ಮಾರುತಿಪುರ:ಪುಣಜೆ ಶಿಥಿಲಗೊಂಡ ಶರ್ಮಾನವತಿ ಸೇತುವೆ

ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಹೊಸಮನೆ-ಪುಣಜೆ ಸಂಪರ್ಕ ಶರ್ಮನವತಿ ಸೇತುವೆ ಶಿಥಿಲ!!!


ಹೊಸನಗರ:ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾರುತಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಪುಣಜೆ ಗ್ರಾಮದ ಶರ್ಮನವತಿ ನದಿ ತುಂಬಿ ಹರಿಯುತ್ತಿದ್ದು, ಹೊಸಮನೆಯಿಂದ ಚಿಕ್ಕಮಣತಿ, ಗುಬ್ಬಿನಜಡ್ಡು, ಶಾಂತನಾಗದ್ದೆ, ಹಿರೇಮಣತಿ, ಮುತ್ತುರು, ಹೀಗೆ ಅನೇಕ ಊರಿಗೆ ಸಂಪರ್ಕ ಕೊಂಡಿ ಆಗಿ ನಿರ್ಮಿಸಿದ ಸೇತುವೆ 50/60 ವರ್ಷಕ್ಕೂ ಹಿಂದಿನ ಸೇತುವೆ ಆಗಿದ್ದು.. ಸೇತುವೆ ಶಿಥಿಲವಾಗಿದ್ದು ಸೇತುವೆಯ ತಡೆಗೋಡೆ ಸಹ ಇಲ್ಲದೆ ಹತ್ತಾರು ವರ್ಷ ಆಗಿದೆ... ಈ ಸೇತುವೆ ಮೇಲೆ ಪ್ರತಿನಿತ್ಯ ನೂರಾರು ವಾಹನಗಳು, ಶಾಲಾ ಮಕ್ಕಳು, ಓಡಾಡುವ  ಸಂಪರ್ಕ ನಾಡಿ ಆಗಿದೆ..
ಕಳೆದ ನಾಲ್ಕು ದಿನದಿಂದ ಸುರಿದ ಬಾರಿ ಮಳೆಗೆ ಶರ್ಮಾನತಿ ಗರಿಷ್ಟ ಮಟ್ಟ ತಲುಪಿದ್ದು, ತುಂಬಿ ಹರಿಯುತ್ತಿರುವ ಸೇತುವೆ ಮೇಲೆ, ಸಂಚಾರ ಮಾಡಲು ಊರಿನ ಗ್ರಾಮಸ್ಥರು ಭಯಬೀತರಾಗಿದ್ದಾರೆ, ಸಾಕಷ್ಟು ವರ್ಷ ಹಳೆಯದಾದ ಸೇತುವೆ ಮೇಲೆ ಓಡಾಡಲು ಜನರು  ಆತಂಕ ವ್ಯಕ್ತಪಡಿಸಿದ್ದಾರೆ.

ತಡೆಗೋಡೆ ಇಲ್ಲದ ಕಾರಣ 
 ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಸೇತುವೆ ಮೇಲೆ ಕಳಿಸಲು ಪೋಷಕರಿಗೆ ಭಯಬೀತವಾಗಿದೆ.... ಆಡುವ ವಯಸ್ಸಿನ ಮಕ್ಕಳು ನೀರನ್ನು ಆಡಲು ಹೋದರೆ ಶರ್ಮಾನವತಿ  ಪಾಲು ಕಟ್ಟಿಟ್ಟ ಬುತ್ತಿ.... ದಯವಿಟ್ಟು ಸಂಬಂಧ ಪಟ್ಟವರು ಇದನ್ನ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯ..ಮಾಡಿದ್ದಾರೆ 

Post a Comment

Previous Post Next Post