ಚಿಕ್ಕ ಮಗಳೂರು :ಮಲೆನಾಡಲ್ಲಿ ಹುಟ್ಟಿ ಬೆಂಗಳೂರುನಲ್ಲಿ.ಬೆಳೆದು ಕರ್ನಾಟಕ ರಂಗಭೂಮಿ ಕಲಾವಿದನಾಗಿ ತಮ್ಮ ಮನೋಜ್ಞ ಅಭಿನಯದಿಂದ ರಂಗಭೂಮಿಯಲ್ಲಿ ವಿಶೇಷಖ್ಯಾತಿಗಳಿಸಿ ಕನ್ನಡಸಿನಿ ರಂಗ ಪ್ರವೇಶ ಮಾಡಿ ಹತ್ತು ಹಲವು ಕನಸು ಕಂಡಿದ್ದ ನಟನ ಅಕಾಲಿಕ ಮರಣ ಕನ್ನಡ ಸಿನಿಮಾ ಲೋಕಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದಿದ್ದಾರೆ ಸಿನಿತಾರ ಗಣ್ಯರು.
ನಾನು ಅವನಲ್ಲ ಅವಳು ಎಂಬ ಸಿನಿಮಾದ ಅದ್ಭುತ ನಟನೆಗೆ ಕನ್ನಡ ಪ್ರಥಮ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಪ್ರತಿಭಾವಂತ ನಟ.
ದಿನಾಂಕ 12 ಶನಿವಾರದಂದು ಕೊರೊನ ಪೀಡಿತ ಕುಟುಂಬಗಳಿಗೆ ಆಹಾರ ಕಿಟ್ ನೀಡಿ ಸ್ನೇಹಿತ ನವೀನ್ ಜೊತೆಗೆ ಬೈಕ್ ನಲ್ಲಿ ಬರುವಾಗ ಜೆಪಿ ನಗರ 7ನೇ ಹಂತ ರಸ್ತೆಯಲ್ಲಿ ಅಚಾನಕ್ ಲೈಟ್ ಕಂಬಕ್ಕೆ ಬೈಕ್ ಅಪ್ಪಳಿಸಿದ ಪರಿಣಾಮ ತಲೆ ಬುರುಡೆಗೆ ಗಂಭೀರ ಪೆಟ್ಟಾಗಿದ್ದು ತಕ್ಷಣ ಹತ್ತಿರದ ಅಪೋಲೋ ಆಸ್ಪತ್ರೆಗೆ ದಾಖಲೆ ಮಾಡಿದರೂ ಮೆದುಳಿಗೆ ತೀವ್ರತರ ಪೆಟ್ಟಾಗಿದ್ದು, ರಕ್ತಸ್ರಾವಾಗಿದ್ದು ಪರಿಣಾಮ ಬ್ರೈನ್ ಫೇಲ್ಯೂರ್ ಆಗಿದೆ ಎಂದೂ ವೈದ್ಯರಿಂದ ದೃಢ.ನಂತರ ಮೂರು ನಾಲ್ಕು ಪರೀಕ್ಷೆಗಳ ನೆಡೆದ ನಂತರ ವೈದ್ಯರಿಂದ ಬ್ರೈನ್ ಡೆಡ್ ಮಾಹಿತಿ ಬಹಿರಂಗ, ಮುಗಿಲು ಮುಟ್ಟಿದ ಸ್ನೇಹಿತರ ಅಭಿಮಾನಿಗಳ ಆಕ್ರಂದನ, ಕೊನೆಗೂ ಫಲಿಸಿದ ಅಭಿಮಾನಿಗಳ ಹಾರೈಕೆಗಳು.
ಬ್ರೈನ್ ಡೆಡ್ ಪರಿಣಾಮ ದೇಹದ ಅಂಗಾಂಗಗಳು, ಕಾರ್ಯನೀರ್ವಹಿಸುತಿದ್ದು, ನಾರ್ಮಲ್ ಡೆತ್ ಆಗುವ ಮುನ್ನ ವ್ಯಕ್ತಿಯ ಅಂಗಾಂಗಳನ್ನು ಮಾತ್ರ ಉಪಯೋಗಬರುವುದೆಂದು ವೈದ್ಯರ ಹೇಳಿಕೆ ಅನ್ವಯ ಸರ್ಕಾರದ ಅಡಿಯಲ್ಲಿನ ಜೀವನ ಸಾರ್ಥಕ ತಂಡದ ಪರಿಶೀಲನೆ ನಂತರ ಮುಂದಿನ ಪ್ರಕ್ರಿಯೆ ನೆಡೆಯಲಿದೆ.
ಬದುಕುಉಳಿಯುವ ನೀರಿಕ್ಷೆ ತೀರಾ ಕಡಿಮೆ ಇರುವ ಕಾರಣ ವಿಜಯ್ ಅವರ ಸಾಮಾಜಿಕ ಕೆಲಸದ ಪ್ರತಿಬಿಂಬದಂತೆ ಅವರ ದೇಹದ ಅಂಗಾಂಗ ದಾನ ಮಾಡುವುದಾಗಿ ಕುಟುಂಬ ಸದಸ್ಯರು ತೀರ್ಮಾನ ಮಾಡಿದರು.
ಇಂದು ಬೆಳಿಗ್ಗೆ ರವೀಂದ್ರಕಲಾ ಕ್ಷೇತ್ರದಲ್ಲಿ ಪಾರ್ಥಿವಶರೀರದ ಕೊನೆ ದರ್ಶನಕ್ಕೆ ಸರ್ಕಾರ ಕಡೆಯಿಂದ ವ್ಯವಸ್ಥೆ ಮಾಡಲಾಗಿದ್ದು ಸಿನಿ ರಂಗ, ರಂಗಭೂಮಿ ಕಲಾವಿದರು, ರಾಜಕೀಯ ಗಣ್ಯರು ಅಗಲಿದ ನಟನ ಅಂತಿಮದರ್ಶನ ಪಡೆದರು.ಬೆಂಗಳೂರುನಿಂದ ಪಾರ್ಥಿವ ಶರೀರವನ್ನ ಹುಟ್ಟೂರು ಪಂಚನಹಳ್ಳಿಗೆ ಕೊಂಡುಒಯ್ಯಲಾಗಿದ್ದು ಹುಟ್ಟೂರು ಚಿಕ್ಕಮಗಳೂರು ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಸ್ನೇಹಿತ, ಆಪ್ತ ರಘು ಅವರ ತೋಟದ ಜಾಗದಲ್ಲಿ ಇಂದು ಅಂತ್ಯಕ್ರಿಯೆ ನೆಡಯಲಿದೆ ಎಂದಿದ್ದಾರೆ.
ಈ ಸಂಬಂಧ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಅಗಲಿದ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವಂತೆ ಕೋರಿದ್ದಾರೆ...