ಶಿವಮೊಗ್ಗ, ಲಾಕ್ ಡೌನ್ ನಡುವೆಯೂ,ಏರಿದ ಸೋಂಕಿನ ಪ್ರಕರಣಗಳು !
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 850 ಹೆಚ್ಚು ಕೊರೊನ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ, ಕರೋನ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ.
ಅದ್ರಲ್ಲೂ ಸಾಗರ, ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು ಲಾಕ್ ಡೌನ್ ನಡುವೆಯೂ ಸಹ, ನಿಯಂತ್ರಣ ಬಾರದೆ ಇರುವುದು ಇನ್ನಷ್ಟು ಆರೋಗ್ಯ ಇಲಾಖೆಗೆ ತಲೆನೋವಾಗಿದೆ !,ಶಿವಮೊಗ್ಗ ಜಿಲ್ಲೆಯ ಒಟ್ಟು ಇಂದಿನ ಪ್ರಕರಣಗಳ ಸಂಖ್ಯೆ, ಜನರಲ್ಲಿ ಮತ್ತಷ್ಟು ಆತಂಕವನ್ನ ಹೆಚ್ಚಿಸಿದೆ. ತಾಲೂಕುವಾರು ಇಂದಿನ ಕೊರೊನ ಸೋಂಕಿತರ ಸಂಖ್ಯೆಗಳು ಈ ಕೆಳಗಿನಂತಿವೆ.......
1)ಶಿವಮೊಗ್ಗ 252,
2)ಭದ್ರಾವತಿಯಲ್ಲಿ 130,
3)ಶಿಕಾರಿಪುರ 99,
4)ತೀರ್ಥಹಳ್ಳಿ 55,
5)ಸೊರಬ79,
6)ಹೊಸನಗರ 18,
7) ಸಾಗರ 183,
ಹೊರ ಜಿಲ್ಲೆಗಳಿಂದ ಬಂದ 30 ಮಂದಿಗೆ ಸೋಂಕು ತಗುಲಿದ್ದು 6ಜನರು ಇಂದು ಕೊರೊನಗೆ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ ಇವರೆಗೂ 380 ಜನ ಕೊರೊನ ಸೋಂಕಿನಿಂದ ಪ್ರಾಣಕಳೆದುಕೊಂಡಿದ್ದಾರೆ
ಇಂದು 500 ಕ್ಕೂ ಹೆಚ್ಚು ಮಂದಿ ಕೊರೊನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.. ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ..