ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ : ಮಸಿ ಬಳಿದವರ , ಖಡ್ಗ ಕಿತ್ತವರ ಮೆದುಳಿಗೆ ಮಸಿ ಬಳಿಸುವವರಿಂದ ಸ್ವತಂತ್ರ ಸಿಗಬೇಕಿದೆ.!! ಕನ್ನಡ ಭಾಷ ಒಗ್ಗಟ್ಟು ಪ್ರದರ್ಶನವಾಗಬೇಕಿದೆ

ದೇಶಭಿಮಾನ, ಸ್ವಾಭಿಮಾನ, ನಾಡಭಕ್ತಿ ನಾಡಪ್ರೇಮದ ಕಿಚ್ಚು, ಧರ್ಮಾಭಿಮಾನ ಶ್ರದ್ದೆ, ಅಖಂಡ ಭಾರತ ಸ್ವಂತತ್ರ ಸಂಗ್ರಾಮಕ್ಕೆ ರಣ ಕಹಳೆ ಊದಿ ಸೂರ್ಯ ಮುಳುಗದ ಸಾಮ್ರಾಜ್ಯ ಭ್ರಮೆಯ ಬ್ರಿಟಿಷ್ ಭೀಬತ್ಸ ದಾಸ್ಯದ ವಿರುದ್ಧ,ಕನ್ನಡ ಪುಟ್ಟ ಸಂಸ್ಥಾನದ ದೊಡ್ಡ ರಾಣಿ ಕಿತ್ತೂರು ರಾಜ್ಯದ ಚೆನ್ನಮ್ಮ ತಾಯಿಯ ಬಲಗೈ ಭಂಟ, ಗೆರಿಲ್ಲಾ ಯುದ್ಧ ತಂತ್ರ ನಿಪುಣ,ಕುಲಕೋಟಿ ಕನ್ನಡಿಗರ ಸ್ವಾಭಿಮಾನದ ರಾಯಣ್ಣ ಮನೆ ಮನಗಳಲ್ಲಿ ಒಬ್ಬ ಒಬ್ಬ ರಾಯಣ್ಣ ಇದ್ದಿದ್ರೆ ಸ್ವಂತತ್ರ ದೇಶಕ್ಕೆ ಎಂದೋ ಸಿಗುತ್ತಿತು, ಅಂದು ಬ್ರಿಟಿಷ್ ಕುತಂತ್ರಿಗಳು ನಮ್ಮ ನಮ್ಮವರಿಗೆ ಬೆಂಕಿ ಇಟ್ಟು ಒಡೆದು ಆಳುವ ನೀತಿ ರಾಯಣ್ಣ ನೇಣಿನ ಕುಣಿಕೆ ತಂದುಒಡ್ಡಿತು..... ನೇಣಿನ ಹಗ್ಗವನ್ನ ತಾಯಿಯ ಆಶೀರ್ವಾದ ಹೂವಿನ ಹಾರದಂತೆ ಕಂಡ ರಾಯಣ್ಣ ಸಾಯುವಾಗಲು ನಾನು ಒಬ್ಬ ಹೋದ್ರೆ ಏನಂತೆ ಕಿತ್ತೂರು ಗಂಡು ಗಲಿಗಳ ಉರೈತಿ, ಸ್ವಾಭಿಮಾನಿಗಳ ತವರೈತಿ ಸಾವಿರಾರು ರಾಯಣ್ಣ ಹುಟ್ಟುತ್ತಾರೆ ಎಂದು ನಗು ನಗುತ್ತಾ ನೇಣಿಗೆ ಕುಣಿಕೆಗೆ ಕೊರಳೊಡ್ಡಿದ ರಾಯಣ್ಣ ಅಂದು ಮತ್ತೊಮ್ಮೆ ಕನ್ನಡದ ಹೃದಯಗಳಲ್ಲಿ ಜನಿಸಿದ.

ಛೇ ಎಂಥ ದೇಶಾಭಿಮಾನ ಅಂದು ಕಿಂಚಿತ್ತೂ ಬೇಸರ ವ್ಯಕ್ತ ಪಡಿಸದ ರಾಯಣ್ಣ ಅಂದು ನನ್ನವರೇ ನನಗೆ ಬೆನ್ನಿಗೆ ಚೂರಿ ಇರಿದರಲ್ಲ ಖಡ್ಗ ಕಸಿದು,ಸೆರೆಹಿಡಿದ ನಯವಂಚಕ ನಾಡದ್ರೋಹಿಗಳ ನೆಡೆ ಒಂದೆಡೆ , ಈಗ ರಾಯಣ್ಣನ ಖಡ್ಗವನ್ನ ಮುಖವನ್ನು, ಮುಖವಾಡ ಹಾಕಿಕೊಂಡು,ಯಾರಿಲ್ಲದ ನಡುರಾತ್ರಿಯಲ್ಲಿ ಖಡ್ಗವನ್ನ ಪ್ರತಿಮೆಯನ್ನ ಘಾಸಿಗೊಳಿಸಿದ ನಿಮಗೆ ಹೆಂಗರೋ ಮನಸ್ ಬಂತು ರಾಯಣ್ಣ ಅದೆಷ್ಟು ನೊಂದುಕೊಂಡ ನೇಣಿಗೆ ಹಾರವಾಗಲೂ ನಗುವ ರಾಯಣ್ಣ ಇಂದು ಕಣ್ಣಲ್ಲಿ ನೀರು ಹರಿಸುವ ದೃಶ್ಯ ನನ್ನ ಕಣ್ಣ ಹನಿಯಲ್ಲಿ ಪ್ರತಿಬಿಂಬಿಸುತ್ತಿದೆ....

ಕ್ಷಮಿಸಿಬಿಡು ರಾಯಣ್ಣ...

ಮೊಘಲ್ ವಿರುದ್ಧ ಹೋರಾಡಿ ಮರಾಠಿಗರ ಹಿತ ಕಾದಿದ್ದಕ್ಕೆ ಚೆನ್ನಮ್ಮ ತಾಯಿಯ ಭಂಟನ ಖಡ್ಗ ಗುರಾಣಿಗೆ ಕೈ ಹಾಕಿದ್ದೀರಿ ಮರಾಠಿ ಅವಿವೇಕಿಗಳು,ಮರಾಠಿ ಪುಂಡರು,

ಶಿವಾಜಿ, ರಾಯಣ್ಣ ಸಂಬಂಧ ಭಾಷೆ ಗಡಿ ಎಲ್ಲೇ ಮೀರಿದ ಅನುಬಂಧ...

ಅಖಂಡ ಭರತ ಖಂಡದ ಸಾಮ್ರಾಜ್ಯ ಕರ್ತೃ,ಧರ್ಮಾಭಿಮಾನದ ಶ್ರದ್ದೆಯನ್ನ ದೇಶದ ಉದ್ದಗಲಕ್ಕೂ ಹರಿಸಿದ, ಧರ್ಮ ಸಹಿಷ್ಣು, ಭಾರತದ ನೌಕಾದಳದ ಪಿತಾಮಹ, ತಾಯಿ ಜೀಜಾಭಾಯಿಯ ಕುಡಿ ಛತ್ರಪತಿ ಶಿವಾಜಿ ಮಹಾರಾಜ್... ಮತಾಂಧತೆ ಅಧಿಕಾರ,ಅಮಲು ತುಂಬಿ ತುಳುಕಿದ ಸಮಯ ಮೊಘಲ್ ಅಧಿಪತ್ಯಕ್ಕೆ ಅಂತ್ಯ ಹಾಡಿ, ಧರ್ಮ ಸಹಿಷ್ಣುತ ನಿರ್ಭೀತ ಆಡಳಿತಕ್ಕೆ ಬುನಾದಿ ಹಾಕಿ,ನಶಿಸುವ ಅಂಚಿನಲ್ಲಿ ಇದ್ದ ಸನಾತನ ಪರಂಪರೆಗೆ ನೀರೆರುದು,ಹೊಸ ಬಾಷ್ಯ ಬರೆದು,ಸಾಗರೋತ್ತರ ಸಾಮ್ರಾಜ್ಯ ವಿಸ್ತರಣೆ ಮಾಡಿ, ಪ್ರಬುದ್ಧ ಬಲಿಷ್ಠ ಭರತ ಖಂಡದ ಪರಿಕಲ್ಪನೆ ನೀಡಿ,ಗುಡ್ಡಗಾಡು ಸ್ಥಳದಲ್ಲಿ ಹುಟ್ಟಿ ಸ್ವತಂತ್ರ ಸಾಮ್ರಾಜ್ಯ ಕಟ್ಟಿದ ವಿಶ್ವದ ಐತಿಹಾಸಿಕ ಅರಸರಲ್ಲಿ ಶಿವಾಜಿ ಮಹಾರಾಜ್ ಮೊದಲಿಗ,ಶಿವಾಜಿಗೂ ಕನ್ನಡ ನೆಲಕ್ಕೂ ಅವಿನಾಭಾವ ನಂಟು,ಹಾಗೂ ರಾಯಣ್ಣ ಶಿವಾಜಿ ಬಳಸಿದ ಯುದ್ಧ ತಂತ್ರಗಳು ಒಂದಕೊಂದು ಬೆಸದಿದೆ, ತನ್ನ ಬಾಲ್ಯವನ್ನು ಕಳೆದುದು ಕರುನಾಡಲ್ಲಿ,ಕನ್ನಡ ಮಣ್ಣಿನಲ್ಲಿ, ಶಿವಾಜಿ ಮಗನಿಗೆ ಅಶ್ರಯ ನೀಡಿ ಪ್ರಾಣ ಉಳಿಸಿದ ನಾಡು ನಮ್ಮದು, ನಮಗೆ ಬೇಕಿರುವುದು ಶಿವಾಜಿ ಸಾಹಸ, ತಾಳ್ಮೆ, ಚುರುಕುತನದ ಜತೆಜತೆಗೆ ಧರ್ಮ ಸಹಿಷ್ಣುತೆ. ಛತ್ರಪತಿ ಶಿವಾಜಿ ನಮಗೆ ಸೌಹಾರ್ದತೆಯ ಸಾಮಾಜಿಕ ಜೀವನ ನಡೆಸಲು ಪ್ರೇರಣೆಯಾಗಬೇಕಿದೆ

ರಾಯಣ್ಣ, ಶಿವಾಜಿಯನ್ನ ರಾಜಕೀಯವಾಗಿ ಬಳಸಿ ದಾಳ ಮಾಡಿ ನಾಡಿನ ಹೆಮ್ಮೆಯಾಗಬೇಕಿದ್ದ ರಾಯಣ್ಣ, ಶಿವಾಜಿಯನ್ನ ಕೆಲವರೂ ಇಂದಿಗೂ ಮನಸಿನಲ್ಲಿ ಮಸಿ ಬಳಿಯುವ ದ್ವೇಷ ಬಿತ್ತಿಸುವ ವ್ಯಕ್ತಿಗಳಿಂದ ಮತ್ತೊಮ್ಮೆ ನಾಡಿಗೆ ಸ್ವಂತತ್ರ ಬೇಕಿದೆ..

ಪ್ರೇರಣೆಯಾಗಬೇಕಾದ ಮಹಾನ್ ಪುರುಷರನ್ನ ಒಡೆದು ಗಲಭೆ ಹಚ್ಚಿಸಿ, ಬೆಂಕಿ ಇಡುವ ಅವಿವೇಕಿಗಳಿಗೆ ನಾಡು ನುಡಿ ನೆಲ,ಜಲ ಭಾಷೆ,ಅಭಿಮಾನ, ಸಹಿಷ್ಣುತೆ ಪ್ರವಚನ ಎಮ್ಮೆ ಮೇಲೆ ನೀರು ಬಿಟ್ಟಂತೆ...


✍️ಅಜಿತ್ ಗೌಡ ಬಡೇನಕೊಪ್ಪ 


Post a Comment

Previous Post Next Post