ಶಿವಮೊಗ್ಗ :ಜಿಲ್ಲೆಯ ಆಡಳಿತ ಚುಕ್ಕಾಣಿ " ಮಂತ್ರಿಭಾಗ್ಯ" ಯಾರಿಗೆ ಒಲಿಯಲಿದೆ!! Shivamogga minister

ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಸುಮಾರು 40 ವರ್ಷಗಳ ಹಿಂದಿನ ದಾಖಲೆಯೆ ಬಹುಮತ ಸರ್ಕಾರ ರಚನೆಯಲ್ಲಿ ಡಿಕೆಶಿ,ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸಫಲವಾಗಿದ್ದು,ಕಳೆದ 4 ವರ್ಷದಿಂದ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರಕ್ಕೆ ಆಘಾತ ನೀಡಿದ್ದು ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆಗೆ ಸಿದ್ದವಾಗಿದೆ.ಬಿಜೆಪಿ ಭದ್ರ ಕೋಟೆ ಶಿವಮೊಗ್ಗ -ಚಿಕ್ಕ ಮಗಳೂರು ಉತ್ತರ ಕನ್ನಡ  ಮಲೆನಾಡ ಭಾಗವನ್ನ ಛಿದ್ರ ಗೊಳಿಸಿ,ಕಾಂಗ್ರೆಸ್ ಅಭ್ಯರ್ಥಿಗಳು ಈ ಗೆಲುವಿನ ನಗೆ ಬೀರಿದ್ದಾರೆ.

ನಾಲ್ಕು ಜನ ಮುಖ್ಯಮಂತ್ರಿಗಳನ್ನ ಕೊಟ್ಟಂತಹ ರಾಜಕಾರಣದ ಶಕ್ತಿ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮ ಬಲ ಸಾಧಿಸಿದ್ದು ಶಿಕಾರಿಪುರ ವಿಜೇಂದ್ರ ಯಡಿಯೂರಪ್ಪ, ತೀರ್ಥಹಳ್ಳಿ ಆರಗ ಜ್ಞಾನೇಂದ್ರ,ಶಿವಮೊಗ್ಗ ಸಿಟಿ ಚೆನ್ನಬಸಪ್ಪ, ಭದ್ರಾವತಿ ಸಂಗಮೇಶ,ಶಿವಮೊಗ್ಗ ಗ್ರಾಮೀಣ ಶಾರದಾ ನಾಯ್ಕ್,ಸೊರಬ ಮಧು ಬಂಗಾರಪ್ಪ ವಿಜಯ ಶಾಲಿಯಾಗಿದ್ದಾರೆ...

ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಭಾಗ್ಯ ಯಾರಿಗೆ ಒಲಿಯಲಿದೆ ಎಂಬುದು ಯಕ್ಷ ಪ್ರಶ್ನೆ ಯಾಗಿದೆ..

B K ಸಂಗಮೇಶ : ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಅತ್ಯಂತ ಹಿರಿಯರ ರಾಜಕಾರಣಿ ಹಾಗೂ ಹಿರಿಯರ ಶಾಸಕ ವಯುಕ್ತಿಕ ವರ್ಚಸ್ಸು ಹಾಗೂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡ ನಾಯಕ.ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಏಕೈಕ ಕಾಂಗ್ರೆಸ್ ನಾಯಕರು.ರಾಜಕೀಯದಲ್ಲಿ ಇವರ ವರ್ಚಸ್ಸು ಪಕ್ಕದ ಕ್ಷೇತ್ರದ ಮೇಲೆ ಪರಿಣಾಮ ಬೀರದೆ ಇದ್ದರು ಹಿರಿತನ ಹಾಗೂ ಅನುಭವ ಆಧಾರ ಮೇಲೆ, ಈ ಬಾರಿ ನನಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನೋ ವಿಶ್ವಾಸದಲ್ಲಿ ಸಂಗಮೇಶ..

ಮಧು ಬಂಗಾರಪ್ಪ :ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮಾನಸ ಪುತ್ರ, ಬಂಗಾರಪ್ಪ ನಿಧನ ನಂತರ ಜಾತ್ಯತೀತ ಜನತ ದಳ ಸೇರಿದ ಮಧು ಸಹೋದರ ಸವಾಲ್ ಎಂದೇ ರಾಜ್ಯ ರಾಜಕಾರಣದಲ್ಲಿ ಹೆಸರು ಪಡೆದ ಸೊರಬ ಕ್ಷೇತ್ರದಲ್ಲಿ  ಈ ಬಾರಿ ವಿಜಯಶಾಲಿಯಾಗಿ ಮೊದಲ ಬಾರಿ ಮಾಜಿ ಸಚಿವ ಕುಮಾರ ಬಂಗಾರಪ್ಪ ವಿರುದ್ಧ ತೊಡೆ ತಟ್ಟಿ ವಿಧಾನಸಭೆ ಪ್ರವೇಶ ಮಾಡಿದ್ದರು!!. ಬದಲಾದ ರಾಜಕೀಯ ವಿದ್ಯಾಮಾನಕ್ಕೆ ಅನುಗುಣವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ ಮಲೆನಾಡ ಪ್ರಬಲ ಸಮುದಾಯ ಈಡಿಗ ಸಮುದಾಯದ ಮುಂಚೂಣಿ ಯುವ ನಾಯಕರಾಗುವಲ್ಲಿ ಹಾಗೂ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರು ಆಗಿ ಕಾರ್ಯನಿರ್ವಹಣೆ ಮಾಡಿ, ಬೈ ಎಲೆಕ್ಷನ್ ಶಿವಮೊಗ್ಗ ಲೋಕಸಭೆಯಲ್ಲೂ ಸ್ಪರ್ಧೆ ಮಾಡಿ ರಾಘವೇಂದ್ರ ಯಡಿಯೂರಪ್ಪ ನವರಿಗೆ ಪ್ರಬಲ ಪೈಪೋಟಿ ನೀಡಿದ್ದರು, ಡಿಕೆಶಿ ಆಪ್ತರಾಗಿರುವ ಮಧು ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿಗೆ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು..

ಬೇಳೂರು ಗೋಪಾಲಕೃಷ್ಣ :ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಗರಡಿಯಲ್ಲಿ ಬೆಳೆದ ಬೇಳೂರು ಗೋಪಾಲಕೃಷ್ಣ ಸತತ 2 ಬಾರಿ ಬಿಜೆಪಿ ಯಿಂದ ಸಾಗರ ದಿಂದ ಆಯ್ಕೆಯಾಗಿ ಕಳೆದ ಒಂದು ದಶಕಗಳ ಕಾಲ ಅಧಿಕಾರದಿಂದ ವಂಚಿತರಾಗಿದ್ದರು.ತದನಂತರ 2013 ರ ಚುನಾವಣೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರ ಗರಡಿಯಲ್ಲಿ ಬೆಳೆದು ಸತತಸೋಲುಗಳ ನಡುವೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಹುಟ್ಟು ನೀಡುವ ಮೂಲಕ ಸಾಗರ -ಹೊಸನಗರ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರ ಇಲ್ಲದೆಯೂ ಜನರೊಂದಿಗೆ ಇದ್ದು ಜನರ ವಿಶ್ವಾಸ ಗೆಲ್ಲುವಲ್ಲಿ ಈ ಬಾರಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಪ್ರಭಾವಿ ಸಮುದಾಯದ ಈಡಿಗ ಸಮುದಾಯದ ಗೋಪಾಲಕೃಷ್ಣ ಸರ್ವ ಜನಾಂಗದ ಮತವನ್ನು ಸೆಳೆಯುವ ನಾಯಕರು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ..


ಸ್ಪೆಷಲ್ ರಿಪೋರ್ಟ್ :ಅಜಿತ್ ಗೌಡ ಬಡೇನಕೊಪ್ಪ 


Post a Comment

Previous Post Next Post