ಡಿಜಿಟಲ್ ಕ್ರಾಂತಿ ಘೋಷಣೆ ಆದ್ರೂ ತಪ್ಪದ ಮಲೆನಾಡ ನೆಟ್ವರ್ಕ್ ಗೋಳು!ಕೈಗೆಟುಕದ ಮಲ್ನಾಡ್ ಮರೀಚಿಕೆ....
ಮೇಲಿನ ಫೋಟೋವನ್ನ ನೋಡಿ ಕೂಡಲೇ ಊರಿನ ಯುವಕ 'ವಿನಾಯಕ ವಾರಂಬಳ್ಳಿ' ವಿವರಿಸಿದ ಚಿತ್ರಣ ಹೀಗಿದೆ ನೋಡಿ....ಹೀಗೆ ಬೆಳಗ್ಗೆ ಒಬ್ಬರಿಗೆ ಔಷದ್ದಿ ಬೇಕು ಅಂತ ಹೇಳಿದ್ರು ಕೊಡೋಕೆ ಅಂತ ನಡ್ಕೊಂಡ್ ಹೋಗ್ತಾ ಇದ್ದಾಗ ಈ ಗುಡಿಸಲು ಕಣ್ಣಿಗೆ ಬಿತ್ತು,ಈ ಗುಡಿಸಲು ಯಾಕೆ ಹಾಕಿದ್ದಾರೆ ಅಂತ ದೂರದಿಂದಲೇ ಗುಡಿಸಲು ನೋಡಿದಾಗ ಗೊತ್ತಾಯ್ತು, ಕುತೂಹಲ ಆಗಿ ಹತ್ತಿರ ಹೋಗಿ ನೋಡಿದೆ,
ಗುಡಿಸಲು ಹತ್ತಿರ ಹೋಗಿ ನೋಡಿದೆ ನಮ್ಮೂರಿನ ಅಕ್ಕ ಗುಡಿಸಲಿನ ಒಳಗೆ ಕೂತಿದ್ಲು.
(ಅವಳು ಈ ಹಿಂದೆ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದಳು,ಕರೋನ ಇದ್ದಿದ್ದರಿಂದ ಕಳೆದ ವರ್ಷನೆ ನಮ್ಮೂರು ನನ್ನ ಹೆಮ್ಮೆ ವಾರಂಬಳ್ಳಿ ಊರಿಗೆ ಬಂದಿದ್ಲು)
ಏನ್ ಅಕ್ಕ ಇಲ್ಲಿ ಬಂದು ಕೂತಿದ್ದಿಯ ಅಂತ ಕೇಳ್ದೆ.
ಇಲ್ಲ ಕಣೋ #ವರ್ಕ್_ಫ್ರಮ್ ಹೋಮ್ ಅಂದ್ಲು.
ಇದು ಖಂಡಿತ #ನೆಟ್ವರ್ಕ್ ದೆ ಸಮಸ್ಯೆ ಅಂತ ಗೊತ್ತಾಯ್ತು.
ಒಮ್ಮೆಲೇ ಬೇಜಾರ ಆಯಿತು ಆದ್ರೆ ಮಾಡುವುದೇನು?
ಇದು ನಮ್ ಊರಿನ ನೆಟ್ವರ್ಕ್ ಸಮಸ್ಯೆ,ಸುಮಾರು ಒಂದು ಕಿಲೋಮೀಟರ್ ಆಗುತ್ತೆ ಮನೆಯಿಂದ ಈ ಗುಡಿಸಲಿಗೆ ಅವಳಿಗೆ ಪ್ರತಿ ದಿನ ಬರೋಕೆ,
ಸುತ್ತಮುತ್ತ ಒಂದು ಮನೆಯಿಲ್ಲ,
ಜೊತೆಗೆ ಮಧ್ಯಾಹ್ನ ಊಟಕ್ಕೆ ಮತ್ತೆ ಮನೆಗೆ ಬಂದು ಹೋಗುವುದು,ಸಂಜೆ ಸುಮಾರು 7ಗಂಟೆಯ ಹೊತ್ತಿಗೆ ಒಬ್ಬಳೇ ಮನೆಗೆ ನಡೆದುಕೊಂಡು ಹೋಗುವುದು,
ಭಯ ಅಗಲ್ವಾ? ಕೇಳಿದೆ
ಆಗುತ್ತೆ ಏನ್ ಮಾಡೋದು ಅಂತ ಬೇಸರದಿಂದ ಉತ್ತರ ಕೊಟ್ಟಳು,
ಇದು ಇವಳ ದಿನಚರಿ.
ಈಗ ಲಾಕ್ಡೌನ್ ಇರುವುದರಿಂದ ಪಕ್ಕದ ಊರಿಗೆ ಕೂಡ ಹೋಗೋ ಹಾಗಿಲ್ಲ.
ಇದು ಒಬ್ಬರ ಕಥೆ ಆದ್ರೆ,ಹೀಗೆ ಒಬ್ಬಬ್ಬರದ್ದು ಒಂತರ ಮರುಗುವ ಕಥೆ ಇದೆ.
ಒಬ್ಬರದ್ದು ಆರೋಗ್ಯ ಸಮಸ್ಯೆ ಆದಾಗಲೂ ಕೂಡ ಈ ನೆಟ್ವರ್ಕ್ ಸಮಸ್ಯೆ ಎದುರಿಸಿದ್ದು ಇದೆ
ಪುಣ್ಯ ಜೀವ ಉಳಿಯಿತು ಅನ್ನೋದು ಖುಷಿ ಸಂಗತಿ.
ಹೇಳಿಕೊಳ್ಳುವುದು ಯಾರ ಬಳಿ?
ಇನ್ನೆಷ್ಟು ಪ್ರಯತ್ನ ಮಾಡುವುದು ಅಂತ ನಮ್ಮ ಊರಿನ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು?
#ನಮ್ಮೂರ_ಗೋಳು_ಕೆಳೋರ್ಯಾರು ಅಂತಿದ್ದಾರೆ, ಊರ ಉತ್ಸಾಹಿ ಯುವಕ ವಿನಾಯಕ
ಇಂಥ ಅನೇಕ ಮನಕಲುಕುವ ಕಥೆಗಳ ಗೋಳಿನ ಕುರಿತು ವರ್ಷದ ಹಿಂದೆ ಊರಿನ ಯುವಕ ವಿನಾಯಕ ಪ್ರಧಾನಿಯವರಿಗೂ ಪತ್ರ ಬರೆದಿದ್ದು ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು ಸ್ಥಳೀಯ ಆಡಳಿತ, ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗದೆ, ಪ್ರಧಾನಿ ಸೂಚನೆ ಕೇವಲ ಸೂಚನೆ ಆಗಿಯೇ ಉಳಿದಿದೆ...ಅಧಿಕಾರಿಗಳು ಯಾವುದೇ ರೀತಿಯ ಕಾರ್ಯಪ್ರವೃತರಾಗದೆ ಅಸಡ್ಡೆ ತೋರಿಸಿದ್ದಾರೆ
ಪ್ರಧಾನಿಯವರ ಡಿಜಿಟಲ್ ಭಾರತ ಕನಸು ಕೇವಲ ನಗರ ಪ್ರದೇಶಕ್ಕೆ ಸೀಮಿತವೇನೋ ಅನ್ನುವ ಮನೋಭಾವನೆ ಹಳ್ಳಿಗಳರಲ್ಲಿ ವ್ಯಕ್ತವಾಗಿದೆ.
ಇತ್ತ ಸ್ಥಳೀಯ ಜನಪ್ರತಿನಿಧಿಗಳು ಸಹ ಮಲೆನಾಡ ನೆಟ್ವರ್ಕ್ ಸಮಸ್ಯೆ ಅಷ್ಟೇನೂ ತಲೆ ಕೆಡೆಸಿಕೊಳ್ಳುವಂತೆ ಕಾಣಿಸುತ್ತಿಲ್ಲ, ಸಮಸ್ಯೆ ಇದ್ದರೂ ಗೊತ್ತಿದ್ದರೂ ಜಾಣ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೂ ಕೊರೊನ ಲಾಕ್ಡೌನ್ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ, ಆನ್ಲೈನ್ ಕ್ಲಾಸ್ ಒಂದು ಗಗನ ಕುಸುಮವೇನೋ ಅನ್ನುವ ಮಟ್ಟಿಗೆ ಬಾಸವಾಗಿದೆ.
ಲಾಕ್ ಡೌನ್ ತಂದ ಆಪತ್ತಿಗೆ ಬಹುತೇಕ ಬೆಂಗಳೂರು ಮತ್ತಿತರ ಊರುಗಳಲ್ಲಿ ಕೆಲಸ ನಿರ್ವಸುತ್ತಿದ್ದವರು ಕಂಪನಿಗಳ ವರ್ಕ್ ಫ್ರಮ್ ಹೋಂ ಒಪ್ಪಿಗೆ ನೀಡಿ ಊರಿಗೆ ಬಂದು.ಈಗ ಕೆಲಸ ನಿರ್ವಹಿಸಲಾಗದೆ ಸಂಕಷ್ಟಕ್ಕೆ ಸಿಲುಕಿ ಇದ್ದ ಕೆಲಸವನ್ನ ಕಳೆದುಕೊಳ್ಳುವ ಭೀತಿಯಲ್ಲಿ ಇರುವರು.
ಲಾಕ್ ಡೌನ್ ಸಮಯ ಇನ್ನಾದರೂ ಅಧಿಕಾರಿಗಳು, ಹಾಗೂ ಆಡಳಿತ ವರ್ಗ ಎಚ್ಚೆತ್ತು, ಮಲೆನಾಡ ನೆಟ್ವರ್ಕ್ ಸಮಸ್ಯೆಯತ್ತ ಮುಖಮಾಡಿ ನೋಡುವುದೋ ಕಾದುನೋಡಬೇಕು.