ತಾಯಿಯೊಂದಿಗೆ ಹೊಳೆಗೆ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಬಾಲಕ ಸಾವು !
ರಿಪ್ಪನಪೇಟೆ
:ನಿ ನ್ನೆ ಬೆಳಗ್ಗೆ ರಿಪ್ಪನ್ಪೇಟೆ
ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜೇನಿ ಗ್ರಾಪಂನ
ಮುತ್ತಲ ಗ್ರಾಮದ ವಾಸಿ ಶೇಷಗಿರಿ (46) ರವರ
ಹೆಂಡತಿ ಮಧುಮತಿಯರೊಂದಿಗೆ ಮಕ್ಕಳಾದ
ಸಂಜಯ್ ಹಾಗೂ ಸಿದ್ದೇಶ್ ರವರು ಬಟ್ಟೆ
ತೊಳೆಯಲು ಮುತ್ತಲ ಹೊಳೆಗೆ ಹೋಗಿದ್ದು,
ಮಕ್ಕಳು ನೀರಿನಲ್ಲಿ ಆಟವಾಡುತ್ತಿರುವಾಗ 2ನೇ
ಮಗ ಸಿದ್ದೇಶ್ (14) ಈತನು ಆಕಸ್ಮಿಕವಾಗಿ ಕಾಲು
ಜಾರಿ ಹೊಳೆಯ ಗುಂಡಿಗೆ ಬಿದ್ದು, ನೀರಿನಲ್ಲಿ
ಮುಳುಗಿ ಮೃತಪಟ್ಟಿರುತ್ತಾನೆಂದು ಪೊಲೀಸ್
ಠಾಣೆಗೆ ನೀಡಿದ ದೂರಿನ ಅನ್ವಯ ಅಸ್ವಾಭಾವಿಕ
ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.