ಶಿವಮೊಗ್ಗ : 2021-22 ಸಾಲಿನ ಹಿಂಗಾರು ಹಂಗಾಮಿನ ಬೆಳೆಹಾನಿ ಬಗ್ಗೆ ಅರ್ಜಿ ಆಹ್ವಾನಿಸಲಾಗಿದೆ !!

ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ, ನೇರವಾಗಿ ಹೊಡೆತ ಕೊಡುತ್ತಿರುವುದು ರೈತಾಪಿ ವರ್ಗಕ್ಕೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಳೆಯ ಕಾರಣದಿಂದ ಸ್ವಲ್ಪ ಬೆಳೆ ಕೊಯ್ಲು ಮಾಡಿ ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲೂ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆ ರೈತರನ್ನು ಹೈರಾಣಾಗಿಸಿದೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕಟಾವಿಗೆ ಬಂದ ಬೆಳೆಯನ್ನು ಮಳೆ ನುಂಗಿ ಹಾಕಿದೆ.ಈ ಸಾಲಿನಲ್ಲಿ ಭತ್ತ,ಜೋಳ, ಬಾಳೆ, ಅಡಿಕೆ,  ಇನ್ನಿತರ ಬೆಳೆಗಳು ಸೇರಿವೆ. 🌱🎋🌾


ರೈತನಿಗೆ ಮೊದಲೇ  ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲಾ, ಫಸಲು ಬಂದು ಕಟಾವಿಗೆ ಬಂದಿದ್ದ ಬೆಳೆಗಳನ್ನು ಮಳೆ ನುಂಗಿದೆ, ರೈತರು ಬೆಳೆದ ಬೆಳೆ🌾🌿☘️🌱 ನೀರು ಪಾಲಾಗಿದ್ದು ಇಂತಹ ಸಂಧಿಗ್ದ ಸ್ಥಿತಿ ಯಲ್ಲಿ ಪರಿಹಾರದ ನೀರಿಕ್ಷೆಯಲ್ಲಿದ್ದ ರೈತರಿಗೆ ಸ್ವಲ್ಪ ನಿರಾಳವಾಗಿದ್ದು  ಬೆಳೆ ಹಾನಿ ಬಗ್ಗೆ ರೈತರಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ಕೆಳಗಿನಂತೆ..

ಶಿವಮೊಗ್ಗ : 2021-22 ಸಾಲಿನ ಹಿಂಗಾರು ಹಂಗಾಮಿನ ಬೆಳೆಹಾನಿ ಬಗ್ಗೆ ಅರ್ಜಿ 



ಬೆಳೆ ನಷ್ಟ ಪರಿಹಾರ ಪಡೆದು ಕೊಳ್ಳಲು, ಸದರಿ ದಾಖಲಾತಿಗಳನ್ನ ಪೂರೈಸಿ ಅರ್ಜಿ ಬರ್ತಿ ಮಾಡಿ ಸ್ಥಳೀಯ ಪಂಚಾಯತ್ ಗ್ರಾಮ ಲೆಕ್ಕಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ.

1)ಅರ್ಜಿ

2)ಇತ್ತೀಚಿನ ಪಹಣಿ

3)ಬ್ಯಾಂಕ್ ಪಾಸ್ ಬುಕ್

4)ಆಧಾರ್ ಕಾರ್ಡ್ ಪ್ರತಿ

ಅರ್ಜಿ ತುಂಬಿಸಿ ನಿಮ್ಮ ನಿಮ್ಮ ವ್ಯಾಪ್ತಿಯ ಗ್ರಾಮಲೆಕ್ಕಿಧಿಕಾರಿಗಳಿಗೆ ನೀಡತಕ್ಕದ್ದು.



Post a Comment

Previous Post Next Post