ಸಾಗರ: ನಿಸರ್ಗ ಯೋಗ ಕೇಂದ್ರದಿಂದ ಯೋಗ ದಿನದ ಸಂಭ್ರಮ

ಸಾಗರ: ನಿಸರ್ಗ ಯೋಗ ಕೇಂದ್ರದಿಂದ ಯೋಗ ದಿನದ ಸಂಭ್ರಮ!!.




 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಾಗರದ ಗಾಂಧಿ ನಗರದ *"ನಿಸರ್ಗ ಯೋಗ ಕೇಂದ್ರ"* ದಿಂದ ಆಚರಿಸಲಾಯಿತು. ಪ್ರಸ್ತುತ ಲಾಕ್ಡೌನ್ ಹಾಗೂ  ಕೊರೋನ  ಸಂಕಷ್ಟ ಕಾಲದಲ್ಲಿ ಈಗಾಗಲೇ ಎರಡು ತಿಂಗಳಿನಿಂದ ಯೋಗಾಸಕ್ತರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಆನ್ಲೈನ್ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ನಿಸರ್ಗ ಯೋಗ ಕೇಂದ್ರದ ಕಾರ್ಯವು ಶ್ಲಾಘನೀಯ. ಮಾಧ್ಯಮಗಳ ದುರುಪಯೋಗ ಮತ್ತು ಸಮಯದ ದುರುಪಯೋಗವನ್ನೂ ಮಾಡಿಕೊಳ್ಳುತ್ತಿರುವ ಈ ಆಧುನಿಕ ಬದುಕಿನ ಸಂದರ್ಭದಲ್ಲಿ ಅಂತರ್ಜಾಲ ಮಾಧ್ಯಮಗಳನ್ನೂ ಸಮಯವನ್ನೂ ಬದ್ಧತೆಯಿಂದ ಯೋಗ್ಯ ಕ್ರಮದಲ್ಲಿ ಉಪಯೋಗಿಸಿಕೊಳ್ಳುತ್ತಿರುವ ಯೋಗ ಕೇಂದ್ರದವರು ಅತ್ಯುತ್ತಮ ಪ್ರಯತ್ನವನ್ನು ನಡೆಸಿಕೊಂಡು ಬರುತ್ತಿದ್ದು, ಯೋಗ ದಿನದ ವಿಶೇಷತೆಯ ಸಂದರ್ಭದಲ್ಲಿ






 ನಿಸರ್ಗ ಯೋಗ ತಂಡವು ಇಪ್ಪತ್ತೊಂದು ಬಾರಿ ಸೂರ್ಯ ನಮಸ್ಕಾರ ಮಾಡಿದರು. 21-21-21 ವಿಶೇಷತೆಯಲ್ಲಿ ಸಂಭ್ರಮಿಸಿದರು. ನಂತರ ಕಾರ್ಯಕ್ರಮದಲ್ಲಿ *ಯೋಗ ಶಿಕ್ಷಕಿ ಶ್ರೀಮತಿ ಜ್ಯೋತಿ ಶಶಿಕಾಂತ್* ಅವರು ಮಾತನಾಡಿ - 'ಯೋಗ ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಲ್ಲ ಯೋಗ ನಿರಂತರ ಪ್ರಕ್ರಿಯೆ. ನಾವು ಯೋಗ ಪ್ರಾಣಾಯಾಮ ಧ್ಯಾನ ಇವುಗಳನ್ನು ನಮ್ಮ ಜೀವನದಲ್ಲಿ ದಿನಚರಿಯನ್ನು ಮಾಡಿಕೊಳ್ಳುವುದರ ಮೂಲಕ ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು  'ಯೋಗ ಯುಕ್ತ ರೋಗಮುಕ್ತ ದೇಶ' ವನ್ನು ಕಟ್ಟೋಣ ಎಂದು ಕರೆಕೊಟ್ಟರು. ನಿಸರ್ಗ ಯೋಗ ಕೇಂದ್ರದ ಸದಸ್ಯರು ಮತ್ತಿತರರು ಇದ್ದರು.

Post a Comment

Previous Post Next Post