ಮಲೆನಾಡ ಯುವ ಉದ್ಯಮಿಯ ವಿನೂತನ ಪ್ರಯೋಗ !!ದೇಸಿ ಬಾಳೆ'ದಿಂಡಿಗೆ ಬೆಂಗಳೂರಿನಲ್ಲಿ ಅಪಾರಮನ್ನಣೆ !!!
ಈಗ ಅಡುಗೆಗೆ ಸಿದ್ದ.
"ಆರೋಗ್ಯ ಜೀವನಕ್ಕೆ ನೈಸರ್ಗಿಕ ಆಹಾರ "
ಎಂಬ ಧ್ಯೇಯವಾಕ್ಯದೊಂದಿಗೆ.....
ಹಿರಿಯರೆಲ್ಲಾ ಹೇಳುತ್ತಾರೆ - ಬಾಳೆದಿಂಡು ಆಗ್ಗಾಗೆ ಅಡುಗೆ ಪದಾರ್ಥವಾಗಿ ತಿನ್ನುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ ಹಾಗು ದೇಹವನ್ನು ತಂಪಾಗಿಸರಿಸುತ್ತದೆ. ಒತ್ತಡದ ನಗರ ಜೀವನದಲ್ಲಿ ಬಾಳೆದಿಂಡನ್ನು ಕತ್ತರಿಸಿ ಮತ್ತು ನಾರು ತೆಗೆದು ಅಡುಗೆ ಮಾಡಲು ಸ್ವಲ್ಪ ಕಷ್ಟವೆಂದು ಬಾಳೆದಿಂಡಿನ ಅಡುಗೆ ಮಾಡುವುದು ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಮೂಲದಿಂದ ಬಂದು ಬೆಂಗಳೂರು ನಗರದಲ್ಲಿ ವಾಸಿಸಿರುವ ನವೀನ್ ಹೊಸ ಯಶಸ್ವೀ ಉದ್ಯಮವನ್ನು ಪ್ರಾರಂಭಿಸಿದ್ದಾರೆ. NGV ನಾಚುರಲ್ಸ್ ಎಂಬ ಸಂಸ್ಥೆ ಪ್ರಾರಭಿಸಿ 'ರೆಡಿ ಟು ಕುಕ್ ' [RTO]ಬಾಳೆ ದಿಂಡನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದ್ದಾರೆ.
ಅಡುಗೆಗೆ ಯೋಗ್ಯವಾದ ಬಾಳೆ ಮರವನ್ನು ಬೇರೆ ರಾಜ್ಯಗಳಿಂದ ತರಿಸಿ, ಸಂಪೂರ್ಣ ಯಂತ್ರ ಗಳ ಮೂಲಕ ಪಲ್ಯಾ,ಮೊಸರುಬಜ್ಜಿ ಮತ್ತು ಇತರೆ ಪದಾರ್ಥಗಳನ್ನೂ ಮಾಡಲು ಅನುಕೂಲ ವಾಗುವಂತೆ ಕತ್ತರಿಸಿ, ನಾರನ್ನು ತೆಗೆದು ಆಹಾರ ಗುಣಮಟ್ಟದ ಪ್ಯಾಕೆಟ್ ಗಳಲ್ಲಿ ರಿಟೇಲ್ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದ್ದಾರೆ.
ಬಾಳೆದಿಂಡು ಮೂತ್ರಕೋಶದ ಕಲ್ಲು ನಿವಾರಣೆ, ಸಕ್ಕರೆ ಕಾಯಿಲೆಗೆ, ದೇಹದ ತೂಕ ಇಳಿಸಲು ಮತ್ತು ಮಲಬದ್ಧತೆ ನಿವಾರಣೆಗೆ ಅತ್ಯಂತ ಸಹಾಯಕಾರಿ ಗುಣಗಳನ್ನು ಹೊಂದಿದೆ.
ಮತ್ತೊಂದು ರುಚಿಕರ ಹಾಗು ಅಡುಗೆಗೆ ತಯಾರುಗೊಳಿಸಲು ಕಷ್ಟಕರವಾದ ಹಲಸಿನ ಗುಜ್ಜೆಯನ್ನು ರೆಡಿ ಟು ಕುಕ್ ಆಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಇದು ಬೆಂಗಳೂರಿಗರ ಅಚ್ಚುಮೆಚ್ಚಿನ ಆಹಾರ ಪದಾರ್ಥವಾಗಿರುವುದು ಕಂಪನಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಆರೋಗ್ಯ ಜೀವನಕ್ಕೆ ನೈಸರ್ಗಿಕ ಆಹಾರ’ ಎಂಬ ಘೋಷ ವಾಕ್ಯದೊಂದಿಗೆ, ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಉದ್ಯಮ ಈಗಾಗಲೇ ಬೆಂಗಳೂರು, ಮಂಗಳೂರು ಮತ್ತು ಚೆನ್ನೈ ನಗರದ ಹಲವಾರು ಹೋಟೆಲ್ ಹಾಗು ಕಾಲೇಜು ಹಾಸ್ಟೆಲ್ ಗಳಲ್ಲಿ ದಿನನಿತ್ಯದ ಅಡುಗೆಗೆ ಬಳಸುತ್ತಿದ್ದಾರೆ.
ನೂರಾರು ಹೋಟೆಲ್ ಗಳು ಹಾಗು ಹಲವಾರು ಕಾಲೇಜು ಹಾಸ್ಟೆಲ್ ಗಳಲ್ಲಿ ದಿನನಿತ್ಯದ ಅಡುಗೆಗೆ NGV ನಾಚುರಲ್ಸ್ ಸಂಸ್ಥೆಯ ಉತ್ಪನ್ನವನ್ನೇ ಬಳಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9945577599