್ಣ ಸಮವಸ್ತ್ರ ಬೂದಿಯಾಗಿದ್ದು. !!
ಈ ಸಂಬಂಧ ಶಾಲಾ ಎಸ್ಡಿಎಂಸಿ ಸದಸ್ಯರು ಊರಿನ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನೆಡಿಸಿ, ಘಟನೆ ನೆಡೆಯಲು ಸರಿಯಾದ ಕಾರಣ ತಿಳಿಯಲು ಹಾಗೂ ಬೆಂಕಿಗಾಹುತಿಯಾದ ಪ್ರಕರಣವನ್ನು ಹೊಸನಗರ ಪೊಲೀಸ್ ಠಾಣಾಗೆ ದೂರನ್ನ ನೀಡಿದ್ದು, ಇಂತಹ ಹೇಯ ಕೃತ್ಯ ಎಸಗಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಊರಿನ ಸಾರ್ವಜನಿಕರು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.