ಮಾರುತಿಪುರ
ಮಾರುತಿಪುರ :ನಗರ ಪ್ರದೇಶಗಳ ಜನರ ವಲಸೆಗಳಿಂದ ಹಳ್ಳಿಗಳಲ್ಲಿಯೂ ಸಹ ಕೊರೊನ ವ್ಯಾಪಕವಾಗಿ ಹರಡುತ್ತಿರುವುದು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ...
ಶಿವಮೊಗ್ಗ ದಲ್ಲಿ ಜಿಲ್ಲೆಯಲ್ಲಿ ದಿನೇ ದಿನೇ ಹಳ್ಳಿಗಳಲ್ಲಿ ಕೊರೊನ ಪ್ರಕರಣಗಳ ಸಂಖ್ಯೆಹೆಚ್ಚಾಗಿದ್ದು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಜಿಲ್ಲೆಯ ಹೊಸನಗರ ತಾಲೂಕು ಸಹ ಹೊರತಾಗಿರದೆ ಹಳ್ಳಿಯ ಮೂಲೆ ಮೂಲೆಗಳಲ್ಲೂ ಕೊರೊನ ತನ್ನ ಕಬಂಧ ಬಾಹುವನ್ನ ಚಾಚಿದೆ.
ಇಂದು ಮಾರುತಿಪುರ ಪಂಚಾಯತ್ ವ್ಯಾಪ್ತಿಯಲ್ಲಿ ಕಚ್ಚಿಗೆಬೈಲ್, ಅರಗೋಡಿ, ಮಾವಿನಹೊಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೊನ ಸೋಂಕಿಗೆ ತುತ್ತಾಗಿ ಹೋಂ ಇಸೊಲೈಶೇನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡು ಬಡವ ಕುಟುಂಬಗಳಿಗೆ , ಸ್ಥಳೀಯ ದಾನಿಗಳ ನೆರವಿನಿಂದ, ಪಂಚಾಯತ್ ಅಧ್ಯಕ್ಷರು, ಹಾಗೂ ಸದಸ್ಯನೊಳಗೊಂಡ ತಂಡ ಹಾಗೂ ಸಿಬ್ಬಂದಿವರ್ಗದವರು ಆಹಾರದ ಕಿಟ್ಗಳನ್ನ ವಿತರಣೆ ಮಾಡಿ ಆರೋಗ್ಯ ವಿಚಾರಣೆ ಮಾಡಿ, ಕೊರೊನ ಬಗ್ಗೆ ಆತಂಕ ಪಡದೆ, ಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುತಿಪುರ ಪಂಚಾಯತ್ ಅಧ್ಯಕ್ಷರು ಹೆಚ್ ಬಿ ಚಿದಂಬರ, ಸದಸ್ಯರುಗಳಾದ ಶಂಕರಶೆಟ್ಟಿ, ಜಿ, ಎಂ, ಪ್ರಕಾಶ್, ಇಂದ್ರೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..
ಇಂದು ಶಿವಮೊಗ್ಗ ಜಿಲ್ಲೆಯಲ್ಲಿ 676 ಮಂದಿಯಲ್ಲಿ ಸೋಂಕು ಕಾಣಿಸಿಕೊಡಿದ್ದು, ಸಾಗರ(141)ಶಿವಮೊಗ್ಗ,(162) ದಲ್ಲಿ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೊಸನಗರದಲ್ಲಿ ಕೊಂಚ ಹತೋಟಿಗೆ ಬಂದಹಾಗೇ ಕಾಣುವ ಮೂಲಕ ಕೇವಲ ಇಂದು 9ಹೊಸ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು 100 ಗಡಿಯ ಸನಿಹವಿದ್ದ ತಾಲೂಕಿನ ಜನತೆಗೆ ಇಂದು 'ಶುಭ 'ಸುದ್ದಿಯಾಗಿದೆ.....