ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ; ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ!!

 ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ; ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ"!!



ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ದಿನಕ್ಕೆ 1200 ಪ್ರವಾಸಿಗರಿಗಷ್ಟೇ ಅವಕಾಶ ನೀಡಲಾಗಿದ್ದು, 300 ವಾಹನಗಳು ಮಾತ್ರ ಬರಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಇತರೆ ಪ್ರವಾಸಿ ತಾಣಕ್ಕೂ ನಿಯಮಿತ ಸಂಖ್ಯೆಯಲ್ಲಿ ಮಾತ್ರ ಪ್ರವಾಸಿಗರು ಬರಲು ಅವಕಾಶ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಂದು ತಿಳಿಸಿದ್ದಾರೆ.


ಬೆಳಗ್ಗೆ 6 ರಿಂದ 9ಗಂಟೆವರೆಗೆ 150 ವಾಹನ, 600 ಪ್ರವಾಸಿಗರು ಮತ್ತು ಮಧ್ಯಾಹ್ನ 2 ರಿಂದ 4ರವರೆಗೆ 150 ವಾಹನ, 600 ಪ್ರವಾಸಿಗರು ಎಂದು ನಿಗದಿ ಪಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.


ಕಳೆದೊಂದು ತಿಂಗಳಲ್ಲಿ ಮುಳ್ಳಯ್ಯನಗಿರಿಗೆ 87 ಸಾವಿರ ಪ್ರವಾಸಿಗರು ಬಂದಿದ್ದರು. ಹೀಗಾಗಿ ಕೊರೊನಾ ಹೆಚ್ಚುತ್ತಿರುವ ಸಮಯವನ್ನು ಗಣನೆಗೆ ತೆಗೆದುಕೊಂಡು ಪ್ರವಾಸಿಗರನ್ನು ನಿರ್ಬಂಧಿಸಲು ಜಿಲ್ಲಾಡಳಿತ ಆಗ್ರಹಿಸಿದೆ.

ಶಿವಮೊಗ್ಗ ಸುದ್ದಿ...




Post a Comment

Previous Post Next Post