ರಿಪ್ಪನ್ ಪೇಟೆ : ಪತ್ರಕರ್ತ ರಫಿ ರಿಪ್ಪನ್ ಪೇಟೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ!!!

ಬೆಂಗಳೂರು :ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ ಭಾನುವಾರ ನಡೆದ ಗುರುಕುಲ ಕಲಾ ಪ್ರತಿಷ್ಠಾನದ ಎರಡನೇ ವರ್ಷದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್‌ಪೇಟೆಯ ಯುವ ಸಾಹಿತಿ,ಉದಯೋನ್ಮುಖ ಬರಹಗಾರ ಮತ್ತು ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯ ಸಂಪಾದಕ ರಫ಼ಿ ರಿಪ್ಪನ್‌ಪೇಟೆ ರವರಿಗೆ ರಾಜ್ಯಮಟ್ಟದ "ಗುರುಕುಲ ಕೀರ್ತಿ ಕಳಸ" ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ರಫ಼ಿ ರಿಪ್ಪನ್‌ಪೇಟೆ ರವರ ಅಪರಿಮಿತ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ವಿತರಿಸಲಾಗಿದೆ.ಸಾಹಿತ್ಯ ಕ್ಷೇತ್ರದಲ್ಲಿ ಸರಿಸುಮಾರು ಐದು ರಾಜ್ಯ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಫು ಮೆರೆದಿದ್ದಾರೆ.

ರಫ಼ಿ ರಿಪ್ಪನ್‌ಪೇಟೆ ರವರು 2020 ರ ಪೆಬ್ರವರಿಯಲ್ಲಿ ಇವರ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಬಳ್ಳಾರಿ ಜಿಲ್ಲೆಯಲ್ಲಿ ಬರಹಗಾರರ ಬಳಗ "ಸಾಹಿತ್ಯ ಸಿರಿ" ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.2021ರ ಮೇ ತಿಂಗಳಿನಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಹಾಗೂ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ "ಗುರುಕುಲ ಶಿರೋಮಣಿ" ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು

2021 ರ ಅಕ್ಟೋಬರ್ ತಿಂಗಳಿನಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಇವರ ಅಪ್ರಕಟಿತ " ಪಾರಿಜಾತ " ಕೃತಿಗೆ "ಗುರುಕುಲ ಕಲಾ ಕೀರ್ತಿ" ಎಂಬ ರಾಜ್ಯ ಪ್ರಶಸ್ತಿಯನ್ನು ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಸ್ವಾಮೀಜಿಗಳಾದ ಸಿದ್ದಲಿಂಗ ಸ್ವಾಮೀಜಿಗಳಿಂದ ಪಡೆದಿದ್ದರು.

ಈ ಸಂಧರ್ಭದಲ್ಲಿ  ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ,ಜನಪದ ಉಸಿರು ಗುರುರಾಜ್ ಹೊಸಕೋಟೆ ,ಸಾಹಿತಿ ಅಬೂಬಕರ್ ಕೈರಂಗಳ,  ಹಿರಿಯ ಚಲನಚಿತ್ರ ನಟಿಯರಾದ ಗಿರಿಜಾ ಲೋಕೇಶ್ ,ಮಾಲತಿಶ್ರೀ ಹಾಗೂ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸಿ ರಾಮೇಗೌಡ ,ನಿವೃತ ನ್ಯಾಯದೀಶ ರೇವಣ್ಣ ಬಳ್ಳಾರಿ ,ಗುರುಕುಲ ಕಲಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮತ್ತು ಕಾರ್ಯಾಧ್ಯಕ್ಷ ಶಿವರಾಜ್ ಗೌಡ ಸೇರಿದಂತೆ ಇನ್ನಿತರರಿದ್ದರು.

Post a Comment

Previous Post Next Post