ಯಡೇಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದ ಸದಸ್ಯರು ಕಾರಣ ಏನಂತೀರಾ ಒಮ್ಮೆ ಈ ಸ್ಟೋರಿ ನೋಡಿ.!!

ಸರ್ಕಾರ ಇದೀಗ ಕಾನೂನಿನ ಅರಿವನ್ನು ತಿಳಿಸಲು ಗ್ರಾಮ ಪಂಚಾಯತ್ ಮಟ್ಟದಿಂದ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸುತ್ತಿದೆ.

ಮಹಿಳೆಯರಿಗೆ ,ಮಕ್ಕಳಿಗೆ ,ದುರ್ಬಲ ವರ್ಗದವರಿಗೆ ಕಾನೂನಿನ ಸಂಪೂರ್ಣ ಅರಿವಿರಬೇಕು ಎಂಬ ಉದ್ದೇಶದಿಂದ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಒಳಗೊಂಡು ವಕೀಲರ ತಂಡದೊಂದಿಗೆ ಆಶಾ ಕಾರ್ಯಕರ್ತರ ಸಮ್ಮುಖದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಿದೆ.

ಆದರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ ದಿಂದ ಕೆಲ ಸದಸ್ಯರು ಅಸಮಾಧಾನವನ್ನು ಹೊರಹಾಕಿ ಸಭೆ ಬಹಿಷ್ಕರಿಸಿ ಹೊರನಡೆದಿದ್ದಾರೆ.

ಯಡೇಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಕುಮಾರ್ ಅವರು ಸಭೆಯ ಪೂರ್ವ ಸಿದ್ಧತೆಗಳು ಹಾಗೂ ಸಭೆಯ ಬಗ್ಗೆ ಸಾರ್ವಜನಿಕರಿಗಾಗಲಿ ಅಥವಾ ಪಂಚಾಯತ್ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೆ ತತಕ್ಷಣ ಸಭೆಯನ್ನು ಕರೆದಿದ್ದು ಕೇವಲ ಆಶಾ ಕಾರ್ಯಕರ್ತರು ಹಾಗೂ ಕೆಲ ಅಧಿಕಾರಿಗಳು ಹಾಜರಿದ್ದು ಸರ್ಕಾರದ ಈ ಯೋಜನೆ ಜನಸಾಮಾನ್ಯರಿಗೆ ತಿಳಿಸುವಂತಹ ಕಾರ್ಯಕ್ರಮ ಇಲ್ಲಿ ಸಾರ್ವಜನಿಕರಿಗೆ ಯಾವುದೇ ಪೂರ್ವ ಮಾಹಿತಿಯನ್ನು ನೀಡದೆ ಹಾಗೂ ಪಂಚಾಯಿತಿ ಸದಸ್ಯರಿಗೂ ಯಾವುದೇ ಮಾಹಿತಿಯನ್ನು ನೀಡದೆ ಪಿಡಿಒರವರು ದುರ್ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಕುಮಾರ್ ರವರು ಕಳೆದ ಕೆಲವು ಸಮಯದಿಂದ ಹೀಗೆ ತತಕ್ಷಣ ನಿರ್ಧಾರವನ್ನು ಕೈಗೊಳ್ಳುತ್ತಿದ್ದು ಪಂಚಾಯತಿ ಸದಸ್ಯರಿಗೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಈ ಈ ಸಭೆಯನ್ನು ನಾವು ಬಹಿಷ್ಕರಿಸಿ ಹೊರನಡೆಯುತ್ತಿದ್ದೇವೆ ಹಿರಿಯ ಅಧಿಕಾರಿಗಳು ಪಿಡಿಒ ರವರ ನಡೆಯ ಬಗ್ಗೆ ಗಮನಹರಿಸಬೇಕು ಎನ್ನುತ್ತಿದ್ದಂತೆ ಇತರ ಕೆಲ ಸದಸ್ಯರು ಸಹ ಸಭೆಯಿಂದ ಹೊರನಡೆದು ಸಭೆಯನ್ನು ಬಹಿಷ್ಕರಿಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ವರದಿ: ಪವನ್ ಕುಮಾರ್ ಕಠಾರೆ..

Post a Comment

Previous Post Next Post