ಖಾಸಗಿ ಶಾಲಾ ವ್ಯಾಮೋಹ, ಸರ್ಕಾರಿ ಶಾಲೆ ಕಡೆಗಣನೆ ಹೀಗೊಂದು ವಿನೂತನ ಬೇಡಿಕೆಯ ಪತ್ರ!!
ಹೊಸನಗರ : ಪೋಷಕರ ಖಾಸಗಿ ಶಾಲಾ ವ್ಯಾಮೋಹಕ್ಕೆ ಹಳ್ಳಿಯ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದೊದಗಿದೆ..! ಹೌದು ಬಡತನ ರೇಖೆಗಿಂತ ಕೆಳಗಿರುವರು ಸಹ ಸಾಲದ- ಮೊರೆ ಹೋಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲೇಬೇಕೆಂಬ ಗೋಜಿಗೆ ಬಿದ್ದಿದ್ದಾರೆ, ಇದರಲ್ಲಿ ಸಾಕಷ್ಟು ಜನ ಬಿಪಿಎಲ್ ಕಾರ್ಡ್, ಬಳಕೆದಾರ ಎಂಬುದು ವಿಪರ್ಯಾಸದ ಸಂಗತಿ, ಇದೇ ವಿಷಯದ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಸಾಮಾಜಿಕ ಹೋರಾಟದ ಚಿಂತಕ ಯುವಕ, ರೋಹಿತ್ ಚಿಕ್ಕಮಣತಿ ಈ ಕುರಿತು ಪತ್ರ ಮುಖಾಂತರ ಮಾನ್ಯ ಶ್ರೀ ಮುಖ್ಯಮಂತ್ರಿಗಳ ಗಮನ ಸೆಳೆಯುವ ಸಲುವಾಗಿ ಪತ್ರವನ್ನು ಬರೆದಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ..!!
ರೋಹಿತ್ ವಿಷಯ ಮಂಡನೆ ಪತ್ರದಲ್ಲಿ.....
ಸದರಿ ಯಾರು ಬಿಪಿಎಲ್ ಕಾರ್ಡ್ ಬಳಕೆದಾರರು ಇದ್ದಾರೆ ಅವರೆಲ್ಲರ,ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಸೇರಿಸಬೇಕೆಂಬ ಒತ್ತಾಯ ರೋಹಿತ್ ಚಿಕ್ಕಮಣತಿ,ಅವರದು ಇಲ್ಲವಾದಲ್ಲಿ ಅಂಥವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಬೇಕೆಂಬುದು ಪತ್ರದಲ್ಲಿ ವಿವರಣೆ ನೀಡಿದ್ದಾರೆ..ಹಾಗೂ ಲಕ್ಷಾಂತರ ರೂಪಾಯಿ ವ್ಯಯ ಮಾಡಿ, ಬಡತನ ರೇಖೆಗಿಂತ ಕೆಳಗೆ ಇದ್ದೇವೆ ಎಂದೂ ಬಿಪಿಲ್ ಕಾರ್ಡ್ ಸಹ ಪಡೆದು ಸದರಿ ಕಾರ್ಡ್ ಬಳಕೆದಾರರನ್ನ ಈ ಕೂಡಲೇ ಸಂಬಂಧಪಟ್ಟ ಇಲಾಖೆ ತಕ್ಷಣವೆ ಕಾರ್ಡ್ ರದ್ದು ಮಾಡಿ,ಎಂಬುದು ಸಹ ಬಹು ದೊಡ್ಡ ಬೇಡಿಕೆ!!!
ಸರ್ಕಾರ ಸಹ ಈ ನಿಟ್ಟಿನಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ನಮ್ಮಸರ್ಕಾರಿ ಶಾಲೆಗಳಲ್ಲಿಯೇ ನೀಡಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನ ಕಾಪಾಡಿಕೊಳ್ಳಬೇಕಿದೆ ಹಾಗೂ ಸರಕಾರಿ ಶಾಲೆಗಳನ್ನು ಕಾಪಾಡಬೇಕಿದೆ..!! ಜೊತೆ ಜೊತೆಗೆ ಬಿಪಿಎಲ್ ಕಾರ್ಡ್ ಬಳಕೆದಾರರ ಬಗ್ಗೆ ಸರ್ಕಾರ ಕೂಡ ಎಚ್ಚರಿಕೆ ವಹಿಸಬೇಕಿದೆ !!
ವರದಿ : ಅಜಿತ ಗೌಡ ಬಡೇನಕೊಪ್ಪ...
ಮಲೆನಾಡು ಲೈವ್ ಬ್ಲಾಗ್ ಸಂಪಾದಕೀಯ
