ಹೊಸನಗರ :ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕಚ್ಚಿಗೆಬೈಲ್ ನೆಚ್ಚಿನ ಶಂಕರಣ್ಣ ನಿಧನ

ಮಾರುತಿಪುರ : ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸಹೃದಯಿ ಶಂಕರ್ ಶೆಟ್ಟಿ ನಿಧನರಾಗಿದ್ದಾರೆ..

ಬುಧವಾರ ಮಧ್ಯಾಹ್ನ  ಕಚ್ಚಿಗೆಬೈಲ್ ತಿರುವಿನಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಬೈಕ್ ಸವಾರ ವೇಗದಲ್ಲಿ ಗುದ್ದಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ICU ವಿಭಾಗದಲ್ಲಿ (ತೀವ್ರನಿಗಾ ಘಟಕದಲ್ಲಿ) ಚಿಕಿತ್ಸೆ ನೀಡಲಾಗಿತ್ತು.ನಂತರ ಮೆಗ್ಗನ್ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ನಿನ್ನೆ ರಾತ್ರಿ ಅಸುನಿಗಿದ್ದಾರೆ..!

ಹಿನ್ನೆಲೆ: ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಶಂಕರ ಶೆಟ್ಟಿ ಅವರು ತಮ್ಮ ಬಾಲ್ಯದ ಶಿಕ್ಷಣವನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ವೈಯಕ್ತಿಕ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ, ಹೋಟೆಲ್ ಉದ್ಯಮದಲ್ಲಿ ಕೆಲಸ ನಿರ್ವಹಣೆ ಮಾಡಿ ಜೀವನ ಸಾಗಿಸಿ. ನಂತರ ಕಚ್ಚಿಗೆಬೈಲ್ ನಲ್ಲಿ ಸಣ್ಣದಾದ ತಮ್ಮದೇ ಸ್ವಂತ ಹೋಟೆಲ್ ಉದ್ಯಮ ಜೊತೆಗೆ ದಿನಪತ್ರಿಕೆ ಗಳ ವಿತರಕರಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಸಾಮಾಜಿಕ ಸೇವೆ : ಬಾಲ್ಯದಿಂದಲೂ ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ಆಸಕ್ತಿಪ್ರಿಯರಾಗಿದ್ದ ಶಂಕರ್ ಶೆಟ್ಟಿ.ಪ್ರತಿ ಬಾರಿ ಕಚ್ಚಿಗೆಬೈಲ್ ಸರ್ಕಲ್ ನಲ್ಲಿ ಜನರ ಜೊತೆಗೆ ಅವರ ಮುಗುಳುನಗೆ ಯುತ ಮಾತುಗಳಿಗೆ ಊರಿನ ಜನರ ಪ್ರೀತಿಗೆ ಪಾತ್ರ ರಾಗಿದ್ದು ಅತ್ಯಂತ ವಿಶೇಷನೀಯ! ಯಾವುದೇ ರಾಜಕೀಯ ಹಿನ್ನೆಲೆ ಜಾತಿ ಬಲ, ಹಣ ಬಲ ಇಲ್ಲದೆ, ಕೇವಲ ಜನರ ಪ್ರೀತಿಯ ಭಾವನೆಗಳಿಗೆ ಬೆಲೆ ಉಂಟು ಎನ್ನುವುದನ್ನು, ಕಚ್ಚಿಗೆಬೈಲ್ ಜನರು ಹಾಗೂ ಶಂಕರಣ್ಣ ತೋರಿಸಿದ್ದು ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆ!. ಹೌದು ಜಾತಿಮತ,ಹಣದಮತ ಈಗಿನ ಚುನಾವಣ ರಾಜಕೀಯದಲ್ಲಿ, ಪ್ರೀತಿಯಮತ,ಅಭಿವೃದ್ಧಿ ಸ್ಪಂದನೆ ಮತ, ಪಡೆದಿದ್ದು ನಮ್ಮ ಶಂಕರಣ್ಣ ಎಂಬುದು  ಹೊಸನಗರ ತಾಲ್ಲೂಕಿಗೆ ಒಂದು ಹೆಮ್ಮೆಯ ಕ್ಷಣ.!ಮಾದರಿ ರಾಜಕೀಯ..!

ಮೊದಲ ಗೆಲುವಿನಲ್ಲೇ ಪಂಚಾಯತ್ ಉಪಾಧ್ಯಕ್ಷರು ಆಗಿ ಪಂಚಾಯತ್ ವ್ಯಾಪ್ತಿಯ ಅತ್ಯಂತ ಕಾರ್ಯಶೀಲಾ ಸದಸ್ಯರು ಆಗಿ ಎಲ್ಲ ಚಟುವಟಿಕೆ ಗಳಲ್ಲಿ ಭಾಗವಹಿಸಿ ಊರಿನ ಮೂಲಭೂತ ಸೌಕರ್ಯ ಗಳಿಗೆ ಅವರ ಆಸಕ್ತಿದಾಯಕ ಸ್ಪಂದನಾ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.!

ತಾವು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ವಿಷಯದಲ್ಲಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘಟನೆ ಮಾಡಿ,ಜವಾಬ್ದಾರಿಯುತವಾಗಿ ನೆಡೆಸಿ ಸಹಕಾರ ನೀಡಿದ್ದು ಶಾಲೆಯ ಸರ್ವತೋಮುಖ ಏಳಿಗೆ ಅವರ ಸ್ಪಂದನೆ ಸಲಹೆ ಪ್ರಶಂಸನೀಯ!

ದೂರದ ಬೆಂಗಳೂರು ನಲ್ಲಿ ಓದುವ ಕೆಲಸ ಮಾಡುವವರ ಊರಿನ ಎಲ್ಲ ಹುಡುಗರ ಜೊತೆಗಿನ ಅವರ ಬಸ್ ಹೊರಡುವ ಸಮಯದಲ್ಲಿನ ಬಸ್ ಸ್ಟಾಂಡ್ ಸಂಭಾಷಣೆ ಮಾತ್ರ ಸಾಕಷ್ಟು ವರ್ಷ ನೆನಪು ಅಲ್ಲಿ ಉಳಿಯುವ ಪ್ರೀತಿಯ ಸಂಭಾಷಣೆ ಅದು, ಮರೆಯಲಾಗದ ಅನುಭವ ಎಂಬುದು ಅನೇಕ ಹುಡುಗರ ಮನದಾಳದ ಮಾತು..!!

ಸಂತಾಪ

ಮೃತರ ಅಕಾಲಿಕ ನಿಧನಕ್ಕೆ ರಾಜಕೀಯ ಗಣ್ಯರು ಗ್ರಾಮ ಪಂಚಾಯತ್ ಎಲ್ಲ ಸದಸ್ಯರು ಸಿಬ್ಬಂದಿಗಳು ಕಚ್ಚಿಗೆಬೈಲ್ ಹಳೆ ವಿದ್ಯಾರ್ಥಿ ಸಂಘ ಎಲ್ಲ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.






Post a Comment

Previous Post Next Post