ಹೊಸನಗರ :ದಶಕಗಳ ಹೋರಾಟಕ್ಕೆ ಇನ್ನಾದರೂ ನ್ಯಾಯ ಸಿಗುವುದ??

ಹೊಸನಗರ :ಹೊಸನಗರ ಕ್ಷೇತ್ರ ಪುನರ್ ರಚನೆಗೆ ಅಗ್ರಹಿಸಿ ಬೃಹತ್ ಪ್ರತಿಭಟನೆಗಾಗಿ ಕ್ಷೇತ್ರದ ಜನತೆ ಬೀದಿಗಿಳಿದ್ದಾರೆ. ಜನ ಸಂಖ್ಯೆ ಕಡಿಮೆ ಇದೆ ಎನ್ನುವ ಒಂದೇ ಕಾರಣಕ್ಕೆ ವಿಧಾನಸಭಾ ಕ್ಷೇತ್ರವನ್ನ ರದ್ದು ಪಡಿಸಲಾಗಿತ್ತು. ವಿಧಾನ ಸಭಾ ಕ್ಷೇತ್ರ ರದ್ದಾದಾಗಿನಿಂದ ತಾಲೂಕಿನ ಅಭಿವೃದ್ಧಿ ಸಂಪೂರ್ಣವಾಗಿ ಹದಗೆಟ್ಟಿದೆ.ತಾಲೂಕಿನ ಮೂಲಭೂತ ಸೌಕರ್ಯಗಳು ಮುಳುಗಡೆ ಸಂತ್ರಸ್ತರಿಗೆ ಕೈಗೆಟುಕದಾಗಿದೆ.ನಾಡಿಗೆ ಬೆಳಕು ನೀಡಿ ಹೊಸನಗರ ತಾಲೂಕಿನ ಜನ ಕತ್ತಲೆಯಲ್ಲೇ ದಿನ ಕಳೆಯುವ ದುಸ್ಥಿತಿಗೆ ಬಂದಿದೆ. ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲದೆ, ಕರೆಂಟ್ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ರೋಸಿಹೋಗಿದ್ದಾರೆ.

ಹರಿದು ಹಂಚಿ ಹೋದ ಹೊಸನಗರವನ್ನ ಮತ್ತೆ  ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ಮಂದಿಟ್ಟುಕೊಂಡು ಬೀದಿಗಿಳಿದಿದ್ದಾರೆ.ಕ್ಷೇತ್ರ ಮರುಹುಟ್ಟು ಪಡೆದ ನಂತರವಾದರೂ ಇಲ್ಲಿನ ದಶಕಗಳ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಯಬಹುದು ಎಂಬ ಮಹದಾಸೆ, ಪಕ್ಷಾತೀತವಾದ ಈ ಹೋರಾಟಕ್ಕೆ ಮುಂಚೂಣಿಯಾಗಿ ಹಿರಿಯ ರಾಜಕೀಯ ಮುತ್ಸದ್ದಿ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ.ಸ್ವಾಮಿರಾವ್ ಕೈ ಜೋಡಿಸಿದ್ದಾರೆ.

ಹೋರಾಟದ  ಕಿಚ್ಚು ಹತ್ತಿದೆ ಈಗ ಏನು ಮಾಡಬೇಕು ಹೇಗೆ ಮಾಡಬೇಕು ಎಂಬ ರೂಪರೇಷೆಯನ್ನು ರಚಿಸಲು ಈ ಶನಿವಾರ ಬೆಳಗ್ಗೆ 10.30ಕ್ಕೆ ಹೊಸನಗರ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದೆ.

ಆ ಪಕ್ಷ ಈ ಪಕ್ಷ ಅಂತ ಏನು ಇಲ್ಲ ನಮ್ಮದೊಂದೇ ಗುರಿ ಹೊಸನಗರ ವಿಧಾನಸಭಾ ಕ್ಷೇತ್ರ.ಎಂಬ ದ್ಯೇಯವಾಕ್ಯದೊಂದಿಗೆ ತಾಲೂಕಿನ ಸಮಗ್ರತೆಗೆ,ಉಳಿವಿಗಾಗಿ ಕರೆ ಕೊಟ್ಟಿದ್ದಾರೆ.

ತಾಲೂಕಿನ ಎಲ್ಲಾ ಜನಪ್ರತಿನಿದಿಗಳು, ಪಂಚಾಯತ್ ಸದಸ್ಯರು ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


Post a Comment

Previous Post Next Post