ತೌಕ್ತೆ ತತ್ಪರಿಣಾಮ ಮಲೆನಾಡಲ್ಲಿ ಮಳೆಗಾಲ ಶುರು,ಮಳೆ ಆರ್ಭಟ ಜೋರು !
ಶಿವಮೊಗ್ಗ:ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಭೀಕರ ಚಂಡಮಾರುತದ ಪರಿಣಾಮ ಮಲೆನಾಡು,ಕರಾವಳಿಯ ಹಲವು ಜಿಲ್ಲೆಗಳಲ್ಲಿ ವರುಣನ ರೌದ್ರ ನರ್ತನ ಶುರುವಾಗಿದೆ.!!
ಕೊರೊನ ಆರ್ಭಟದ 2ನೇ ಅಲೆಯ ನಡುವೆ ಅರಬ್ಬೀ ಸಮುದ್ರದಲ್ಲಿ ಎದ್ದೆರುವ ಅಲೆಗಳ ಹೊಡೆತಕ್ಕೆ ಅಪಾರ ಪ್ರಮಾಣದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ!
ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದ್ದೂ, ಮಲೆನಾಡಲ್ಲಿ ಎಡಬಿಡದೆ ಮಳೆಯ ಜೊತೆಗೆ ಭೀಕರ ಗಾಳಿಗೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಳ್ಳಿಗಳಲ್ಲಿ ಕತ್ತಲೆಯ ಜೊತೆಗೆ ದಿನ ಕಳೆಯುವ ಆತಂಕ ಶುರುವಾದ ಬೆನ್ನಲ್ಲೇ, ಕೊರೊನ ಲಾಕ್ ಡೌನ್ ಪರಿಣಾಮ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಮಲೆನಾಡ ಮಂದಿಯ "ವರ್ಕ್ ಫ್ರಮ್ ಹೋಂ" ಕೆಲಸಕ್ಕೆ ಕೆಲವರಿಗೆ "ತೌಕ್ತೆ" ತಿಲಾಂಜಲಿ ಇಟ್ಟಿದೆ.
ಜಿಲ್ಲೆಯ ಜಲಾಶಯಗಳು ಮಳೆಗಾಲ ಹಿಡಿಯುವ ಮುಂಚಿತವಾಗಿ ಒಳಹರಿವು ಹೆಚ್ಚಾಗಿದ್ದು, ಗರಿಷ್ಟ ಮಟ್ಟವನ್ನ ತಲುಪುವ ಮಟ್ಟಕ್ಕೆ ನಿಂತಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯ ಮುಖಾಂತರ ನೀರನ್ನು ಹೊರಗಡೆ ಬೀಡಲಾಗಿದೆ...
ಮಲೆನಾಡಿನಲ್ಲಿ ಎಂದಿನಂತೆ ಈ ಬಾರಿಯ ಬೇಸಿಗೆಯ ವಾತಾವರಣ ಕಡಿಮೆಯಿದ್ದು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಮಳೆಗಾಲದಲ್ಲಿ ಎಲ್ಲಿ ಮಳೆ ಕೈ ಕೊಡುವುದೋ ಎಂಬ ಭೀತಿ,ಆತಂಕ ರೈತ ಸಮುದಾಯದಲ್ಲಿ ಮೂಡಿದ್ದು, ಇನ್ನೂ ಮಳೆಯನ್ನ ನೆಚ್ಚಿಕೊಂಡು ಶುಂಠಿ ನಾಟಿ ಮಾಡದ ಹಲವಾರು ರೈತರು ಕೊಂಚ ಮಳೆಕಡಿಮೆ ಆದರೆ ಸಾಕು ಎನ್ನುತ್ತಿದ್ದಾರೆ...