ಮಾರುತಿಪುರ:ಲಾಕ್ ಡೌನ್ ಗೆ ಉತ್ತಮ ಸ್ಪಂದನೆ

ತಾಲೂಕಿನ ಎರಡನೇ ದೊಡ್ಡ ಗ್ರಾಮ ಪಂಚಾಯಿತಿ"ಮಾರುತಿಪುರ ಪಂಚಾಯತ್ " ವ್ಯಾಪ್ತಿಯಲ್ಲಿ ಲಾಕ್ಡೌನ್ ಗೆ ಉತ್ತಮ ಜನಸ್ಪಂದನೆ !!!

ಮಾರುತಿಪುರ :ಹೊಸನಗರ ತಾಲೂಕಿನ ಎರಡನೇ ಅತೀದೊಡ್ಡ ಪಂಚಾಯಿತಿಲ್ಲೊಂದಾದ ಮಾರುತಿಪುರ ವ್ಯಾಪ್ತಿಯಲ್ಲಿ, ಸಂಪೂರ್ಣಲಾಕ್ ಡೌನ್ಗೆ  ಉತ್ತಮ ಜನಸ್ಪಂದನೆ ವ್ಯಕ್ತವಾಗಿದೆ.. 
ಸದಾ ಒಂದಿಲ್ಲೊಂದು ಕಾರಣಗಳಿಂದ ರೈತರಿಂದ ಗಿಜಿ ಗುಡುತ್ತಿದ್ದ ಕಳೂರು ಪ್ರಾಥಮಿಕ ಸಹಕಾರಿ ಸಂಘ ಹಾಗೂ ಪಂಚಾಯಿತಿ ಕಚೇರಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದವು..

ಕೊರೊನ ತಡೆಗಟ್ಟುವಲ್ಲಿ ಸ್ಥಳೀಯ ಪಂಚಾಯತ್ ಆಡಳಿತ ವರ್ಗ, ಹಾಗೂ ಆರೋಗ್ಯ ಇಲಾಖೆ ಹಳ್ಳಿಯ ಮೂಲೆ-ಮೂಲೆಗಳಲ್ಲಿ  ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ಹಾಗೂ ಪಂಚಾಯತ್ ವ್ಯಾಪ್ತಿಯ ಅಂಗಡಿ, ಮುಂಗಟ್ಟು, ನ್ಯಾಯಬೆಲೆ ಅಂಗಡಿಗಳಲ್ಲಿ  ಈಗಾಗಲೇ ಕೊರೊನ  ಜಾಗೃತಿ ನಾಮಫಲಕವನ್ನ ಅಳವಡಿಸಿದ್ದು, ಹೊರ ಊರು, ಜಿಲ್ಲೆಗಳಿಂದ ಬಂದ ಊರಿನವರು ಪ್ರಾಥಮಿಕ ಆರೋಗ್ಯಕೇಂದ್ರ ಮಾರುತಿಪುರದಲ್ಲಿ ಕೊರೊನ ತಪಾಸಣೆ ಮಾಡಿಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ ವೈರಸ್ ಹರಡುವಿಕೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ  ಜನರ ಸಹಕಾರವೂ ಸಹ ಅತ್ಯಗತ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಪಂಚಾಯತ್ ಅಭಿವೃದ್ಧಿ  ಅಧಿಕಾರಿಗಳು ಮನವಿ ಮಾಡಿದ್ದಾರೆ.....

ಪಂಚಾಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ  ಪಡಿತರವನ್ನ ದಿನಾಂಕಕ್ಕೆ  ಅನುಗುಣವಾಗಿ ಊರುಗಳಿಗೆ ಕ್ರಮವಾಗಿ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ... 

ಜನರಿಗೆ ಲಾಕ್ಡೌನ್ ನಿಂದ ಔಷಧಿಗಳು ಸಿಗದೇ ತೊಂದರೆಗೆ ಒಳಗಾಗಿರುವವರು ಪಂಚಾಯಿತಿಯನ್ನ ಸಂಪರ್ಕ ಮಾಡಿ, ಬೇಕಾದ ಔಷಧಿಗಳನ್ನ ತರಿಸಿಕೊಡುವ ವ್ಯವಸ್ಥೆಯನ್ನ  ಮಾಡಲಾಗಿದ್ದು ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಲು ಪಂಚಾಯತಿಯ ಸದಸ್ಯರು, ಅಧ್ಯಕ್ಷರು ತಿಳಿಸಿದ್ದಾರೆ.....

ಕೊರೊನ ತಡೆಗಟ್ಟುವ ನಿಟ್ಟಿನಲ್ಲಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸದಸ್ಯರ ಕೆಲಸ ಅತೀ ಮುಖ್ಯವಾಗಿರುವುದು, ಎಂಬುದು ಜನರ ಅಭಿಪ್ರಾಯವಾಗಿದೆ...... 

 

Post a Comment

Previous Post Next Post