ಹೊಸನಗರ:ಸತತ 2ನೇ ಬಾರಿ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ.ಜೆ.ಜಿ ಮಂಜುನಾಥ್

ಹೊಸನಗರ :ವಿಶ್ವದ ಅತ್ಯುನ್ನತ ಜ್ಞಾನಿಗಳ ಪಟ್ಟಿಯಲ್ಲಿಡಾ. ಜೆ. ಜಿ. ಮಂಜುನಾಥಶಿವಮೊಗ್ಗ : ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್‌ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ.ಜಿ ಮಂಜುನಾಥರವರು ಮತ್ತೊಮ್ಮೆ ಸ್ಥಾನಪಡೆದಿದ್ದಾರೆ.

ಹೌದು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ಜಿಲ್ಲೆ ಮಡಿಕೇರಿಯಲ್ಲಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ  ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ. ಮಂಜುನಾಥ್ ಅವರು 2021ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 24574ನೇ ಸ್ಥಾನವನ್ನು ಪಡೆಯುವ ಮೂಲಕ ಮತ್ತು ವಿಶ್ವದ ವ್ಯಕ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 197749ನೇ ಸ್ಥಾನವನ್ನು ಪಡೆದಿರುತ್ತಾರೆ...

[ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ] ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜಂಬಳ್ಳಿ ಗ್ರಾಮದವರು.


"ಅನಲೈಟಿಕಲ್ ಮತ್ತು ಎನರ್ಜಿ ವಿಷಯಗಳ ಕುರಿತು ಸಾಕಷ್ಟು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ"

ಸತತ 2 ವರ್ಷ ಕರ್ನಾಟಕದಿಂದ ಈ ಸಾಧನೆಗೈದ ಶ್ರೀಯುತ ಡಾ ಮಂಜುನಾಥ್ ಅವರು ಹೊಸನಗರ ಕೀರ್ತಿಯನ್ನ ರಾಷ್ಟ್ರಮಟ್ಟದ್ದಲ್ಲಿ ಹೆಚ್ಚಿಸಿದ್ದಾರೆ.

ಹಾಗೂ  ಶ್ರೀಯುತರ ಸಾಧನೆಯೂ ಮಂಗಳೂರು ವಿ.ವಿಗೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಹೆಮ್ಮೆ ತಂದಿದೆ  ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ, ಕುಲಪತಿಯವರು, ಕುಲಸಚಿವರು ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

Post a Comment

Previous Post Next Post