ಸರ್ಕಾರಿ ಶಾಲಾ ಶಿಕ್ಷಕಿಯ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ!!!!

ಶಾಲೆಗೆ ಬಾರದ ವಿದ್ಯಾರ್ಥಿಗಳನ್ನ,ಮರಳಿ  ಶಾಲೆಗೆ ಕರೆತರಲು ಮಾಡಿದ ಯೋಜನೆ ಏನು  ??









 ಹೊಸನಗರ:  ತಮ್ಮ ಸ್ವಂತ ಹಣದಿಂದ ಶಾಲೆಗೆ ಸೇರುವ ಮಕ್ಕಳಿಗೆ ಠೇವಣಿ ಇಡುತ್ತಿರುವ "ಸರಕಾರಿ ಶಾಲಾ ಶಿಕ್ಷಕಿ ರೇಖಾ ಪ್ರಭಾಕರ್"

ಕುಂದಾಪೂರ ಶಂಕರನಾರಾಯಣದ ರೇಖಾ ಅವರು ಶಿವಮೊಗ್ಗ ಜಿಲ್ಲೆ ಹೊಸನಗರದ ನೂಲಗ್ಗೇರಿ ಸರಕಾರಿ ಶಾಲೆಗೆ ಶಿಕ್ಷಕಿಯಾಗಿ ಸೇರಿದ್ದು 2010 ರಲ್ಲಿ. ಆಗ 1-7 ತರಗತಿಯ ಆ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಕೇವಲ 20. ಹೊಸದಾಗಿ  ಸೇರ್ಪಡೆ ಆದ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ 2-3 ಮಾತ್ರ ಇತ್ತು 

ರೇಖಾ ಮಕ್ಕಳನ್ನು ಶಾಲೆಗೆ ಕರೆತರಲು ಹಲವಾರು ಪ್ರಯತ್ನ ಪಟ್ಟರು, ಪಾಲಕರನ್ನು ಊರ ಹಿರಿಯರನ್ನು ಭೇಟಿಯಾದರು, ಮಕ್ಕಳಿರುವ ಮನೆ-ಮನೆಗೆ ಹೋದರು ಸಹ  ಪ್ರತಿಫಲ ಸಿಗದೇ ಇರುವಾಗ ಹೊಳೆದದ್ದೆ " ಠೇವಣಿ ಯೋಜನೆ.."

2013-14 ರಿಂದ ಈ ಯೋಜನೆ ಪ್ರಾರಂಭಿಸಿದರು. 1 ನೇ ತರಗತಿಗೆ ಆ ಶಾಲೆಗೆ ಸೇರುವ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ಠೇವಣಿ ಇಡುವುದು. ಆ ಮಗು ಹತ್ತನೇ ತರಗತಿ ಮುಗಿಸಿದ ತಕ್ಷಣ ಬಡ್ಡಿ ಸಮೇತ ಹಣ ದೊರಕುವಂತೆ ಮಾಡಿದ ವ್ಯವಸ್ಥೆಯದು.

ಈ ಯೋಜನೆ ಪರಿಣಾಮದಿಂದ ಈಗ ಅಲ್ಲಿಯ ಮಕ್ಕಳ ಸಂಖ್ಯೆ ಒಟ್ಟು 83. ಇದಕ್ಕಾಗಿ ಅವರು ಬಳಸುವುದು ತಮ್ಮ ಸ್ವಂತ ಹಣವನ್ನು..

ಪತಿ ಪ್ರಭಾಕರ್ ಅವರು ಅರಣ್ಯ  ಇಲಾಖೆಯ ನೌಕರರಾಗಿದ್ದು,  ಪತ್ನಿಯ ಈ ಕಾರ್ಯಕ್ಕೆ ಅವರ ಸಂಪೂರ್ಣ ಬೆಂಬಲ ನೀಡಿದ್ದು ಇನ್ನೂ ಸಹಕಾರಿಯಾಗಿದೆ ಎನ್ನುತ್ತಾರೆ ಶಿಕ್ಷಕಿ... ರೇಖಾ 

"ನಾನು ನನ್ನ ಪತಿ ಕಡುಬಡತನದಲ್ಲೆ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ತುಂಬ ನೆರವಾಗಿದೆ ಅದರ ಪರಿಣಾಮವಾಗಿ  ನಮ್ಮಿಬ್ಬರಿಗೆ ಸರಕಾರಿ ನೌಕರಿ ಲಭಿಸಿದೆ ಹಾಗಾಗಿ ನಾವೂ ನಮ್ಮ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೇವೆ" ಎನ್ನುತ್ತಾರೆ 
ದಂಪತಿಗಳು.... !
ದಂಪತಿಗಳ ಈ ಸಮಾಜಮುಖಿ ಕೆಲಸಕ್ಕೆ  ಅಭಿನಂದನೆಗಳ ಮಹಾಪೂರವೇ "ಸೋಶಿಯಲ್ ಮೀಡಿಯಾದಲ್ಲಿ" ಹರಿದಿದೆ 





-

Post a Comment

Previous Post Next Post