ಹೊಸನಗರ : ಹೊಸನಗರ ಬ್ರದರ್ಸ್ ಆಯೋಜನೆಯ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ!!!

 

ಹೊಸನಗರ:ಹೊಸನಗರದ ನೆಹರು ಮೈದಾನದಲ್ಲಿ ಜನವರಿ 16.17 18ರಂದು ಹೊಸನಗರ ತಾಲ್ಲೂಕು ಸತತ 3ನೇ ಬಾರಿಗೆ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಹೊಸನಗರ ಬ್ರದರ್ಸ್ " ರವರಿಂದ ಕ್ರಿಕೆಟ್ ಪಂದ್ಯಾ ವಳಿಯನ್ನು ಆಯೋಜಿಸಲಾಗಿದೆ ಎಂದು ಬ್ರದರ್ಸ್ ಕ್ರೀಡಾಕೂಟದ ಅಧ್ಯಕ್ಷರಾದ ಸಂತೋಷ್ ಕೊಟ್ಯಾನ್‌ರವರು ತಿಳಿಸಿದರು..

ಹೊಸನಗರದ ನೆಹರು ಮೈದಾನದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ನಾವು ಸತತ ಮೂರು ವರ್ಷಗಳಿಂದ ಹೊಸನಗರ ಬ್ರದರ್ ಎಂಬ ಹೆಸರಿನಲ್ಲಿ ಕ್ರೀಡಾಕೂಟ ವನ್ನು ಆಯೋಜಿಸಲಾಗುತ್ತಿದ್ದು ಸುಮಾರು ಅಂದಾಜು ವೆಚ್ಚ 20ಲಕ್ಷ ದಾಟಲಿದೆ ಪ್ರಥಮ ಬಹುಮಾನವಾಗಿ 3ಲಕ್ಷ ಹಾಗೂ ದ್ವಿತೀಯ ಬಹುಮಾನವಾಗಿ 2ಲಕ್ಷ ಹಾಗೂ ತೃತೀಯ ಬಹುಮಾನವಾಗಿ 60ಸಾವಿರ ಚತುರ್ಥ ಬಹು ಮಾನವಾಗಿ 40 ಸಾವಿರ ಇದರ ಜೊತೆಗೆ ಬ್ಯಾಟಿಂಗ್ ಬೌಲಿಂಗ್ ಸರಣಿ ಶ್ರೇಷ್ಠ ಪಂದ್ಯದ ಪುರುಷೋತ್ತಮ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು..

ಪಂದ್ಯಾವಳಿಯ ವಿಶೇಷತೆ ಎಂದರೇ ರಾಷ್ಟ್ರೀ ಯ ಮತ್ತು ರಾಜ್ಯ ಹಾಗೂ ಮಲೆನಾಡು ಪ್ರತಿಷ್ಠಿತ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈ ಪಂದ್ಯಾವಳಿಯ ನೇರ ಪ್ರಸಾರವನ್ನು S7 ಸ್ಪೋರ್ಟ್ ಯೌಟ್ಯೂಬ್ ಚಾನೆಲ್ ನಲ್ಲಿ ಮಾಡಲಾಗುವುದು ಎಂದರು. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲ್ಲೂಕಿನ ಕ್ರೀಡಾಭಿಮಾನಿಗಳು ಹಾಗೂ ಹೊಸನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಕ್ರೀಡಾಪಟುಗಳನ್ನು ಉತ್ಸಾಹದೊಂದಿಗೆ ಕ್ರಿಕೆಟ್ ಆಟಗಾರರಿಗೆ ಆಟವಾಡಲು ಉತ್ತೇಜಿಸಬೇ ಕೆಂದು ಈ ಮೂಲಕ ಕೇಳಿಕೊಂಡರು.

ಈ ಪತ್ರಿಕಾ ಗೋಷ್ಠಿಯ ಸಂದರ್ಭದಲ್ಲಿ ಸಂತೋಷ್ ಕೊಟ್ಯಾನ್. ಮಹೇಶ್ ಬಾಣಿಗ, ಉದಯಶೆಟ್ಟಿ, ಇಸ್ಮಾಯಿಲ್, ಪ್ರವೀಣ್ ಜಿ.ಎಸ್. ಪ್ರವೀಣ್ ಹೆಚ್.ವಿ. ವಿಕ್ರಮ್, ಗಣೇಶ್, ರಾಘ ವೇಂದ್ರ, ಅನೂಪ್, ತೌಫಿಕ್, ವಿನಯ್‌ ಕುಮಾರ್, ಸುರೇಂದ್ರ ಕೊಟ್ಯಾನ್, ಕಟ್ಟೆ ಸುರೇಶ, ಮುಜೀಬ್, ಸುನೀಲ್ ಪಟೇಡಿ, ಕಾರ್ತಿಕ್, ವೆಂಕಟೇಶ್ ವಿಜು. ರೋಹಿತ್ ಗೌಡ, ಹೆಚ್.ಎಸ್. ರಾಘ ವೇಂದ್ರ, ಅವಿನಾಶ್, ಮಾಂತೇಶ್, ಸಂದೀಪ್ ಶರತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Post a Comment

Previous Post Next Post