ಕೇಂದ್ರ ಸರ್ಕಾರ ಹೊಸ ಕೃಷಿನೀತಿ ಮತ್ತು ಎಪಿಎಂಸಿ ತಿದ್ದುಪಡಿ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಗಲ್ಲಿಗೇರಿಸುವಂತಹ ಶಾಸನ.ಹೊಜವೇ ಅಧ್ಯಕ್ಷ: ಆರ್. ಎನ್ ಮಂಜುನಾಥ್..

ರಿಪ್ಪನ್ ಪೇಟೆ :

ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ವಿವಿಧ ಸಂಘ ಸಂಸ್ಥೆಗಳ ಹಾಗೂ ರಾಜಕೀಯ ಪಕ್ಷಗಳ ಸಹಕಾರದಿಂದ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ರಾಜ್ಯ ಜ್ಯಾತ್ಯಾತೀತ ಜನತಾದಳ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಹೇಳಿದರು .

ಪಟ್ಟಣದ ಗ್ರಾಮ ಪಂಚಾಯತಿಯ ಕುವೆಂಪು ಸಭಾಂಗಣದಲ್ಲಿ ಇಂದು ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರದ ಕೃಷಿ ವಿರೋಧಿ ಶಾಸನ ಮತ್ತು ರಾಜ್ಯದ ಎಪಿಎಂಸಿ ತಿದ್ದುಪಡಿಯ ಶಾಸನದಿಂದ ರಾಷ್ಟ್ರದ ರೈತರು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.ಕೃಷಿ ವಿರೋಧಿ ಶಾಸನ ಮತ್ತು ಎಪಿಎಂಸಿ ತಿದ್ದುಪಡಿ ರದ್ದುಪಡಿಸಬೇಕೆಂದು ದೇಶದ 500 ಕ್ಕೂ ಅಧಿಕ ವಿವಿಧ ಸಂಘಟನೆಗಳಿಂದ ಕೂಡಿದ ಸಂಯುಕ್ತ ಕಿಸಾನ್ ಮೋರ್ಚಾ ಮೂಲಕ ಕಳೆದ ಕೆಲವು ತಿಂಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಸಹ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮನ್ನಣೆ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನಲೆಯಲ್ಲಿ ದೇಶದ ರೈತ ಸಂಘಟನೆಗಳು ಸೆಪ್ಟೆಂಬರ್27 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಹಾಗೂ ಆಡಳಿತ ಪಕ್ಷ ಹೊರತುಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ ಇದಕ್ಕೆ ರೈತರು ಕೃಷಿ ಕಾರ್ಮಿಕರು,ಕೂಲಿ ಕಾರ್ಮಿಕರು ಹೊಟೇಲ್, ಅಂಗಡಿ ಹಾಗೂ ಶಿಕ್ಷಣ ಸಂಸ್ಥೆಗಳ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

"ಕೇಂದ್ರ ಸರ್ಕಾರ ಹೊಸ ಕೃಷಿನೀತಿ ಮತ್ತು ಎಪಿಎಂಸಿ ತಿದ್ದುಪಡಿ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಗಲ್ಲಿಗೇರಿಸುವಂತಹ ಶಾಸನ"

ಹೊಸನಗರ ಜನಪರ ವೇದಿಕೆಯ ಅಧ್ಯಕ್ಷ ಆರ್ ಎನ್ ಮಂಜುನಾಥ್ ಮಾತನಾಡಿ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಮಧ್ಯಮ ವರ್ಗ ಹಾಗೂ ಬಡವರ್ಗದ ಜನರ ಮೇಲೆ ಆರ್ಥಿಕ ದೌರ್ಜನ್ಯ ಮಾಡುತ್ತಿದ್ದು ಗ್ಯಾಸ್,ಪೆಟ್ರೋಲ್ ,ಡಿಸೇಲ್ ಬೆಲೆಗಳನ್ನು ಏರಿಸುವುದರ ಮೂಲಕ ದಿನ ಉಪಯೋಗಿ ವಸ್ತುಗಳ ಬೆಲೆ ಏರುವಂತೆ ಮಾಡಿದ್ದು ಇದರಿಂದ ಬಡವರು , ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಹಾಗೇಯೆ ಕೇಂದ್ರ ಸರ್ಕಾರ ಹೊಸ ಕೃಷಿ ನೀತಿ ಮತ್ತು ಎಪಿಎಂಸಿ ತಿದ್ದುಪಡಿ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಗಲ್ಲಿಗೇರಿಸುವಂತಹ ಶಾಸನವಾಗಿದ್ದು ಅವುಗಳನ್ನು ರದ್ದುಪಡಿಸಬೇಕೆಂದು ಹೊಸನಗರ ತಾಲೂಕ್ ಜನಪರ ವೇದಿಕೆ ಸೆಪ್ಟೆಂಬರ್ 27 ರ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಪತ್ರೀಕಗೋಷ್ಟಿಯಲ್ಲಿ ರೈತ ಸಂಘದ ಸುಗಂಧರಾಜ್ ,ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಆರ್ ಎನ್ ಮಂಜಪ್ಪ,ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ,ಜೆಡಿಎಸ್ ಮುಖಂಡ ಮುಡುಬಾ ಧರ್ಮಪ್ಪ ,ಕಾಂಗ್ರೆಸ್ ಹಿರಿಯ ಮುಖಂಡ ಚಂದಾಳದಿಂಬ ಡಾಕಪ್ಪ ಇನ್ನಿತರರಿದ್ದರು.

ವರದಿ :ರಫಿ ರಿಪ್ಪನ್ ಪೇಟೆ

ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ*✍️✍️✍️

 WhatsApp group: https://chat.whatsapp.com/Fg3GgcyKcftDE2mITYSeEq

Post a Comment

Previous Post Next Post