ಹೊಸನಗರ : ಡಾಕ್ಟರ್ ಪ್ರೇಮ್ ಕುಮಾರ್ ರಿಪ್ಪನ್ ಪೇಟೆ,ಅವರಿಗೆ ಈ ಬಾರಿಯ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಪ್ರತಿ ವರ್ಷ ನೀಡಲಾಗುವ ಬೆಂಗಳೂರು ರಮೇಶ್ ಎಸ್ ಜಿ ಸಾರಥ್ಯದ ರಾಜ್ಯ ಮಟ್ಟದ," ಕರ್ನಾಟಕ ಮೀಡಿಯಾ ಹೌಸ್ " ' ಕನ್ನಡ ನುಡಿ -ನಮನ ಹಬ್ಬ ' ಭವ್ಯ ಕಾರ್ಯಕ್ರಮದಲ್ಲಿ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ ಕರುನಾಡ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಅವರ ವೃತ್ತಿಮಾನದ ಜೀವನದ ಸೇವೆಗೆ ಸಂದ ಗೌರವವಾಗಿದೆ..!!
ಈ ಭವ್ಯ ಸರಳ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಖ್ಯಾತ ನಟ ಅನಿರುದ್ಧ ಹಾಗೂ ಕರ್ನಾಟಕದ ಹೆಸರಾಂತ ರಂಗಭೂಮಿ ಕಲಾವಿದ ಮುಖ್ಯಮಂತ್ರಿ ಚಂದ್ರು ಹಾಗೂ ಪ್ರಣಯ ರಾಜ ಡಾಕ್ಟರ್ ಶ್ರೀನಾಥ್ ಅವರೊಟ್ಟಿಗೆ, ಡಾಕ್ಟರ್ ಪ್ರೇಮ್ ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದು, ಸ್ವೀಕರಿಸುತ್ತಿರುವುದು,ಸ್ನೇಹಿತರು ಹಾಗೂ ಸಂಬಂಧಿಕರ ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ!!
ಡಾ. ಪ್ರೇಮ ಕುಮಾರ್ ಜನನ ಹಾಗೂ ಹಿನ್ನೆಲೆ!!
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಮಧ್ಯಮ ವರ್ಗದ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದಿರುವ ಕೃಷಿಕ ದಂಪತಿ ತಿಮ್ಮಪ್ಪ ಗೌಡ, ಜಯಂತಿ ಅವರ ಪುತ್ರನಾಗಿದ್ದು,ಅಪ್ಪಟ ಹಳ್ಳಿ ಪ್ರತಿಭೆ ಡಾ| ಪ್ರೇಮಕುಮಾರ ಅವರ ಇಂದಿನ ಯಶಸ್ಸು ಇಡೀ ಗ್ರಾಮಕ್ಕೆ ಮಾದರಿ ತರುವಂತಹದು!!
ಹೌದು ಬಹುತೇಕ ಯುವಕರು ಉನ್ನತ ವ್ಯಾಸಂಗ ಮಾಡಿ, ನಗರ ಜೀವನಕ್ಕೆ ಮಾರುಹೋಗಿರುವ ಇಂದಿನ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಓದಿ, ಪೋಷಕರ ಕನಸನ್ನ ಸಾಕಾರ ಮಾಡಿರುವ ಹೆಗ್ಗಳಿಕೆ ಪ್ರೇಮ ಕುಮಾರ್ ಅವ್ರಿಗೆ ಸಲ್ಲುತ್ತದೆ
ಇಂದು ನಗರ ಪ್ರದೇಶದ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸೆಡ್ಡು ಹೊಡೆದು ವೈದ್ಯಕೀಯ ವ್ಯಾಸಂಗ ಮಾಡಿ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಸಾಧನೆಗೈಯಬಹದು ಎನ್ನುವುದಕ್ಕೆ ಉತ್ತಮ ನಿದರ್ಶನರಾಗಿದ್ದಾರೆ.!!
ಪ್ರಾಥಮಿಕ, ಹಾಗೂ ಪ್ರೌಢ ಶಿಕ್ಷಣವನ್ನ ಕಲ್ಲೂರು ಹೆದ್ದಾರಿಪುರ ಶಾಲೆ ರಿಪ್ಪನ್ ಪೇಟೆಯಲ್ಲಿ ಪಡೆದು, ಪದವಿಪೂರ್ವ ಶಿಕ್ಷಣವನ್ನ ಅಮೃತ ಕಾಲೇಜು ಗರ್ತಿಕೆರೆ ಪಡೆದು ನಂತರ ವೈದ್ಯಕೀಯ ಪದವಿಗೆ ಅರ್ಹತೆ ಪಡೆದು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ ನಲ್ಲಿ ಪದವಿ ಪಡೆದಿರುತ್ತಾರೆ.ಪ್ರಸ್ತುತವಾಗಿ ಬೆಂಗಳೂರುನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ....