ಆನಂದಪುರ :ಮುರುಘಾಮಠದಲ್ಲಿ ಅಧ್ಧೂರಿಯಾಗಿ ನೆರವೇರಲಿದೆ ಶರಣ ಸಾಹಿತ್ಯ ಭಾವೈಕ್ಯ ಸಮ್ಮೇಳನ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ.

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಲ್ಲಿ ಇತಿಹಾಸದಲ್ಲೇ ಗೌರವಕ್ಕೆ ಪಾತ್ರವಾದಂತಹ ಸ್ಥಳ ಆನಂದಪುರ ಸಮೀಪದ ಮುರುಘಾಮಠ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ವಾಗಿ ಮುಂದುವರೆದ ಮಠಗಳಲ್ಲಿ ಒಂದಾಗಿದ್ದು ಕೆಳದಿ  ಅರಸರ ಗೌರವ, ಪ್ರೀತಿ, ಪ್ರತಿಷ್ಠೆಗೆ ಪಾತ್ರವಾದಂತಹ ಮಠ ಇದಾಗಿದ್ದು ದಾನ ಧತ್ತಿಗಳನ್ನು ಪಡೆದುಕೊಂಡು ಬಂದಿದೆ.ಕಲೆ ಸಾಹಿತ್ಯ ಸಂಸ್ಕೃತಿಗೆ ತನ್ನದೇ ಆದಂತಹ ಪ್ರಾಮುಖ್ಯತೆ ನೀಡಿದ ಮಠ ಇದಾಗಿದೆ.


ಇದೇ ಡಿಸೆಂಬರ್ ನಾಲ್ಕರ ಶನಿವಾರದಂದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಮುರುಘಾ ಮಠದಲ್ಲಿ ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಕಾರ್ತಿಕ ದೀಪೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಸಮಿತಿಯವರು ನಿರ್ಧರಿಸಿದ್ದಾರೆ.


ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹೃದಯ ತಪಾಸಣಾ ಶಿಬಿರ ಹಾಗೂ ಬಿಪಿ, ಶುಗರ್ ಮತ್ತು ಇಸಿಜಿ ತಪಾಸಣೆ ಯನ್ನು ಕೂಡ ಮಾಡಲಾಗುತ್ತಿದೆ.

ನಾಡಿನ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸಿ ಈ ಸಮ್ಮೇಳನ ಜೊತೆಗೆ ಈ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಹಿತಿ ನೀಡಿದ್ದಾರೆ.



ವರದಿ:  ಪವನ್ ಕುಮಾರ್ ಕಠಾರೆ.

Post a Comment

Previous Post Next Post