ನೆಟ್ವರ್ಕ್ ಸಮಸ್ಯೆ ಕುರಿತು ಶಾಸಕ ಹರತಾಳು ಹಾಲಪ್ಪ, ಸಂಸದರೊಂದಿಗೆ ಜಿಲ್ಲಾಧಿಕಾರಿಗಳೊಂದಿಗೆ, ಮಹತ್ವದ ಸಭೆ...?!!
ಶಿವಮೊಗ್ಗ : ಎರಡು ದಿನಗಳ ಹಿಂದಷ್ಟೇ ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ ಶ್ರೀ ಹಾಲಪ್ಪ ನವರಿಂದ ಮಲೆನಾಡ ನೆಟ್ವರ್ಕ್ ಸಮಸ್ಯೆ ಕುರಿತು ರಾಜ್ಯ ಮುಖ್ಯಯ ಕಾರ್ಯದರ್ಶಿ ರವಿಕುಮಾರ್ ಅವರನ್ನ ಭೇಟಿ ಮಾಡಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದ್ದರು. ಇದಾದ ಬೆನ್ನಲ್ಲೇ ಇಂದು ಮಾನ್ಯ ಶಾಸಕರು ಶಿವಮೊಗ್ಗ ಜಿಲ್ಲಾ ಸಂಸದರಾದ ಬಿವೈ ರಾಘವೇಂದ್ರ ಹಾಗೂ ಜಿಲ್ಲಾಧಿಕಾರಿಗಳಾದ ಕೆಬಿ ಶಿವಕುಮಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
ನೆಟ್ ವರ್ಕ್ ಸಮಸ್ಯೆ ಕುರಿತು ಸಂಸದರಾದ ಬಿ.ವೈ ರಾಘವೇಂದ್ರ ರವರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೆಡೆದ ಸಭೆಯಲ್ಲಿ ಪಾಲ್ಗೊಂಡು, ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ,
ಸಾಗರ-ಹೊಸನಗರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, IT-BT ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುವ ( Work from home) ಉದ್ಯೋಗಿಗಳಿಗೆ ಅನಾನುಕೂಲಗಳಾಗುತ್ತಿದೆ. ಹಾಗೂ
"ನೋ ನೆಟ್ವರ್ಕ್ ನೋ ವೋಟಿಂಗ್ "
ಅಭಿಯಾನ ಮೂಲಕ ಹೋರಾಟ ನೆಡೆಸುತ್ತಿರುವವರಿಗೆ ನಾನು ಬೆಂಬಲ ಸೂಚಿಸಿದ್ದೇನೆ. ಸರ್ಕಾರದ ಹಂತದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸತತವಾಗಿ ಪ್ರಯತ್ನಿಸುತ್ತಿದ್ದೇನೆ.
ಶುಕ್ರವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, #ಖಾಸಗಿ ನೆಟ್ ವರ್ಕ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನೆಡೆಸುತ್ತೇವೆ, ನನ್ನ ಕ್ಷೇತ್ರದ ಶೇ 50% ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ, ಗುಡ್ಡಗಾಡು ಪ್ರದೇಶ ವಾಗಿರುವುದರಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಕೆಲ ತಿಂಗಳಲ್ಲಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮುಂದಿನ ಹಂತದ ಬೆಳವಣಿಗೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
*ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ*✍️✍️✍️
WhatsApp group: https://chat.whatsapp.com/Fg3GgcyKcftDE2mITYSeEq
Tags:
ಮಲೆನಾಡು