ಸಾಗರ :ತಾಳಗುಪ್ಪದಲ್ಲಿ ಭತ್ತ ಕೊಯ್ಯುವ ಮಷಿನ್ ವಾರಸುದಾರರ ಹಾಗೂ ಬಳಲಿ ಬೆಂಡಾದ ರೈತರ ನಡುವೆ ವಾಗ್ವಾದ!!! ಘಟನೆಗೆ ಕಾರಣವೇನು???

ಸಾಗರ :ಅಕಾಲಿಕ ಮಳೆಯಿಂದ ಇದೀಗ ರೈತ ತತ್ತರಿಸಿ ಹೋಗಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಪರಿಸ್ಥಿತಿ ಇಂತಹ ಸಂದರ್ಭದಲ್ಲಿ ಭತ್ತ ಕೊಯ್ಯುವ ಮಿಷಿನ್ ಏಜೆಂಟರು ಇದೀಗ ಸುಲಿಗೆಗೆ ಇಳಿದಿದ್ದಾರೆ ಎಂದು ಆರೋಪಿಸಿ ರೈತರು ಹಾಗೂ ಭತ್ತ ಕೊಯ್ಯುವ ಮಷಿನ್ ಏಜೆಂಟರ ನಡುವೆ ವಾಗ್ವಾದ ನಡೆದಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ದಲ್ಲಿ ರೈತರ ಭತ್ತ ಕಟಾವು ಮಾಡಲು ಯಂತ್ರಗಳು ಬಂದಿದ್ದು ಇದೀಗ ಯಂತ್ರದವರು ರೈತರಿಂದ ಭತ್ತದ ಕಟಾವು ಮಾಡಲು 1ಎಕರೆಗೆ ಗಂಟೆಗೆ 2800 ರೂ ಹಣದ ಬೇಡಿಕೆ ಇಟ್ಟಿದ್ದಾರೆ.

ಆದರೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ರೂ 2300 ಮಾತ್ರ ಪಡೆಯಬೇಕು ಎಂಬ ಸುತ್ತೋಲೆ ಇದೆ.

ಭತ್ತದ ಕೊಯ್ಲು ಮಷಿನ್ ನ ಕಡೆಯವರು ಐನೂರು ರೂ ಹೆಚ್ಚಿಗೆ ಪಡೆಯುತ್ತಿದ್ದಾರೆಂದು ಆರೋಪಿಸಿ ಇದೀಗ ತಾಳಗುಪ್ಪದಲ್ಲಿ ಓಂಕಾರ್ ಎಸ್ ವಿ ನೇತೃತ್ವದಲ್ಲಿ ರೈತರು ಹಾಗೂ ಯಂತ್ರೋಪಕರಣದ ವಾರಸುದಾರರ ನಡುವೆ ವಾಗ್ವಾದ ನಡೆದಿದೆ.

ಸಾಗರದ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ರವರಿಂದ ಯಂತ್ರೋಪಕರಣ ವಾರಸುದಾರರರ ಮೇಲೆ ಕ್ರಮ ಸಮಸ್ಯೆ ಬಗೆಹರಿಯುವ ಸಾಧ್ಯತೆ

ಅಧಿಕ ಹಣ ರೈತರಿಂದ ಪಡೆಯುವ ವಿಚಾರ ತಿಳಿಯುತ್ತಿದ್ದಂತೆ ಸಾಗರದ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ಅವರು ಸ್ಥಳಕ್ಕೆ ಧಾವಿಸುತ್ತಿದ್ದು ಅಧಿಕ ಹಣ ಪಡೆಯುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಪರಿಷ್ಕೃತ ಹಣವನ್ನು ಮಾತ್ರ ರೈತರಿಂದ ಪಡೆಯಬೇಕೆಂದು ಮಾಹಿತಿ ನೀಡುತ್ತೇನೆಂದು ತಿಳಿಸಿದ್ದಾರೆ.ಹೀಗಾಗಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಹೆಚ್ಚಿದೆ.


ವರದಿ : ಪವನ್ ಕುಮಾರ್ ಕಠಾರೆ.

Post a Comment

Previous Post Next Post