ಹೊಸನಗರ :ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಗ್ರಾಮಸ್ಥರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.ಅಸಮಾಧಾನ ಹೊರಹಾಕಿದ ಹುಂಚ ಬಿಜೆಪಿ ನಾಯಕರು

ಹೊಸನಗರ :ಹೊಸನಗರ ತಾಲೂಕು ಹುಂಚ ವ್ಯಾಪ್ತಿಯ ಮೂಡ್ಲಿ ಆನೆಗದ್ದೆ ಸಂಪರ್ಕ ಮಾಡುವ 1.2ಕಿ ಮೀ ಕಾಂಕ್ರೀಟ್ ಹಾಗೂ ಡಾಂಬರೀಕರಣಕ್ಕೆ ಅನುದಾನವನ್ನ ಮಂಜೂರಾತಿ ನೀಡಿದ್ದು,ರಸ್ತೆ ಕಾಮಗಾರಿ ನೆಡೆಯುವ ಸ್ಥಳದಲ್ಲಿ ಗ್ರಾಮಸ್ಥರು ಪ್ರತಿಭಟನೆ ನೆಡೆಸಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದರಿ ಕಾಮಗಾರಿಯನ್ನ ಗುತ್ತಿಗೆದಾರರು,ಎಸ್ ಟಿ ಬಡಾವಣೆಯಿಂದ ಕಾಮಗಾರಿ ಪ್ರಾರಂಭಿಸದೇ,ಆನೆಗದ್ದೆ ಮುಖಾಂತರ ಪ್ರಾರಂಭಿಸಲಾಗಿದೆ ಎಂದು ಊರಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ,ಗುತ್ತಿಗೆದಾರರನ್ನ ತರಾಟೆಗೆ ತೆಗೆದುಕೊಂಡರು, ಅನಂತರ ಹುಂಚ ನಾಡಕಛೇರಿಗೆ ಭೇಟಿ ನೀಡಿ,ಸಿಇಓ ಮಧ್ಯಪ್ರವೇಶ ಮಾಡಿ,
ಕಾಮಗಾರಿ ನೆಡೆಸುವಂತೆ ಮನವಿ ಮಾಡಿದರು.

ಈ ಎಲ್ಲಾ ವಿದ್ಯಮಾನಗಳಿಗೆ ಅನುಗುಣವಾಗಿ,ಬಿಜೆಪಿ ಮುಖಂಡರು ಇದನ್ನ ತೀವ್ರವಾಗಿ ಖಂಡಿಸಿದ್ದು, ಗ್ರಾಮಸ್ಥರರನ್ನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.

"ಈ ಮೂಲಕ ಸುದ್ಧಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರಾದ ನಾಗೇಂದ್ರ ಈರನ ಬೈಲು, ಅಭಿಷೇಕ್ ಹುಂಚ, ವಿಶ್ವನಾಥ್ ಹೊನ್ನೇಬೈಲು"

"ಹಿರಿಯರ ಮಾರ್ಗದರ್ಶನ, ಸಂಘಟನಾತ್ಮಕ ಹೋರಾಟ ಹಾಗೂ ಶಾಸಕರ ಕ್ಷೇತ್ರದ ಬಗೆಗಿನ ಆಸಕ್ತಿ,ರಸ್ತೆ ಕೆಲಸ ಕಾಮಗಾರಿ ಪ್ರಾರಂಭವಾಗಿರುತ್ತದೆ,ಸದರಿ ಈ ರಸ್ತೆಯು ಹುಂಚ ಪಂಚಾಯತ್ ಮೂಡಲಿ ಗೆ ಹೋಗುವ ದಾರಿಗೆ ಮುಂಜೂರಾಗಿರುತ್ತದೆ ಈ ರಸ್ತೆ 1.2ಕಿಲೋಮೀಟರ್ ವ್ಯಾಪ್ತಿಯನ್ನು ಒಳ ಪಡುತ್ತದೆ ಇದರಿಂದ, ಆನೆಗದ್ದೆ, ಮೂಡಲಿ, ಹೊಸಗದ್ದೆ, ಕಿಳೆರಿ ಹಾಗೂ ಇನ್ನೂ ಅನೇಕ ಹಳ್ಳಿಗರಿಗೆ ಅನುಕೂಲವಾಗುತ್ತದೆ, ಮೂಡಲಿಯ ಊರಿನ ವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸೇರಿಸಲಾಗಿತ್ತು ಈ ಮಹಾಮಾರಿ ಕರೋನ ಇಂದಾಗಿ  ಕಾಮಗಾರಿ ತಡೆ ಆಗಿದ್ದು ಈಗ ಶಾಸಕರ ಅನುದಾನದಲ್ಲಿ 1.2ಕಿಲೋಮೀಟರ್ ರಸ್ತೆ ನೀಡಿರುತ್ತಾರೆ ಹಾಗೂ ಇನ್ನೂ ಬಾಕಿ ಉಳಿದವ ರಸ್ತೆಯನ್ನು ಮುಂದಿನ ದಿನಗಳಲ್ಲಿ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟಿರುತ್ತಾರೆ, ಆದರೂ ಕೇವಲ ವಯಕ್ತಿಕ ರಾಜಕೀಯ ದ್ವೇಷದ ಕಾರಣದಿಂದ ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸ ಪ್ರಾರಂಭ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಪ್ರತಿಭಟನೆ ಮಾಡಿ ಕೆಲಸಕ್ಕೆ ತಡೆ ಮಾಡಿದ್ದು ಕ್ಷಮಿಸಲಾಗದ ಕೃತ್ಯ."

ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಲಾಗದ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಹೊರೆತು ಬೇರೇನೂ ಇಲ್ಲಾ.

 ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರು ಇದ್ದಾಗ ಹೊನ್ನೇಬೈಲು ಬೂತ್ ಹಾಗೂ ಹುಂಚ ಪಂಚಾಯತ್ ವ್ಯಾಪ್ತಿಗೆ ಎಷ್ಟು ಅನುದಾನ ತಂದಿರುತ್ತಾರೆ ಹಾಗೂ ಎಷ್ಟು ಕೆಲಸಗಳು ಆಗಿರುತ್ತವೆ ಎಂದು ಸಾರ್ವಜನಿಕರ ಎದುರು ಬರಲು ಮುಖವಿಲ್ಲದೆ ಹೀಗೆಲ್ಲ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕಿದೆ.

"ಅಭಿವೃದ್ಧಿ ಕೇವಲ ಮಾತಲ್ಲ, ಅದೊಂದು ಸಂಕಲ್ಪ"

ಅಭಿವೃದ್ಧಿ ಪತದಲ್ಲಿ ನಮ್ಮ ಪಂಚಾಯತ್ಅನ್ನು ತೆಗೆದುಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಶಾಸಕರು ಹಾಗೂ ಗೃಹ ಸಚಿವರಿಗೆ ಸಮಸ್ತ ಗ್ರಾಮಸ್ಥರು, ಕಾರ್ಯಕರ್ತರು, ಜಯಕರ್ನಾಟಕ ಸಂಘಟನೆ,ಅಭಿನಂದನೆಗಳನ್ನ ಈ ಮೂಲಕ ತಿಳಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಾಗೇಂದ್ರ ಈರನ ಬೈಲು, ಅಭಿಷೇಕ್ ಹುಂಚ, ವಿಶ್ವನಾಥ್ ಹೊನ್ನೇಬೈಲು, ಹರೀಶ್ ಹೊನ್ನೇಬೈಲು, ಚೇತನ್ ಮೂಡಲಿ, ಶಿವಾನಂದ್ ಎಲ್ಲದಕೋಣೆ, ವೀರೇಶ್ ಆನೆಗದ್ದೆ,ಗ್ರಾಮಸ್ಥರಾದ ಜಯಕರ್ನಾಟಕ ತಾಲೂಕಿನ ಅಧ್ಯಕ್ಷರಾದ ಚಂದನ್ ಗೌಡ, ನಂದನ್ ಗೌಡ,ಸುಧೀರ್ ಹಾಗೂ ಇನ್ನಿತರರು ಇದ್ದರು...

Post a Comment

Previous Post Next Post