ಸಾಗರ: ಇದುವೇ ಭಾರತದ ಅತೀ ಪುರಾತನ ಪ್ರೇಮಕಾಣಿಕೆಯ ಭವನ, ಸಂಪಕಸರಸು ಸರೋವರ .!

        ತಾಜ್​​ಮಹಲ್​​ ಕಟ್ಟುವ 50 ವರ್ಷಗಳ ಮುನ್ನ ಕಟ್ಟಿಸಲಾದ ಪ್ರೇಮದ ಕಾಣಿಕೆ

ಸಾಗರ  :

 ಆನಂದಪುರ:ಪ್ರೇಮ, ಪ್ರೀತಿಯ ಸಂಕೇತ ಎಂದರೆ ಥಟ್ಟನೆ ನಮಗೆ ನೆನಪಾಗುವುದು ಜಗತ್ತಿನ ಅದ್ಭುತಗಳಲ್ಲಿ ಒಂದಾದ ಭಾರತದ ತಾಜ್​ ಮಹಲ್.ತನ್ನ ಪ್ರೀತಿಯ ಪತ್ನಿಗಾಗಿ ಕಟ್ಟಿಸಿದ ಈ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ತಾಜ್​​​ಮಹಲ್​​​ಗೂ ಮುನ್ನವೇ ಕಟ್ಟಲಾಗಿರುವ ಪ್ರೇಮದ ಕಾಣಿಕೆಯೊಂದು ನಮ್ಮ ಕರ್ನಾಟಕದಲ್ಲಿ ಇದೆ ಎನ್ನಲಾಗಿದೆ ಹಾಗೂ  ಚಂಪಕ ಸರಸಿ ಬಗ್ಗೆ ಮಲೆನಾಡಿನ ನಮಗೆ ಇದರ ವಿಶೇಷ ಪುರಾತನ ವೈಶಿಷ್ಟ್ಯ ತುಂಬಾ ಜನರಿಗೆ ತಿಳಿದಿಲ್ಲ...

ಶಿವಮೊಗ್ಗ  ಜಿಲ್ಹಾ ಕೇಂದ್ರದಿಂದ  ನಲವತ್ತು ಕಿಲೋ ಮೀಟರ್ ದೂರದಲ್ಲಿರುವ  ಸಾಗರ ತಾಲೂಕು ಆನಂದಪುರದಲ್ಲಿ ಕೆಳದಿ ಅರಸನ ತನ್ನ ಪ್ರೇಮದ ನೆನಪಿನ ಕಟ್ಟಿದ ಸರೋವರ,ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷದಿಂದ ಪ್ರವಾಸೋದ್ಯಮ ಕೇಂದ್ರವಾಗದೆ ಪಾಲುಬಿದ್ದ ಕೆರೆಯಾಗಿದೆ.!!

ಶಿವಮೊಗ್ಗ ಹಾಗೂ ಮಲೆನಾಡನ್ನ ಅತಿ ಹೆಚ್ಚು ವರ್ಷಗಳ ಆಳ್ವಿಕೆ ನೆಡಿಸಿ, ಕೆಳದಿ ರಾಜ ಮನೆತನ ತನ್ನದೇ ಆದ ವಿಶೇಷ ಕೊಡುಗೆಗಳನ್ನ ನೀಡಿದೆ.ಮಧ್ಯಕಾಲೀನ ಹಾಗೂ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಡಳಿತ ನೆಡಿಸಿ, ವಿಸ್ತಾರ ಸಾಮ್ರಾಜ್ಯ ಹೊಂದಿದ್ದ ಹೆಗ್ಗಳಿಕೆ ಕೆಳದಿ ರಾಜಮನೆತನ ಸಲ್ಲುತ್ತದೆ.

ಕೆಳದಿ ರಾಜಮನೆತನ ಆಳ್ವಿಕೆಯ ಒಳಪಟ್ಟ ಕರ್ನಾಟಕ 












ಕೆಳದಿ ರಾಮೇಶ್ವರ, ಇಕ್ಕೇರಿ ಅಘೋರೇಶ್ವರ ದೇವಾಲಯದ ಬಿದನೂರು ಕೋಟೆ ಹೀಗೆ ಹಲವು ವಿಶಿಷ್ಟಪೂರ್ಣ ವಾಸ್ತುಶಿಲ್ಪ ಕಲೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದು ಕೆಳದಿರಾಜಮನೆತನಗಳ ಭವ್ಯ ಪರಂಪರೆಗೆ ಹಿಡಿದ ಕೈಗನ್ನಡಿ.

ಹೌದು ಕರ್ನಾಟಕದ ಶಿವಮೊಗ್ಗದಲ್ಲಿ ತಾಜ್​​ಮಹಲ್​​ ಕಟ್ಟುವ 50 ವರ್ಷ ಗಳ ಮುನ್ನ ಕಟ್ಟಿಸಲಾದ ಪ್ರೇಮದ ಕಾಣಿಕೆ ಇದೆ ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ಕೆಳದಿ ಅರಸ, ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿಯ ನೆನಪಿನಲ್ಲಿ ಈ ಸರೋವರ ಕಟ್ಟಿಸಿದ್ದನು ಎನ್ನಲಾಗಿದೆ..

ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ತಾಜ್​​ಮಹಲ್​​ಗೂ ಮುನ್ನ 50 ವರ್ಷಗಳ ಹಿಂದೆ ಕಟ್ಟಿಸಲಾದ ಪ್ರೀತಿಯ ಸಂಕೇತ ಇದೆ. ಕೆಳದಿ ಅರಸ ಹಿರಿಯ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿ ಚಂಪಕ ಸರಸಿ ಹೆಸರಿನಲ್ಲಿ ಸರೋವರವೊಂದನ್ನು ಕಟ್ಟಿಸಿದ್ದನು ಎನ್ನಲಾಗಿದೆ. ಸಂಪಿಗೆ ಮರಗಳು ಹೆಚ್ಚಾಗಿ ಇರುವ ಈ ಸ್ಥಳದಲ್ಲಿ ಸರೋವರವನ್ನು ಕಟ್ಟಿಸಿದ್ದರಿಂದ ಇದಕ್ಕೆ ಸಂಪಕ ಸರಸು ಎಂದು ಕೂಡಾ ಕರೆಯಲಾಗುತ್ತದೆ.ಸರಸು ಎಂದರೆ ಕೊಳ ಎಂಬ ಅರ್ಥ ಕೂಡಾ ಇದೆ.

 1592 ರ ತಾಜ್​​ಮಹಲ್​​ ಕಟ್ಟುವ 50 ವರ್ಷಗಳ ಮುನ್ನ ಕಟ್ಟಿಸಲಾದ ಪ್ರೇಮದ ಕಾಣಿಕೆ ಚಂಪಕ ಸರಸಿ ಎಂಬ ಹೆಸರು ಉಲ್ಲೇಖವಾಗಿದೆ.

ಕರ್ನಾಟಕ ಪ್ರವಾಸೋದ್ಯಮದ ಪ್ರಸಿದ್ಧ ಟ್ಯಾಗ್ ಲೈನ್  ಒಂದು ರಾಜ್ಯ ಹಲವು ಜಗತ್ತು ಎಂಬ ಬರಹ ಅಕ್ಷರಸಹ ಸತ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಂದು ಭಾರತದಲ್ಲಿ ಕರ್ನಾಟಕ ಅತಿ ಹೆಚ್ಚು ಪ್ರವಾಸಿಗರನ್ನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ ಆದರೆ. ಸರಿಯಾದ ಮೂಲಭೂತ ಸವಲತ್ತು, ಮಾಹಿತಿ ಕೊರತೆ ಪುರಾತನ ಸ್ಥಳಗಳ ಜೀರ್ಣೋದ್ದಾರ  ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿರುವುದು ವಿಪರ್ಯಾಸವೇ ಸರಿ..






Post a Comment

Previous Post Next Post