ಪ್ರಕೃತಿ ಮನುಷ್ಯನ ಆಸೆಗಳನ್ನ ಪೂರೈಸುತ್ತದೆಯೇ ಹೊರತು ಅವನ ದುರಾಸೆಗಳನ್ನಲ್ಲ...!
ಹೊಸನಗರ: ಪ್ರಕೃತಿ ಮಾತೆಯು ಮನುಷ್ಯನ ಆಸೆಗಳನ್ನು ಪೂರೈಸುತ್ತದೆಯೇ ಹೊರತು ಅವನ ದುರಾಸೆಗಳನ್ನು ಅಲ್ಲ ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ ಮಲೆನಾಡ ಮಡಿಲು ಕೊಲ್ಲೂರ ತಪ್ಪಲು ಕೊಡಚಾದ್ರಿಯ ಬುಡಕ್ಕೆ ಅಭಿವೃದ್ಧಿಯ ನೆಪದಲ್ಲಿ ನಡೆಯುವ ಶೋಷಣೆಯನ್ನು ನಾವು ಇನ್ನಾದರೂ ಪ್ರತಿಭಟಿಸಬೇಕು ಕೊಡಚಾದ್ರಿ ಅರಣ್ಯರೋಧನೆಯನ್ನ, ಕಂಬನಿಯನ್ನ ಒರೆಸಲೇಬೇಕು ಇದು ಮಲೆನಾಡ ಅಸ್ತಿತ್ವ, ಅಸ್ಮಿತೆಯ, ಅಳಿವು-ಉಳಿವಿನ ಪ್ರಶ್ನೆ???
ಯಾಕೆಂದರೆ ನಾವು ಇಂದು ನೋಡುತ್ತಿರುವ ಪಶ್ಚಿಮಘಟ್ಟಗಳ ಪ್ರಾಕೃತಿಕ ಸಂಪತ್ತು ಇಂದು ನಿನ್ನೆಯದಲ್ಲ. ಒಂದೇ ವರ್ಷಕ್ಕೆ ಆದ ಬೆಳೆದು ನಿಂತ ಸಸ್ಯಸಂಪತ್ತಲ್ಲಾ, ವರ್ಷಕ್ಕೆ ಒಮ್ಮೆ ವನಮಹೋತ್ಸವದ ದಿನ ಅಥವಾ ಪರಿಸರದ ದಿನ ನೆಟ್ಟು ಬೆಳಿಸಿದ ಗಿಡಗಳು ಅಲ್ಲವೇ ಅಲ್ಲ. ತಾಯಿ ಶ್ರೀ ಕೊಲ್ಲೂರು ಮೂಕಾಂಬಿಕೆಯ ಮೂಗುತಿಯಂತೆ ಕಂಗೊಳಿಸುತ್ತಿರುವ ಕೊಡಚಾದ್ರಿಯನ್ನು ಕಾಪಾಡುವ ಜವಾಬ್ದಾರಿ ಕೂಡ ನಮ್ಮದೇ......!!!!!
ಹೊಸನಗರ ಎಂದ ತಕ್ಷಣ ನಮಗೆ ನೆನಪಾಗುವುದು ಒಂದು ಹುಲಿಕಲ್ ಘಾಟ್ ಇನ್ನೊಂದು ಅತಿ ಸುಪ್ರಸಿದ್ದ ಯಾತ್ರಾ ಸ್ಥಳ ಕೊಡಚಾದ್ರಿ. ಆದಿಗುರು ಶಂಕರಾಚಾರ್ಯರು ತಪವಗೈದಾ ಕೊಡಚಾದ್ರಿ ತಪೋವನ, ಇಂದು ಪ್ರವಾಸೋದ್ಯಮದ, ಆಧುನಿಕತೆಯ ಹೆಸರಲ್ಲಿ ಕೊಡಚಾದ್ರಿಗೆ ಕಿರುಕುಳ ನೀಡುವ ಅನೇಕರು ಮಲೆನಾಡ ಮುಗ್ದಮನಸ್ಸುಗಳಿಗೆ ಘಾಸಿ ಉಂಟುಮಾಡಿದ್ದಾರೆ. ಕೊಡಚಾದ್ರಿಗೆ ರೊಪ್ ವೇ ಎನ್ನುವ ಮರಣ ಶಾಸನದಿಂದ ಕೊಡಚಾದ್ರಿಯ ಒಡಲನ್ನ ಬಗೆಯಲು ಮುಂದಾಗಿದ್ದಾರೆ.
ಹೊಸನಗರದ ಐಡೆಂಟಿಟಿಯ ಹೆಗ್ಗುರುತಾಗಿರುವ ನಮ್ಮ "ಕೊಡಚಾದ್ರಿ " ಇಂದು ಸಂಕಷ್ಟದಲ್ಲಿ ಸಿಲುಕಿದೆ. ' ಡಾ.ಕಸ್ತೂರಿ ರಂಗನ್ ವರದಿಯ' ಅನ್ವಯ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಬೃಹತ್ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಾರದು ಎಂದು ವರದಿ ಹೇಳಿದರೂ ಕೂಡ ಸರ್ಕಾರದ ಜಾಣನೆಡೆಗೆ ಏನ್ ಹೇಳ್ಬೇಕು ಗೊತ್ತಾ ಆಗ್ತಾ ಇಲ್ಲಾ.
ಮಲೆನಾಡ ಜ್ವಲಂತ ಸಮಸ್ಯೆಗಳಿಗೆ ಇನ್ನೂ ಶಾಂತಿ ಸಿಗದೇ ಒದ್ದಾಡ್ತಾ ಇರುವಾಗ ಅದನ್ನ ಬಿಟ್ಟು ಪರಿಸರದ ವಿನಾಶಕ್ಕೆ ಒಂಟಿ ಕಾಲಿನಲ್ಲಿ ನಿಂತಿರುವುದು ನಮ್ಮ ಮಲೆನಾಡ ವಿನಾಶಕ್ಕೆ ದಾರಿ ಮಾಡಿಕೊಟ್ಟಿದೆ.
ರೋಪ್ ವೇಯನ್ನ ವಿರೋಧ ಮಾಡುತ್ತಿರುದಕ್ಕೆ ಮುಖ್ಯ ಕಾರಣಗಳಿವೆ....
- ಕೊಡಚಾದ್ರಿಯಲ್ಲಿ ಇರುವ ಅಪರೂಪದ ಸಸ್ಯ ಸಂಪತ್ತು ಹಾಗೂ ಪ್ರಾಣಿಸಂಪತ್ತಿನ ನಾಶ.
- ಕೊಡಚಾದ್ರಿಯಲ್ಲಿ ಆಗುವ ತೀವ್ರ ಭೂಕುಸಿತ,
- ಬೀದಿಗೆ ಬೀಳಲಿರುವ ಜೀಪ್ ಮಾಲೀಕರ, ಚಾಲಕರ ಕುಟುಂಬಗಳು.!
- ಪ್ರವಾಸಿಗರಿಂದ ಕಸದ ರಾಶಿ ಆಗಿರುವ ಕೊಡಚಾದ್ರಿ ಇನ್ನ ಶೋಚನೀಯ ಪರಿಸ್ಥಿತಿಯ ಮಾಲಿನ್ಯ ಆಗೋದ್ರಲ್ಲಿ ಸಂದೇಹವಿಲ್ಲ.
- ಮಲೆನಾಡು ತನ್ನ ಸ್ವಾಭಾವಿಕತೆಯನ್ನು ಕಳೆದುಕೊಂಳ್ಳುವ ಭೀತಿ.
- ರೋಪ್ ವೇ ಯಿಂದ ಸರ್ಕಾರದ ಬರಿದಾದ ಬೊಕ್ಕಸಕ್ಕೆ ಇನ್ನೂ ಹೊಡೆತ.
- ಮಲೆನಾಡ ಇನ್ನಿತರ ಪ್ರವಾಸಿತಾಣಗಳಲ್ಲಿ ಸರಿಯಾದ ಮೂಲ ಸೌಕರ್ಯ ಸಹ ಅಂಥಹ ಸಮಸ್ಯೆಗೆ ಒತ್ತು ನೀಡದೆ ಮಲೆನಾಡ ಮಾಲಿನ್ಯ ಮಾಡಲು ಹೊರಟಿರುವುದದು ಎಷ್ಟು ಸರಿ?..
- ಪ್ರವಾಸೋದ್ಯಮ ಹೆಸರಲ್ಲಿ ಮಲೆನಾಡಿಗೆ ಆಗುವ ದೌರ್ಜನ್ಯ.,,
- ಪವಿತ್ರ ಯಾತ್ರಾ ಸ್ಥಳವಾಗಿರುವ ಕೊಡಚಾದ್ರಿ ಮೋಜು ಮಸ್ತಿಗಳ ಅಡ್ಡೆಯಾಗಿ ಬದಲಾವಣೆ ಆಗೋದ್ರಲ್ಲಿ ಸಂದೇಹವಿಲ್ಲ.....!!!!
ಹೀಗೆ ಹತ್ತು ಹಲವಾರು ಕಾರಣಗಳು, ನಮ್ಮ್ ಕಣ್ಣ ಮುಂದೆ ಬರುತ್ತದೆ ನಮ್ಮ ಮಲೆನಾಡ ನಮ್ ಕೊಡಚಾದ್ರಿ ಅಂಥ ಸೋಶಿಯಲ್ ಮೀಡಿಯಾದಲ್ಲಿ ಬರಿ ಸ್ಟೇಟಸ್ ಹಾಕಿದ್ರೆ ಹೆಮ್ಮೆ ಪಟ್ರೆ ಸಾಲದು, ಇಂದಿನ ಯುವಕರು ನಮ್ಮ ಹೊಸನಗರ ನಮ್ಮ ಊರು ಅನ್ನುವ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಸಹ ಮಲೆನಾಡ ಬಗ್ಗೆ ಮನದಲ್ಲಿ ಇರಬೇಕು ಅನ್ನೋದು ಎಲ್ಲರ ಅಭಿಲಾಷೆ.. ಕೊಡಚಾದ್ರಿ ಯಾರ ಅಪ್ಪನ ಸ್ವತ್ತಲ್ಲ, ಇದು ಸಾರ್ವಜನಿಕ ಆಸ್ತಿಯು ಅಲ್ಲ ನಿಮ್ಮ ಗಲಭೆ ಹೋರಾಟಕ್ಕೆ ಬೆಂಕಿ ಇಡುವ ಆಸ್ತಿಯಂತೂ ಮೊದಲೇ ಅಲ್ಲ...
ಇದು ತಾಯಿ ಕೊಲ್ಲೂರು ಮೂಕಾಂಬಿಕಾ ದೇವಿಯ ಚರಣ ಕಮಲಗಳನ್ನು ಸ್ಪಶಿಸುವ ಮಲೆನಾಡ ಗಂಗೆ "ಸೌಪರ್ಣಿಕಾ" ನದಿಯ ಉಗಮ ಸ್ಥಾನ ತಾಯಿಯ ಒಡಲಿಗೆ ಕೈ ಹಾಕುವ ಕೆಲಸಕ್ಕೆ ನಾವು ಯಾವುದೇ ಕಾರಣಕ್ಕೂ ಆಸ್ಪದ ಕೊಡುವುದಿಲ್ಲ...
#save_kodachadri_ropeway Goaway
ಬರಹ :ಅಜಿತ್ ಗೌಡ ಬಡೇನಕೊಪ್ಪ 🙏🙏
We don't want rope car in kodachadri
ReplyDelete