ಕೊರೊನಕ್ಕೆ ಕ್ಯಾರೇ ಎನ್ನದ ಸಾಗರದ ಜನತೆ

ಅಗತ್ಯವಸ್ತುಗಳ ಖರೀದಿಯನ್ನೇ ಅನಗತ್ಯವಾಗಿ ಬಳಸಿಕೊಳ್ಳುತ್ತಿರುವ ನಗರಪ್ರದೇಶಗಳ ಜನತೆ..!!












ಸಾಗರ :ಹೌದು ಸಾಗರ ಪಟ್ಟಣದಲ್ಲಿ ದಿನೇ ದಿನೇ ಕೊರೊನ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಆದ್ರೂ ಕಿಂಚಿತ್ತೂ ಎಚ್ಛೆತ್ತುಕೊಳ್ಳದೆ ಅನಗತ್ಯ ಓಡಾಟ ಹಾಗೂ, ಮಾಸ್ಕ ಧರಿಸದೇ ಸುತ್ತಾಟ ಮಾಡುವವರ ಸಂಖ್ಯೆಯೇ ಅಧಿಕವಾಗಿ ಕಂಡುಬರುತ್ತಿದೆ, ಇಂದು ಸಾಗರ ಪಟ್ಟಣದ  ಅಶೋಕ ರಸ್ತೆಯಲ್ಲಿನ ಜನಜಂಗುಳಿ. ಕೊರೊನ ಮಹಾಸ್ಪೋಟಕ್ಕೆ ನಾಂದಿಯಾಗುವ ಮುನ್ಸೂಚನೆ  ನೀಡುತ್ತಿದೆ.

ಸಾಗರ SN ನಗರ, ಜೋಸೆಫ್ ನಗರಗಳಲ್ಲಿ ಅತೀ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಮನೆಮಾಡಿದೆ...
ಲಾಕ್ ಡೌನ್ ಸಡಿಲಿಕೆಯನ್ನ ಕೊಂಚ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ... 

ಲಾಕ್ ಡೌನ್ ಹೆಸರಿಗಷ್ಟೇ ಸೀಮಿತವಾಗದೆ ಇನ್ನಷ್ಟು ಬಿಗಿ, ಕಟ್ಟುನಿಟ್ಟಿನ ಕ್ರಮಗಳೊಂದಿಗೆ, ಜಾರಿಗೆತಂದು ಹೆಚ್ಚುತ್ತಿರುವ ಸೋಂಕಿನ ಪ್ರಕರಣ ಸಂಖ್ಯೆಯನ್ನ ನಿಯಂತ್ರಣ ಮಾಡಬೇಕೆಂಬುದು,ಜನಸಾಮಾನ್ಯರ ಅಭಿಪ್ರಾಯವಾಗಿದೆ.... 
ಶಿವಮೊಗ್ಗ : ತಾಲೂಕುವಾರು ಪ್ರಕರಣಗಳು, ಶಿಕಾರಿಪುರ 33,  ಹೊಸನಗರ 69, ಸಾಗರ 197, ಶಿವಮೊಗ್ಗ 261, ಭದ್ರಾವತಿ 106, ತೀರ್ಥಹಳ್ಳಿ 81, ಸೊರಬ 21.... 

Post a Comment

Previous Post Next Post