ಮುಂದಿನ ಮುಖ್ಯಮಂತ್ರಿ ಆಗ್ತಾರಾ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ?
ತೀ ರ್ಥಹಳ್ಳಿ : ರಾಜ್ಯದಲ್ಲಿ ಬಾರಿ ಕುತೂಹಲ ಮೂಡಿಸಿರುವ ವಿಚಾರ ಅಂದರೆ ಅದು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು
ಹೌದು ರಾಜಾಹುಲಿ ಎಂದೇ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಿ ಎಸ್ ಯಡಿಯೂರಪ್ಪನವರು ತಮ್ಮ ಸರ್ಕಾರ ಎರಡು ವರ್ಷ ತುಂಬಿದ ಹಿನ್ನೆಲೆ ಇದೆ 26 ರಂದು ರಾಜೀನಾಮೆ ಕೊಡುತ್ತಾರೆ ಎಂಬುದು ಈಗ ಸದ್ಯಕ್ಕೆ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬುದಕ್ಕೆ ಈಗ ಬಹುತೇಕ ಉತ್ತರ ಸಿಕ್ಕಿದಂತಿದೆ
ಹೌದು ಅವರು ಬೇರಾರು ಅಲ್ಲ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶಾಸಕರಾಗಿರುವ ಆರಗ ಜ್ಞಾನೇಂದ್ರ
ಒಕ್ಕಲಿಗ ಸಮುದಾಯದಲ್ಲಿ ಆರಗ ಜ್ಞಾನೇಂದ್ರ ಹೆಸರು ಕೇಳಿ ಬರುತ್ತಿದ್ದು ಸತತವಾಗಿ ನಾಲ್ಕು ಬಾರಿ ಎಂಎಲ್ ಎ ಆಗಿದ್ದರು ಸಹ ಸಚಿವ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಲಾಭಿ ಮಾಡದ ಇವರು ಈಗ ಮುಖ್ಯಮಂತ್ರಿ ಆಗ್ತಾರಾ ಎಂಬ ಪ್ರೆಶ್ನೆ ರಾಜಕೀಯದಲ್ಲಿ ಹರಿದಾಡುತ್ತಿದೆ
ಇವರು ವಿದ್ಯಾರ್ಥಿ ಜೀವನದಿಂದಲೂ ಸಹ ಎ ಬಿ ವಿ ಪಿ ನಂತರ ಆರ್ ಎಸ್ ಎಸ್ ಹೀಗೆ ಬೆಳೆದು ರಾಜಕೀಯ ಪ್ರವೇಶ ಮಾಡಿದ ವ್ಯಕ್ತಿ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸ ಕೂಡ ಮಾಡಿದ್ದರು.
ಇಂತಹ ವ್ಯಕ್ತಿಗೆ ಈಗ ಮುಖ್ಯಮಂತ್ರಿ ಪದವಿ ನೀಡಲು ಸ್ವತಃ ಹೈಕಮಾಂಡ್ ಸಹ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
*ಆರಗ ಜ್ಞಾನೇಂದ್ರ ಅವರಿಗೆ ಚಾನ್ಸ್ ಯಾಕೆ ?*
1. ಆರ್ ಎಸ್ ಎಸ್ ಕಟ್ಟಾಳು, ಪಕ್ಷದ ನಿಷ್ಠೆ
2. ಯಾವುದೇ ಆರೋಪ ಇಲ್ಲ, ಕ್ಲೀನ್ ಚಿಟ್
3. ಒಕ್ಕಲಿಗ ಸಮುದಾಯದ ನಾಯಕ
4. ಎಲ್ಲರೊಂದಿಗೆ ಹೊಂದಾಣಿಕೆ ಆಗಬಲ್ಲ ಲೀಡರ್
5. ಬಿಜೆಪಿ, ಆರ್ ಎಸ್ ಎಸ್ ಮುಖಂಡರ ಜೊತೆ ನಿಕಟ ಸಂಪರ್ಕ
6. 45 ವರ್ಷದ ರಾಜಕೀಯದಲ್ಲಿ ಯಾವುದೇ ವಿವಾದಾಗಳಿಲ್ಲ
ಈ ಎಲ್ಲಾ ಕಾರಣಗಳಿಂದ ಇವರು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂದು ಹೇಳಲಾಗುತ್ತಿದೆ.
ಇದಕ್ಕೆ ಇದೆ ತಿಂಗಳ 26 ಕ್ಕೆ ಉತ್ತರ ಸಿಗುತ್ತಾ ಕಾಯಬೇಕಿದೆ.
ನ್ಯೂಸ್ ಡೆಸ್ಕ್ : ಶಿವಮೊಗ್ಗ ಸುದ್ದಿ
Tags:
ತೀರ್ಥಹಳ್ಳಿ