ಶಿವಮೊಗ್ಗ :ರಾಜ್ಯ ರಾಜಕಾರಣದಲ್ಲಿ ಕೊನೆ ಕ್ಷಣದ ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಘೋಷಣೆ ವಿಚಾರ ನಾಮಪತ್ರ ಸಲ್ಲಿಸೋವರೆಗೂ ಕಾಯುತ್ತ ಇರುವಾಗಲೇ ಈಶ್ವರಪ್ಪ ಆಪ್ತ ಬಣದ ಚನ್ನಬಸಪ್ಪ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಘೋಷಣೆ ಆಗುತ್ತಿದಂತೆ ರಾಜಕೀಯ ಚಿತ್ರಣವೆ ಬದಲಾಗಿದ್ದು.ಇಂದು ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದು ಶಿವಮೊಗ್ಗದ ಚುನಾವಣಾ ಚಿತ್ರಣವೇ ಬದಲಾದಂತೆ ಕಾಣಿಸುತ್ತಿದೆ.
ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಪ್ರಸನ್ನ ಕುಮಾರ್ ಶಿವಮೊಗ್ಗದಲ್ಲಿ ಗೇಮ್ ಚೇಂಜರ್ ಆಗುವ ಎಲ್ಲಾ ಲಕ್ಷಣ - ಸಾಧ್ಯತೆಗಳು ಕಂಡು ಬರುತ್ತಿದೆ. ಅಖಾಡದಲ್ಲಿ ಈಶ್ವರಪ್ಪನವರ ಅನುಪಸ್ಥಿತಿ, ಪ್ರಸನ್ನ ಕುಮಾರ್ ಜೆಡಿಎಸ್ ಸೇರ್ಪಡೆ, ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಕಣಕ್ಕಿಳಿಯುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಬಗ್ಗು ಬಡಿಯಲು ಅಯನೂರ್ ಮಂಜುನಾಥ್ ಚುನಾವಣೆ ಹೊಸವ್ಯೂಹ ಹೆಣೆದಿದ್ದು, ಮಾಜಿ ಶಾಸಕ ಕೆ. ಬಿ ಪ್ರಸನ್ನಕುಮಾರ್ ಅವರನ್ನು ಜೊತೆಗೆ ಜೆಡಿಎಸ್ ಸೇರ್ಪಡೆ ಮಾಡಿಕೊಂಡಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನವರ ಕೆಜೆಪಿ ಪಕ್ಷ ಹಾಗೂ ಬಿಜೆಪಿ- ಕಾಂಗ್ರೆಸ್ ಜಿದ್ದಾ ಜಿದ್ದಿಯಲ್ಲಿ ರೋಚಕವಾಗಿ ಕಾಂಗ್ರೆಸ್ ಪಕ್ಷದ ಕೆ. ಬಿ ಪ್ರಸನ್ನಕುಮಾರ್ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಸೋಲಿಗೆ ಕಾರಣವಾಗಿ ವಿಧಾನಸಭೇ ಪ್ರವೇಶ ಪಡೆದಿದ್ದರು!!.2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಶ್ವರಪ್ಪನವರ ಎದುರು ಸೋತಿದ್ದ ಪ್ರಸನ್ನ ಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸದೆ ಇರುವುದರಿಂದ ಬೆಂಬಲಿಗರೇ ಪ್ರತಿಭಟನೆ ನಡೆಸಿದ್ದರು. ನಿನ್ನೆ ಪ್ರಸನ್ನ ಕುಮಾರ್ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ವೇಳೆ ಪ್ರಸನ್ನ ಕುಮಾರ್ ಪರ ಘೋಷಣೆ ಕೂಗಿದ್ದರು
ಇಂದು ಬೆಂಗಳೂರಿಗೆ ತೆರಳಿ ಪ್ರಸನ್ನ ಕುಮಾರ್ ದೇವೇಗೌಡ, ಮಾಜಿ ಸಿಎಂ ಕುಮಾರ ಸ್ವಾಮಿಯವರನ್ನ ಭೇಟಿಯಾಗಿ ಅಲ್ಲೇ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ಪಕ್ಷ ಸೇರ್ಪಡೆಯನ್ನ ಅಧಿಕೃತಗೊಳಿಸಿದ್ದಾರೆ.