ಮಲೆನಾಡ ನೆಟ್ವರ್ಕ್ ಸಮಸ್ಯೆ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಭೇಟಿ ಹಾಗೂ ಮನವಿ !!!

ಮಲೆನಾಡ ನೆಟ್ವರ್ಕ್ ಸಮಸ್ಯೆ ಕುರಿತು ರಾಜ್ಯ ಮುಖ್ಯಕಾರ್ಯದರ್ಶಿ ಭೇಟಿ, ಹಾಗೂ ಚರ್ಚೆ ಮಾಡಿದ.. ಸಾಗರ -ಹೊಸನಗರ ಕ್ಷೇತ್ರ ಶಾಸಕರು!!..



ಹೊಸನಗರ: ಹೌದು ದಶಕಗಳ ನೆಟ್ವರ್ಕ್ ಸಮಸ್ಯೆ ಇನ್ನಾದರೂ ಪರಿಹಾರ ಸಿಗುವುದೋ ಕಾದುನೋಡಬೇಕಾಗಿದೆ. ಮಲೆನಾಡಲ್ಲಿ ಕೊರೊನ ಲಾಕ್ ಡೌನ್ ನಂತರ ನೆಟ್ವರ್ಕ್ ಸಮಸ್ಯೆಯು ತೀವ್ರತೆಗೊಂಡಿದ್ದು, ಶಾಲಾ ಮಕ್ಕಳು ಹಾಗೂ IT ಉದ್ಯೋಗಿಗಳು ನೆಟ್ವರ್ಕ್ ಸಮಸ್ಯೆಗಳಿಗೆ ಬೇಸತ್ತು ಹೋಗಿದ್ದು, ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದು, ವಿದ್ಯಾಭ್ಯಾಸಕ್ಕೆ ಸಾಕಷ್ಟು ಹೊಡೆತ ನೀಡಿದೆ. 

ಹೊಸನಗರ ತಾಲೂಕಿನ ವಾರಂಬಳ್ಳಿ ಯುವಕ  ಶ್ರೀ ವಿನಾಯಕ್ ಪ್ರಭು ಅವರು ತಮ್ಮ್ ಊರಿನ ನೆಟ್ವರ್ಕ್ ಸಮಸ್ಯೆ ಕುರಿತು ವಿಸ್ತೃತ ಪತ್ರವನ್ನ ಪ್ರಧಾನಿ ಕಾರ್ಯಲಯಕ್ಕೆ ಬರೆದಿದ್ದು ಪ್ರಧಾನಿ ಕಚೇರಿಯಿಂದ ಸ್ಥಳೀಯ ಅಧಿಕಾರಿಗಳಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದರು ಸಹ ಪ್ರಯೋಜನವಾಗಿಲ್ಲ.ತಾಲೂಕಿನ ಜನರು ಸಾಕಷ್ಟು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನೆಟ್ವರ್ಕ್ ಸಮಸ್ಯೆ ಕಿಂಚಿತ್ತೂ ಸ್ಪಂದನೆ ದೊರಕದೆ ಇರುವುದು ಕಂಡು ಬೇಸತ್ತು ಹೋಗಿದ್ದಾರೆ.

ಸಾಗರದಲ್ಲಿ ಸಹ ಇದೆ ರೀತಿಯ ಸಮಸ್ಯೆ ತಲೆದೋರಿದ್ದು ಕರೂರು ಹೋಬಳಿ ಮಟ್ಟದ, ಎಸ್, ಎಸ್ ಬೋಗ್ ಗ್ರಾಮ ಪಂಚಾಯತ್ ಗ್ರಾಮಸ್ಥರು ಪ್ರತಿಭಟನೆ ನೆಡೆಸಿ, ಕೂಡಲೇ ನೆಟ್ವರ್ಕ್ ಸಮಸ್ಯೆಯನ್ನ ಬಗೆಹರಿಸುವಂತೆ,ಸರ್ಕಾರಕ್ಕೆ ಅಧಿಕಾರಿಗಳಿಗೆ  ಮನವಿ ಮಾಡಿದ್ದಾರೆ. 
ಕರೂರು ಹೋಬಳಿಯಲ್ಲಿ ಈ ಬಾರಿ ಕುದರೂರುನಲ್ಲಿ ಜಿಲ್ಲಾ ಮತ್ತು  ತಾಲೂಕು ಪಂಚಾಯತ್, ಚುನಾವಣೆಯನ್ನ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದು  "ನೋ ನೆಟ್ವರ್ಕ್ ನೋ ವೋಟಿಂಗ್ "ಅಭಿಯಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. 

ಈ ಎಲ್ಲಾ ಬೆಳವಣಿಗೆಗೆ ಸಂಬಂದಿಸಿದಂತೆ ಸಾಗರ -ಹೊಸನಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಗಮನಕ್ಕೆ ತರಲಾಗಿದ್ದು ಶಾಸಕರು ಸಹ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನೆಡಿಸಿದ್ದಾರೆ. 
ಇಂದು ನೆಟ್ವರ್ಕ್ ಸಮಸ್ಯೆಗೆ ಅನುಗುಣವಾಗಿ ಶಾಸಕರು 
ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್ ರವರನ್ನು ಭೇಟಿಯಾಗಿ.....




ಸಾಗರ, ಹೊಸನಗರ,   ಮಲೆನಾಡು ಪ್ರದೇಶವಾಗಿದ್ದು. ಗ್ರಾಮೀಣ_ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು, IT-BT ನೌಕರರು ಕೆಲಸ ನಿರ್ವಹಿಸಲು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತುಂಬಾ ಅನಾನುಕೂಲಗಳಾಗುತ್ತಿದ್ದು.

ಸಾಗರ-ಹೊಸನಗರ ತಾಲ್ಲೂಕುಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಂಪರ್ಕ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಬಾಗಿತ್ವದಲ್ಲಿ, ಅನುದಾನ ಬಿಡುಗಡೆ ಮಾಡುವ ಕುರಿತು ಚರ್ಚಿಸಿದರು .
 ಈ ಸಂಧರ್ಭದಲ್ಲಿ IT-BT ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ ಯವರು ಉಪಸ್ಥಿತರಿದ್ದರು...





Post a Comment

Previous Post Next Post