ದೀಪಾವಳಿ ನೋನಿಗೆ ಸಾವಿರ ಹಣ್ಣು ಕಾಯಿ ನೈವೇದ್ಯ ಬಯಸುವ ಮಲೆನಾಡಿನ ದೈವ ! ಹಾಗಾದರೆ ಇದು ಯಾವ ಗ್ರಾಮದ ದೇವತೆ ? ಒಮ್ಮೆ ಈ ಸುದ್ದಿ ನೋಡಿ

ಬೆಳಕಿನ ಹಬ್ಬ ದೀಪಾವಳಿ ಎಂದರೆ ಅದೇನೋ ಸಡಗರ ಅದೆಷ್ಟೋ ಸಂಭ್ರಮ ಮಲೆನಾಡಿನಲ್ಲಂತೂ ಹಬ್ಬದ ಸಡಗರ ಸಂಭ್ರಮ ಹೇಳತೀರದು.


ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಐಗಿನಬೈಲು ಗ್ರಾಮದಲ್ಲಿ ಗಾಮೇಶ್ವರ ದೈವವು ವಿಶಿಷ್ಟವಾದಂತಹ  ಶಕ್ತಿಯನ್ನು ಹೊಂದಿದ್ದು ಪ್ರತಿ ವರ್ಷವೂ ನೋನಿ ಹಬ್ಬದಂದು ಈ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ನೂರಾರು  ವರ್ಷಗಳ ಇತಿಹಾಸವಿರುವ   ಈ ಗಾಮೇಶ್ವರ ದೈವ ವೃಕ್ಷಕ್ಕೆ ಗ್ರಾಮದ ಪ್ರತಿ ಕುಟುಂಬದ ಪುರುಷರು ಉಪವಾಸ ವ್ರತದೊಂದಿಗೆ ಆಗಮಿಸಿ ದೈವಕ್ಕೆ ನಮಿಸಿ ಸಾವಿರಾರು ಹಣ್ಣುಕಾಯಿ ಸಮಪಿ೯ಸುವಂತಹ ಪ್ರತೀತಿಯಿದೆ.

 ಐಗಿನಬೈಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಣಸಿಗುವ ಈ ದೈವ ವೃಕ್ಷಕ್ಕೆ  ನೂರಾರು ಭಕ್ತಾದಿಗಳು ಆಗಮಿಸಿ ಬಲಿಪಾಡ್ಯಮಿಯ ದಿನ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.ನಂತರ ಪ್ರಸಾದವನ್ನು ಪಡೆದು ತಮ್ಮ ಮನೆಗಳಿಗೆ ತೆರಳಿ ಪೂಜೆಯ ಉಳಿದ ಕಾರ್ಯದಲ್ಲಿ ಈ ಗ್ರಾಮದ ಜನರು ತೊಡಗುತ್ತಾರೆ.


ವರದಿ:ಪವನ್ ಕುಮಾರ್ ಕಠಾರೆ

Post a Comment

Previous Post Next Post