ಯಶಸ್ಸು ವಿಫಲತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.. ಸೋಲೇ ಗೆಲುವಿನ ಮೆಟ್ಟಿಲು :ಯುವ ಲೇಖಕಿ ನಿತ್ಯಶ್ರೀ ಆರ್ ಶಿವಮೊಗ್ಗ



"ಸೋಲೇ ಗೆಲುವಿನ ಮೆಟ್ಟಿಲು"

ಶಸ್ಸಿನ ಜೀವನ....  ಯಾರಿಗೆ ಇಷ್ಟ ಇಲ್ಲ ಹೇಳಿ? ತಮ್ಮ ಮಕ್ಕಳು ಯಶಸ್ಸಿನಲ್ಲಿ ತಮ್ಮ ಯಶಸ್ಸನ್ನು ಕಾಣುವರು ಪೋಷಕರು ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ನೌಕರಿ ಹಿಡಿದು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ ಅದೆಷ್ಟು! ಪೋಷಕರು ಮಕ್ಕಳಿಗೆ ಶಾಲೆಗೆ ಸಿದ್ಧಮಾಡಿ ಕಳಿಸುವುದು ಬಂದ ತಕ್ಷಣ ಪಾಠಶಾಲೆಗೆ ಮಕ್ಕಳನ್ನು ಕಳಿಸುವುದು ಹಗಲಿರುಳು ಮಕ್ಕಳಿಗಾಗಿ ಮಕ್ಕಳ ಓದಿಗಾಗಿ ಪೋಷಕರು ಶ್ರಮಿಸುವರು

 ಯಶಸ್ಸು ವಿಫಲತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅಪಯಶಸ್ಸು ಸಿಕ್ಕ ತಕ್ಷಣ ಚಿಂತೆ ಮಾಡುತ್ತ ಕೂರುವ ಬದಲು ಇದಕ್ಕೆ ಕಾರಣ ಏನೆಂದು ಯೋಚಿಸುವುದು ಸೂಕ್ತವಾಗುತ್ತದೆ ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರನ್ನು ಈ ಭೂಮಿಗೆ ಕಳಿಸುವಾಗ ವಿಶೇಷ ಕಲೆಯನ್ನು ಅಳವಡಿಸಿ ಕಳಿಸಿರುತ್ತಾನೆ ಒಬ್ಬರಿಗೆ ನೃತ್ಯನಾಟಕ ಅಭಿನಯ ಸಂಗೀತ-ಸಾಹಿತ್ಯ ಚಿತ್ರಕಲೆ ಹೀಗೆ ಹತ್ತು ಹಲವಾರು

ಮಕ್ಕಳಿಗೆ ಪಾಠದ ಜೊತೆಯಲಿ ತಮಗಿಷ್ಟವಾದ ಅಂತಹ ಕಲೆಯ ಜೊತೆ ಮುಂದುವರೆಯುವ ಸ್ವತಂತ್ರವನ್ನು ಪೋಷಕರು ಒದಗಿಸುವುದು ಆದ್ಯ ಕರ್ತವ್ಯ ಅದರಲ್ಲೇ ಯಶಸ್ವಿ ಕಂಡು ಜೀವನದಲ್ಲಿ ಮುಂದೆ ಬರುವ ಮಕ್ಕಳು ಇದ್ದಾರೆ

 ಇನ್ನು ಫೇಲೂರ್ ವಿಷಯಕ್ಕೆ ಬಂದರೆ ನಮಗೆಲ್ಲ ಬೆಳಕು ನೀಡಿದಂತಹ ಥಾಮಸ್ ಆಲ್ವಾ ಎಡಿಸನ್ ಸಾವಿರ ಬಾರಿ ಬಲ್ಬ್ ಕಂಡು ಹಿಡಿಯಲು ಪ್ರಯತ್ನ ಮಾಡಿ ವಿಫಲ ನಾಗಿರುತ್ತಾನೆ ಮತ್ತೆ ಮತ್ತೆ ಪ್ರಯತ್ನದಿಂದಲೇ ಅವನು ಯಶಸ್ವಿಯನ್ನು ಕಾಣುತ್ತಾನೆ ಅವನು ಎಂದೂ ಪ್ರಯತ್ನಿಸದೆ ಹೋಗಿದ್ದರೆ ಇಂದು ನಾವು ಬೆಳಕನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ

 ಅದಕ್ಕಾಗಿ ಆತನ ತಾಯಿ ಕೂಡ ಅವನ ಬೆಂಬಲಕ್ಕೆ ಇರುತ್ತಾಳೆ ಥಾಮಸ್ ಆಲ್ವಾ ಎಡಿಸನ್ ಚಿಕ್ಕವಯಸ್ಸಿನಲ್ಲಿ ಇದ್ದಾಗ ಶಾಲೆಯಿಂದ ಬಂದು ಅಮ್ಮ ಟೀಚರ್ ಏನು ಬರೆದಿದ್ದಾರೆ ನೋಡಮ್ಮ ಎಂದು ಓದಲು ತಾಯಿಗೆ ಹೇಳಿದಾಗ ತಾಯಿ ಡೈರಿಯನ್ನು ತೆಗೆದು ನಿನ್ನಂತಹ ಬುದ್ಧಿವಂತ ಹುಡುಗನಿಗೆ ತಮ್ಮ ಶಾಲೆಯಲ್ಲಿ ಕಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ ಇನ್ನುಮುಂದೆ ನಾನು ನಿನಗೆ ಪಾಠ ಮಾಡುತ್ತೇನೆ ಎಂದು ತನಗೆ ಗೊತ್ತಿರುವಷ್ಟು ಥಾಮಸ್ ಆಲ್ವಾ ಎಡಿಸನ್ ತಾಯಿ ತಾನೆ ಬೋಧನೆ ಮಾಡಿ ಮಗನಿಗೆ ಒಂದು ಪ್ರಯೋಗ ಶಾಲೆಯನ್ನು ಮನೆಯಲ್ಲೇ ತೆರೆದು ಕೊಡುತ್ತಾಳೆ

ಆತನ ತಾಯಿಯ ನಿಧನದ ನಂತರ ಅದೇ ಡೈರಿಯನ್ನು ಥಾಮಸ್ ಆಲ್ವಾ ಎಡಿಸನ್ ತೆಗೆದು ನೋಡಿ ಒಂದು ಕ್ಷಣ ಬೆಚ್ಚಿ ಬೆರಗಾಗಿ ಅಚ್ಚರಿಗೆ ಒಳಗಾಗುತ್ತಾನೆ ನಿಮ್ಮ ಮಗನಂತಹ ದಡ್ಡ ಹುಡುಗನಿಗೆ ಪಾಠ ಮಾಡಲು ಸಾಧ್ಯವಿಲ್ಲ ನಿಮ್ಮ ಮಗನನ್ನು ನೀವೇ ಓದಿಸಿಕೊಳ್ಳಿ ಎಂದು ಡೈರಿಯಲ್ಲಿ ಬರೆದಿರುತ್ತದೆ ಅಂತಹ ಕಲ್ಲನ್ನ ಶಿಲೆ ಆಗಿಸಿದಳು ಅವನ ತಾಯಿ

ಮತ್ತೊಂದು ವಿಫಲದಿಂದ ಸಫಲತೆಗೆ ಹೇಳಬಹುದಾದ ಉದಾಹರಣೆ ವಿಲಿಯಂ ಶೇಕ್ಸ್ ಸ್ಪಿಯರ್ ಆಂಗ್ಲ ಭಾಷೆಯ ಮಹಾನ್ ಕವಿ ಲೇಖಕ ಮಹಾನ್ ನಾಟಕಗಾರನಿಗೆ ಎಂ ಎ ನಲ್ಲಿ ಇಂಗ್ಲಿಷ್ ಭಾಷೆ ಅವನು ಭಾಷೆ ಪಾಸ್ ಆಗುವುದೇ ಕಷ್ಟಕರವಾಗಿತ್ತು ಆದರೆ ಈಗ ಅವನಿಲ್ಲದ ಆಂಗ್ಲಭಾಷೆ ಪುಸ್ತಕವೇ ಇಲ್ಲ ಎನ್ನುವಂತಾಗಿದೆ

 ಮತ್ತೊಂದು ಶ್ರೇಷ್ಠ ಉದಾಹರಣೆ ಎಂದರೆ ನಮ್ಮ ಭಾರತ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ತನ್ನ ತಂದೆ ಜೀವನದಲ್ಲಿ ಮುಂದೆ ಏನಾಗುವುದೆಂದು ಪ್ರಶ್ನಿಸಿದಾಗ ಸಾರೋಟನ್ನು ಹಿಡಿಯುವುದಾಗಿ ಹೇಳುತ್ತಾನೆ ಆಗ ತಂದೆ ಕೆಂಡಮಂಡಲ ಗೊಂಡಾಗ ನರೇಂದ್ರ ದತ್ತ ಅಂದರೆ ಸ್ವಾಮಿ ವಿವೇಕಾನಂದರ ತಾಯಿ ಹೇಳುತ್ತಾರೆ ಶ್ರೀಕೃಷ್ಣ ಮಹಾಭಾರತದಲ್ಲಿ ಸಾರೋಟು ಹಿಡಿದು ಧರ್ಮಯುದ್ಧದಲ್ಲಿ ಜಯಶಾಲಿಯಾದ ಕುರಿತು ಹಾಗೆಯೇ ಸ್ವಾಮಿ ವಿವೇಕಾನಂದರ ತಾಯಿಯ ಮಾತಿನಂತೆ ಅದೆಷ್ಟು ಧರ್ಮಕಾರ್ಯಗಳು ಮಹಾನ್ ನಾಯಕರಾಗಿ ಸ್ವಾಮಿವಿವೇಕಾನಂದರು ಹೊರಹೊಮ್ಮುತ್ತಾರೆ

ಹೀಗೆ ಯಾರು ಕೂಡ ಪರಿಪೂರ್ಣರಲ್ಲ ಯಾರು ಕೂಡ ಸರ್ವಶ್ರೇಷ್ಠ ರೂ ಅಲ್ಲ ಚಂದ್ರನಲ್ಲೂ ಕಪ್ಪು ಕಲೆಗಳಿವೆ ಯಮುನೆಯಲ್ಲಿ ಕಾಳಿಂಗ ಗಳಿವೆ

ಯಾರು ಕೂಡ ಉತ್ತಮ ಫಲಿತಾಂಶ ಬರಲಿಲ್ಲ ಎಂದು ಬೇಸರ ಪಡುವ ಬದಲು ಉತ್ತಮ ಫಲಿತಾಂಶ ಗಳಿಸುವುದು ಹೇಗೆ ಎಂದು ಯೋಚಿಸಿದರೆ ಉತ್ತಮ ಮಾರ್ಗ ತಾನಾಗಿ ಗೋಚರಿಸುತ್ತದೆ put effort get a good results & try again ಎಂಬ ಎರಡು ಮಾತುಗಳನ್ನು ನೆನಪಿಟ್ಟುಕೊಂಡರೆ ಸಾಕು ಯಶಸ್ಸು ಜೊತೆ ಕೀರ್ತಿ ಕಟ್ಟಿಟ್ಟಬುತ್ತಿ

ಇನ್ನು ಪೋಷಕರ ವಿಷಯಕ್ಕೆ ಬಂದರೆ ಮಕ್ಕಳು ಕೇಳಿದ ತಕ್ಷಣ ಅದೇ ವಸ್ತುವನ್ನು ತಂದು ಕೊಡುವುದರಿಂದ ಮಕ್ಕಳು ಆಮಿಷಕ್ಕೆ ಒಳಗಾಗುತ್ತಾರೆ ಇಂದು ಚಾಕ್ಲೆಟ್ ಐಸ್ ಕ್ರೀಮ್ ತಂದುಕೊಟ್ಟು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯಬೇಕೆಂದು! 


ಪೋಷಕರಿಗೆ ಒಂದು ಕಿವಿಮಾತು ಮುಂದೊಂದು ದಿನ ಅದೇ ಮಕ್ಕಳು ದೇಶದ ಪ್ರಜೆಗಳು ಆಗುವ ಬದಲು ಆಸೆ ಆಮಿಷಗಳಿಂದ ಕಳ್ಳಕಾಕರು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಆಮಿಷ ತೋರಿಸಿ ಮಕ್ಕಳಿಗೆ ಶಾಲೆಗೆ ಕಳುಹಿಸುವುದು ಜೀವನ ಪಾಠವನ್ನು ಬೋಧಿಸುವುದು ಬೇಡ ಇಂದು ನಿಮ್ಮ ಮಕ್ಕಳಿಗೆ ನೀವು ಕೊಡುವ ಬುನಾದಿಯೇ ಮುಂದೊಂದು ದಿನ ಕಟ್ಟಡವಾಗಿ ನಿಮ್ಮ ಮುಂದೆ ತಲೆಯೆತ್ತುವುದು ಮರೆಯದಿರಿ

 ನಿಮ್ಮ ಮಕ್ಕಳಿಗೆ ಏನು ಸಂಸ್ಕಾರ ಕೊಡುವಿರೋ ಮಕ್ಕಳು ಹಾಗೆ ಬೆಳೆಯುತ್ತಾರೆ ಬೇವಿನ ಬೀಜವನ್ನು ಬಿತ್ತಿ ಮಾವಿನ ಫಲ ಅಪೇಕ್ಷಿಸಿದರೆ ಹೇಗೆ ಪೋಷಕರೇ?


- ನಿತ್ಯಶ್ರೀ ಆರ್ ಶಿವಮೊಗ್ಗ

Post a Comment

Previous Post Next Post