ಹೊಸನಗರ : ಕಾಲುವೆ ನೀರು ಬಳಸಿದ ಭತ್ತ ಗದ್ದೆಗೆ ಕಾದಿತ್ತು ಶಾಕ್!! ಭತ್ತ ಬೆಳೆ ಭಾಗಶಃ ನಾಶ

ಹೊಸನಗರ : ಮಲೆನಾಡಿನಲ್ಲಿ ಅಕ್ಷರ ಸಹ ಮಳೆ ಕೈಕೊಟ್ಟಿದ್ದು, ಮುಂಗಾರು ಮಳೆಯೂ ಸಹ ಸರಿಯಾದ ಪ್ರಮಾಣದಲ್ಲಿ ಆಗದೆ. ಜುಲೈ ತಿಂಗಳ ಮಳೆಗಾಗಿ ಕಾದು ಕುಳಿತ ರೈತರಿಗೆ,ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ವಾಡಿಕೆಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಜುಲೈ ತಿಂಗಳಲ್ಲಿ ಮಳೆಯಾಗಿದ್ದು ಮಡಿ ಮಾಡಿದ ಸಸಿಗಳನ್ನ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿರುವ ರೈತ ಸಮುದಾಯಕ್ಕೆ ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಾದ್ಯಂತ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಮುಂಗಾರು ವಿಳಂಬವಾದರು ಜುಲೈ ತಿಂಗಳಲ್ಲಿ ಬಿರುಸು ಪಡೆದಿತ್ತು,ಇದನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರು (Farmers) ಈಗ ಆಗಸ್ಟ್ ತಿಂಗಳು ಮಳೆಯಿಲ್ಲದೆ ಹೈರಾಣಾಗಿದ್ದಾರೆ. ಭತ್ತ (Paddy)ನಾಟಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಈಗಾಗಲೇ ಭತ್ತ ನಾಟಿ ಮಾಡಿದವರು ಕೃತಕ ಮೂಲಗಳ ಮೂಕಾಂತರ ಬೋರ್, ಬಾವಿ ಕೆರೆ ಗಳಿಂದ ತಮ್ಮ ಬೆಳೆಯ ರಕ್ಷಣೆಗೆ ತೊಡಗಿದ್ದಾರೆ.

ಕೈಗೆ ಬರುವ ಮೊದಲೆ ಮಲೆನಾಡ ಪ್ರಮುಖ ಆಹಾರ ಬೆಳೆ ಭತ್ತ ಬೆಳೆ ಒಣಗಿ ಹೋಗುತ್ತೆಯೇ ಎಂಬ ಭೀತಿಯಲ್ಲಿದ್ದಾರೆ.!

ಹೌದು ಇದು ಒಂದು ಕಡೆ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಸಮಸ್ಯೆ ಆದರೆ  ಮತ್ತೊಂದೆಡೆ,ಮಲೆನಾಡಿನಲ್ಲಿ ಪ್ರಮುಖ ಆಹಾರ ಬೆಳೆ ಭತ್ತ ಮೆಕ್ಕೆಜೋಳ ಗದ್ದೆಗಳನ್ನ ಪ್ರಮುಖ ವಾಣಿಜ್ಯ ಬೆಳೆ  ಶುಂಠಿ ಆಪೋಷಣೆ ಮಾಡಿದೆ!! ಹೌದು ಸರ್ವೆ ಸಾಮಾನ್ಯ ಶುಂಠಿ ಬೆಳೆ ಕಳೆದ 10 ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ, ಕಾರಣ ಭಾರತೀಯ ಮಾರ್ಕೆಟ್ ನಲ್ಲಿ ಶುಂಠಿ ಬೆಳೆಗೆ ಬಂಪರ್ ಬೆಲೆ ಬಂದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಬೆಳೆ ಆವರಿಸಿದೆ!!.

20 ರಿಂದ 25 ಸಾವಿರ ರೂಪಾಯಿ ಅತ್ಯಧಿಕ ಗರಿಷ್ಠ ಪ್ರಮಾಣದಲ್ಲಿ ಬೆಲೆ ಪಡೆದ ಶುಂಠಿ ಬೆಳೆಯನ್ನು ಬೆಳೆಯಲು ರೈತರು ಆಸಕ್ತಿ ಹೊಂದಿದ್ದಾರೆ ದೊಡ್ಡ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಆರಂಭಿಸಿದ್ದಾರೆ, ಶುಂಠಿಯನ್ನು ಯಥೇಚ್ಛವಾಗಿ ರಾಸಾಯನಿಕ ಪ್ರಕ್ರಿಯೆಯಲ್ಲಿಯೇ ಅದನ್ನ ಬೆಳೆಯಲಾಗುತ್ತದೆ. ಶುಂಠಿ ಬೆಳೆ ಅತೀ ಹೆಚ್ಚು ಖರ್ಚು ಸಹ ಆಗುತ್ತಿದ್ದೂ, ಎಕರೆ 1ರಿಂದ 2 ಲಕ್ಷ್ಮ ಖರ್ಚು ಆಗುವ ಸಾಧ್ಯತೆ ಇದ್ದು ರೋಗಗಳು ಬಾರದಂತೆ, ಹೆಚ್ಚಾಗಿ ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನ ಬಳಸಿ ಬೆಳೆಯಲಾಗುತ್ತದೆ.!!ಒಮ್ಮೆ ಶುಂಠಿ ಹಾಕಿದ ನಂತರ ಐದು ವರ್ಷದ ತನಕ ಆ ಭೂಮಿ ಶುಂಠಿ ಬೆಳೆಗೆ ಯೋಗ್ಯವಾಗಲ್ಲ ಎನ್ನುತ್ತಾರೆ ರೈತರು.ಅಷ್ಟು ಪ್ರಮಾಣದಲ್ಲಿ ರಾಸಾಯನಿಕಗಳನ್ನ ಬಳಸಲಾಗಿರುತ್ತದೆ.!!

ಸಕಾಲಕ್ಕೆ ಮಳೆ ಬಾರದೆ, ಭೀತಿಯಲ್ಲಿದ್ದ ರೈತರಿಗೆ,ಕೇವಲ ಹರಿಯುವ ನೀರನ್ನೇ(ಕಾಲುವೆ )ಆಧಾರವಾಗಿಟ್ಟುಕೊಂಡು ಭತ್ತ ಭತ್ತ ಬೆಳೆಯುವ ಸಣ್ಣಪುಟ್ಟ ರೈತರುಗಳಿಗೆ ದೊಡ್ಡ ಪ್ರಮಾಣದ ಬೆಳೆಯುವ ಶುಂಠಿ ಬೆಳೆಗಾರರಿಂದ ಅನಾನುಕೂಲಗಳಾಗುತ್ತಿವೆ ಇದು ಬೆಂಕಿಯಿಂದ ಬಾಣಲೆಗೆ ಹಾಕಿದಂತೆ ಆಗಿದೆ ಬದುಕು.ಹೌದು ಹೊಸನಗರ ತಾಲೂಕು, ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗುಬ್ಬಿಗ ಗ್ರಾಮದಲ್ಲಿನ ಸಣ್ಣ ರೈತರು ತಮ್ಮ ಅಳಲನ್ನ ವ್ಯಕ್ತ ಪಡಿಸಿದ್ದಾರೆ.

ಆಹಾರ ಬೆಳೆಯಾಗಿರ್ತಕ್ಕಂತ ಭತ್ತ ಸಂಪೂರ್ಣ ನಾಶವಾಗಿದೆ, ಕಾರಣ ಏನಂದ್ರೆ ರೈತರ ಹೇಮಾ ಹಾಗೂ ಶೇಖರಪ್ಪ ಗೌಡ ಅವರು, ಹೇಳಿದಂತೆ ಅಧಿಕ ಪ್ರಮಾಣದ ರಾಸಾಯನಿಕ ಹಾಗೂ ಔಷದ ದ್ರಾವಣ ಸಿಂಪಡಣೆಯ ಶುಂಠಿ ಬೆಳೆಗೆ ಉಪಯೋಗ ಮಾಡಿದ ನೀರು ಕೆಳಗಿನ ಜಮೀನುಗಳಿಗೆ ಹರಿದ ಪರಿಣಾಮ ಭತ್ತ ಸಂಪೂರ್ಣ ನಾಶವಾಗುವ ಭೀತಿಯಲ್ಲಿದೆ.!!ಈ ಬಗ್ಗೆ ಶುಂಠಿ ಬೆಳೆಗಾರರ ಗಮನಕ್ಕೆ ಸಹ ತಂದಿದ್ದು, ಅವರು ಈ ಆರೋಪವನ್ನ ಅಲ್ಲ ಗೆಳೆದಿದ್ದಾರೆ.!!

ಎಷ್ಟೇ ಕೃತಕ ನೀರು ಸರಬರಾಜು ಮಾಡಿದರೂ,ಸ್ವಾಭಾವಿಕವಾಗಿ ಮಳೆ ಆಗದೇ ಇರೋ ಪರಿಣಾಮ ಇಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ...


Post a Comment

Previous Post Next Post