ಶಿವಮೊಗ್ಗ : ಗೃಹ ಮಂತ್ರಿಗಳ ಸ್ವ ಕ್ಷೇತ್ರದಲ್ಲಿ ಗೋ ಕಳ್ಳರ ಅಟ್ಟಹಾಸ "!! ಗಂಭೀರಗಾಯಗೊಂಡು ಅದೃಷ್ಟವಶಾತ್ ಬದುಕುಳಿದ ಯುವಕರು ..

ಶಿವಮೊಗ್ಗ :ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಗೋವಿನ ಸಾಗಾಣಿಕೆ ನೆಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೇವಲ ಗೋವಿನ ಕಳ್ಳ ಸಾಗಾಣಿಕೆಯೊಂದಿಗೆ ಕೊಲೆ ಯತ್ನಗಳು ನೆಡೆಯುತ್ತಿರುವುದು ಅತ್ಯಂತ ಶೋಚನೀಯ ವಿಚಾರ, ಸರ್ಕಾರ ಎಲ್ಲೋ ಒಂದು ಕಡೆಗೆ, ಅಕ್ರಮ ಸಾಗಾಣಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ, ಹಾಗೂ  ಪದೇ-ಪದೇ ಎಡವುತ್ತಿದಂತೆ.

ಕಾಣುತ್ತಿದೆ .ಕಾನಿಗೆ ಮೇಯಲು ಬಿಟ್ಟ ಜಾನುವಾರುಗಳ ಕಣ್ಮರೆ ಹಾಗೂ, ಅಮಾನುಷಾವಾಗಿ ಗೋವುಗಳನ್ನ ಒಂದರ ಮೇಲೊಂದು ತುಂಬಿ, ಸರಕುnತುಂಬುವಂತೆ ಗಾಡಿಗಳಲ್ಲಿ ಹೇರುವ ಹೇಯ ಕೃತ್ಯ ಚಿಕ್ಕಮಗಳೂರು-ಶಿವಮೊಗ್ಗ ಭಾಗದಲ್ಲಿ ಎಗ್ಗಿಲ್ಲದೆ, ನೆಡೆಯುತ್ತಿದೆ, ಸರ್ಕಾರ ಗೋಹತ್ಯ ನಿಷೇದ ಕಾನೂನುನಡಿಯಲ್ಲಿ ಅಕ್ರಮ ದಂದೆಗೆ ಕಡಿವಾಣ ಹಾಕುವಲ್ಲಿ ಗೃಹ ಇಲಾಖೆ ವಿಫಲತೆ ಎದ್ದು ಕಾಣಿಸುತ್ತಿದೆ ಗೋ ಅಕ್ರಮ ಸಾಗಾಣಿಕೆ ತಡೆಯಲು ಯತ್ನಿಸುವ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ  ನೆಡಿಯುತ್ತಿರುವುದಕ್ಕೆ ಸಾರ್ವಜನಿ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಇಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿದ್ದ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರಾದ ಕಿರಣ್ ಹಾಗೂ ಚರಣ್ ಮೇಲೆ  ಪಿಕ್ ಅಪ್ ವಾಹನವನ್ನು ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನೊಂದಿಗೆ ಹೋರಾಟ ನೆಡೆಸುತ್ತಿದ್ದಾರೆ.

ವಿಷಯ ತಿಳಿಯುತ್ತಿದಂತೆ  ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಗೃಹಮಂತ್ರಿಗಳು ಆರಗ ಜ್ಞಾನೇಂದ್ರ ಯುವಕರ ಕುಟುಂಬವನ್ನು ಬೇಟಿ ಮಾಡಿ ಸಾಂತ್ವನ ಹೇಳಿ, ಮತ್ತು ತೀರ್ಥಹಳ್ಳಿ ಆಸ್ಪತ್ರೆಗೆ ದೌಡಾಹಿಸಿ, ಘಟನೆ ಬಗ್ಗೆ ವಿವರ ಪಡೆದು ವಾಹನ ಗುದ್ದಿದ ರಭಸಕ್ಕೆ ಯುವಕರ ತಲೆಗೆ  ಹಾಗೂ ದೇಹಕ್ಕೆ ತೀವ್ರತರ ಪೆಟ್ಟಾಗಿದ್ದು  ತಕ್ಷಣ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಯುವಕರನ್ನ  ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿ ಕೊಟ್ಟರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಶಿವಮೊಗ್ಗ ಟಿಪ್ಪು ನಗರದ ನವೀದ್ ಹಾಗೂ ಶ್ರೀಧರ್ ಎಂಬ ಇಬ್ಬರನ್ನು ಮಾಳೂರು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದು,ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

ತೀರ್ಥಹಳ್ಳಿ ಇಂದು ನೆಡೆದ ಘಟನೆ ಸಂಬಂಧ ಬಜರಂಗದಳ ಹಾಗೂ ಹಿಂದೂಪರ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು ನಾಳೆ ತೀರ್ಥಹಳ್ಳಿಯ ಪಟ್ಟಣದಲ್ಲಿ ಆರೋಪಿಗಳಿಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ.ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಯುವಕರ ಮೇಲೆ ವಾಹನ ಚಲಾಯಿಸಿದವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹಮಂತ್ರಿಗಳು ಆಸ್ಪತ್ರೆ ಭೇಟಿ ಬಳಿಕ ಹೇಳಿಕೆ ನೀಡಿದ್ದಾರೆ.

Post a Comment

Previous Post Next Post