ಹೊಸನಗರ : ಕುಗ್ರಾಮದ ಯುವಕನ ಸಂಶೋಧನೆಯ ಕಡೆಗಣನೆ

ಹೊಸನಗರ:ಸುಮಾರು ಮೂರ್ನಾಲ್ಕು  ವರ್ಷಗಳ ಹಿಂದೆಯೆ ಹೊಸನಗರ ತಾಲೂಕು ಮಳಲಿ ಸಮೀಪದ ಎಂಜಿನಿಯರಿಂಗ್ ವಿದ್ಯಾರ್ಥಿ ನಿಖಿಲ್ ಮಳಲಿ ಮೊಟ್ಟ ಮೊದಲ ಬಾರಿ ವಿನೂತನವಾಗಿ  ಮಲೆನಾಡ ಪ್ರಮುಖ ಬೆಳೆಯಾದ ಅಡಿಕೆಯಿಂದ ಸುಧಾರಿತ ಉಪ್ಪಿನಕಾಯಿಯನ್ನ ಆವಿಷ್ಕರಿಸಿದ್ದರು. ಹಾಗೂ ಮಾರುಕಟ್ಟೆಗೆ ಸಹ ಪರಿಚಯಿಸಿದ್ದರು. ರಾಜ್ಯ ಹಾಗೂ ಜಿಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಹಾಗಿದ್ದರೂ ಕೂಡ... ಯುವಕನ ಸಂಶೋಧನೆಯನ್ನೇ ಕಡೆಗಣನೆ ಮಾಡಿ. ಪೂರ್ವಪರ ವಿಷಯ  ತಿಳಿದುಕೊಳ್ಳದೆ,ಇತ್ತೀಚೆಗೆ ಕೆಲವು ಸುದ್ದಿ ಮಾದ್ಯಮಗಳಲ್ಲಿ  GMIT ದಾವಣಗೆರೆ ಕಾಲೇಜಿನ ವಿದ್ಯಾರ್ಥಿಗಳಾದ ದೀಪ್ತಿ ಹಾಗೂ ಐಶ್ವರ್ಯ ಇವರು ಅಡಿಕೆಯಿಂದ ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ...

ಹೌದು  ಇಂದಿನ ಆಧುನಿಕ ಜಗತ್ತಿನಲ್ಲಿ ರೈತ ಮಕ್ಕಳ ಪರಿಶ್ರಮ ಹಾಗೂ ಆವಿಷ್ಕಾರಗಳಿಗೆ ಬೆಲೆಯೇ ಇಲ್ಲದಂತಾಗಿದೆ....ಕುಗ್ರಾಮದಲ್ಲಿ ಕಂಡುಹಿಡಿದ ಅಡಿಕೆ ಉಪಉತ್ಪನ್ನಗಳ ಅವಿಷ್ಕಾರಕ್ಕೆ ಸಮರ್ಪಕ  ಸಹಕಾರವಿಲ್ಲದೆ, ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳ ಆಸಕ್ತಿ ಕುಂದುವ ಮಟ್ಟಕ್ಕೆ ಬಂದಿದೆ..

ಈ ಬಗ್ಗೆ ಸಂಶೋಧಕ ವಿದ್ಯಾರ್ಥಿ ನಿಖಿಲ್  ಹೇಳಿಕೆ ನೀಡಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುಟ್ಟ ಕುಗ್ರಾಮ ಮಳಲಿಯ ಕೃಷಿ ಕುಟುಂಬದ ಮಗನಾದ ನಾನು 2018 ರಲ್ಲಿ ಅಡಿಕೆ ಉಪ್ಪಿನಕಾಯಿ ಸೇರಿದಂತೆ ಅರೇಕ ಮಿಲ್ಕ್ ಮಿಕ್ಸ್ , ಅಡಿಕೆ ಸಿಪ್ಪೆಯ ಪೆಟ್ರೋಲ್ ಹಾಗೂ ಅಡಿಕೆಯ ಬರ್ಫಿ ಇತರೆ ಅಡಿಕೆ ಮೌಲ್ಯವರ್ಧನೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವು.

ನಾನು ಮಂಗಳೂರಿನ ಪ್ರತಿಷ್ಠಿತ ಕರಾವಳಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಮಾಡುತ್ತಿರುವಾಗಲೇ, ಈ ಅಡಿಕೆ ಉಪ್ಪಿನಕಾಯಿಯನ್ನು ತಯಾರಿಸಿ ಎಲ್ಲ ಸುದ್ದಿ ಮಾಧ್ಯಮಗಳನ್ನು ಸೇರಿ ಹಲವು ರೈತ ಸಂಘ, ಅಡಿಕೆ ಬೆಳೆಗಾರರ ಸಂಸ್ಥೆಗಳಲ್ಲಿ ನಮ್ಮ ಉತ್ಪನ್ನವನ್ನು ದೊಡ್ಡ ರೀತಿಯಲ್ಲಿ ಪರಿಚಯಿಸಿದ್ದೇವು .ಹಾಗೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿದ್ದವು.

ಈಗಾಗಲೇ ಹೆಚ್ಚಿನ ಸಂಶೋಧನೆಗಾಗಿ  ಮಲೆನಾಡು ಅಗ್ರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್  ಸಂಸ್ಥೆಯನ್ನ ಹುಟ್ಟುಹಾಕಿದ್ದು..ಉತ್ಪನ್ನಗಳಿಗೆ ಪೇಟೆಂಟ್ ಪಡೆಯುವ ಹಂತದಲ್ಲಿ ಇದ್ದೇವೆ...

ಆದರೆ ಇದೀಗ G.M.I.T ದಾವಣಗೆರೆ ಕಾಲೇಜಿನ ವಿದ್ಯಾರ್ಥಿನಿಯರು ಅಡಿಕೆ ಉಪ್ಪಿನಕಾಯಿಯನ್ನು ತಾವೇ ಸಂಶೋಧನೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.ಸುದ್ದಿಯೂ ಸಹ ಮಾಧ್ಯಮಗಳಲ್ಲಿ ಹರಿದಾಡಿದೆ ಇದನ್ನು ಗಮನಿಸಿದ ನಾನು G.M.I.T ಕಾಲೇಜಿನ ಮುಖ್ಯಸ್ಥರನ್ನು ವಿಚಾರಿಸಿದಾಗ ಸಮರ್ಪಕವಾದ ಮಾಹಿತಿ ಸಿಗದಿರುವುದು, ಹಾಗೂ ಉನ್ನತ ಸ್ಥಾನದಲ್ಲಿ ಇರುವವರೇ ಮನ ಬಂದಂತೆ ಮಾತನಾಡಿರುವುದು ಮನಸಿಗೆ ಬೇಸರ ತಂದಿದೆ..ವಿದ್ಯಾರ್ಥಿಗಳಿಗೆ ನಿರಾಶಾದಾಯವಾಗಿದೆ.

ನಾವು ತಯಾರಿಸಿರುವ ಅಡಿಕೆ ಉಪ್ಪಿನಕಾಯಿಯ ಪದಾರ್ಥ ಹಾಗೂ ವಿಧಾನ ಈ ರೀತಿಯಾಗಿದೆ: ಹಸಿ ಅಡಿಕೆಯನ್ನು 15 ದಿನಗಳ ಕಾಲ ಉಪ್ಪು ನೀರಿನಲ್ಲಿ ನೆನೆಸಿಡಬೇಕು, 15 ದಿನಗಳ ಬಳಿಕ ಕೊತ್ತಂಬರಿ, ಜೀರಿಗೆ, ಮೆಣಸು , ಸಾಸಿವೆ ಅರೆದು (ಮಾವಿನಕಾಯಿ ಉಪ್ಪಿನಕಾಯಿ ರೀತಿಯಲ್ಲಿ ಬೆರೆಸಬೇಕು).

ದೀಪ್ತಿ ಹಾಗೂ ಐಶ್ವರ್ಯರವರು ಈ ಕೆಳಕಂಡಂತೆ ತಾವು ಅಡಿಕೆ ಉಪ್ಪಿನಕಾಯಿಯನ್ನು ತಯಾರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ: ( ಮಾವಿನಕಾಯಿ ಉಪ್ಪಿನಕಾಯಿಯ ರೀತಿಯಲ್ಲೇ ಅಡಿಕೆ ಉಪ್ಪಿನಕಾಯಿ ತಯಾರಿಸಬಹುದು) ಸುಲಿದ ಅಡಕೆಯನ್ನು 15 ದಿನಗಳ ಕಾಲ ಉಪ್ಪು ನೀರಿನಲ್ಲಿ ನೆನೆ ಇಡಬೇಕು. 15 ದಿನಗಳ ಬಳಿಕ ಹುಣಸೆಹಣ್ಣು, ಕೊತ್ತಂಬರಿ, ಸಾಸಿವೆ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು.

 (ಈ ಎರಡು ವಿಧಾನಗಳು ಒಂದೇ ರೀತಿಯಲ್ಲಿ ಕಂಡು ಬರುತ್ತಿದೆ.) ಐಶ್ವರ್ಯ ಹಾಗೂ ದೀಪ್ತಿಯವರು ತಾವು ಅಡಿಕೆಯಿಂದ ಉಪ್ಪಿನಕಾಯಿಯನ್ನು ಅವಿಷ್ಕರಿದ್ದೇವೆ ಎಂದು ಹೇಳುವುದಕ್ಕಿಂತ ಅಡಿಕೆಯ ಒಂದು ಸುಧಾರಿತ ಉತ್ಪನ್ನವನ್ನು ಮಾಡಿದ್ದೇವೆ ಎಂದು ಹೇಳಬಹುದಿತ್ತು ಎಂಬುದು ನನ್ನ ಅಭಿಪ್ರಾಯ.

ಈ ರೀತಿಯಾಗಿ ಇನ್ನೊಬ್ಬರ ಸಂಶೋಧನೆಯನ್ನು ತಾವೇ ಮೊದಲಬಾರಿಗೆ ಕಂಡು ಹಿಡಿದ್ದೇವೆ ಎಂದು ಹೇಳುವುದು ಹೊಸ ಪ್ರತಿಭೆಗಳಿಗೆ ನಿರುತ್ಸಹವನ್ನು ಉಂಟು ಮಾಡುತ್ತದೆ. ಇನ್ನೊಬ್ಬರಿಗೆ ಈ ರೀತಿಯಾಗಬಾರದು ಎನ್ನುವುದೇ ನನ್ನ ಆಶಯ ಎನ್ನುತ್ತಾರೆ ಸಂಶೋಧಕ ನಿಖಿಲ್ ಮಳಲಿ......

Post a Comment

Previous Post Next Post