ಹೊಸನಗರ :ಪಂಚನದಿಗಳ ಉಗಮಸ್ಥಳ ಬಿಲ್ಲೆಶ್ವರದಲ್ಲಿ ಜರುಗಿದ ಕುಮದ್ವತಿ ದೀಪೋತ್ಸವ...

ಹೊಸನಗರ :ಪ್ರತಿವರ್ಷದಂತೆ ಈ ವರ್ಷವೂ  ಸಹ ಹೊಸನಗರ ತಾಲೂಕು ಹುಂಚ  ಸಮೀಪ ಪಂಚ ನದಿಗಳ ಉಗಮಸ್ಥಾನದಲ್ಲಿ ಬಿಲ್ಲೆಶ್ವರ  ಬೆಟ್ಟದ ಕುಮದ್ವತಿ ತೀರ್ಥ ಕಲ್ಯಾಣಿಯಲ್ಲಿ ಸರಳ ಸುಂದರವಾದ,ಕುಮದ್ವತಿ ದೀಪೋತ್ಸವ ಕಾರ್ಯಕ್ರಮ ಜರುಗಿತು.ದೀಪೋತ್ಸವ ಕಾರ್ಯಕ್ರಮವನ್ನ ಹುಂಚ ಹೊಂಬುಜ ಜೈನ ಮಠದ ಶ್ರೀ  ಶ್ರೀ ಸ್ವಸ್ತಿಶ್ರೀ ಡಾ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ದಿವ್ಯ ಸಾನಿದ್ಯದಲ್ಲಿ ನೆಡೆಯಿತು.

ಮಲೆನಾಡ ಹೆಬ್ಬಾಗಿನ ಪ್ರಕೃತಿ ಮಡಿಲನ, ಸೊಬಗಿನ ದಟ್ಟ ಕಾನನ ನಡುವೆ ಪಂಚ ನದಿಗಳ ಮನಮೋಹಕ ತೀರ್ಥಉದ್ಭವಾಗುವ ಕಲ್ಯಾಣಿಯ ಸುತ್ತ, ಹೂವು ಹಾಗೂ ದೀಪಗಳಿಂದ ಅಲಂಕೃತ ಶೃಂಗಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು.ಕೆಲ ವರ್ಷಗಳ ಹಿಂದೆ ದಟ್ಟ ಪೊದೆ ಗಿಡ ಗಂಟೆಗಳಿಂದ ಮುಚ್ಚಿಹೋಗಿದ್ದ, ಐತಿಹಾಸಿಕ ಸ್ಥಳ ಕಳೆದ ಮೂರು ವರ್ಷಗಳಗಳಿಂದ ಮುನ್ನೆಲೆಗೆ ಬಂದಿದ್ದು ಊರಿನ ಗ್ರಾಮಸ್ಥರ, ಉತ್ಸಾಹಿ ಮನಸುಗಳ ಶ್ರಮವನ್ನ ನಾವು ಇಲ್ಲಿ ಗಮನಿಸಿಬೇಕಾಗಿದೆ...

 ಪಂಚ ನದಿಗಳಾದ ಕುಮದ್ವತಿ, ಕುಶಾವತಿ,ಹರಿದ್ರಾವತಿ, ಶರ್ಮಣಾವತಿ, ಶರ್ಮಿಣ್ಯಾವತಿ, ಎಂಬ ಐದು ನದಿಗಳಿಗೆ ಕಾನನ ನಡುವೆ ಜನ್ಮ ನೀಡುವ ಪುಣ್ಯ ಭೂಮಿ.ವರ್ಷಪೂರ್ತಿ ಬೆಟ್ಟದ ಮೇಲಿಂದ ಸಹಜವಾಗಿ, ಹರಿಯುವ ಜಲಾಧಾರೆಯೆ ವಿಭಿನ್ನವಾಗಿದ್ದು,ತನ್ನ ಇರುವಿಕೆಯನ್ನ ಮಲೆನಾಡಿಗೆ ಪರಿಚಯಿಸಿದೆ.
.

ದೀಪೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತಾರಾಗಿ ಶ್ರೀ ವಿನಯ್ ಕುಮಾರ್, ಪೃಥ್ವಿ ಗೌಡ ಖ್ಯಾತ ಇತಿಹಾಸಕಾರರಾದ ಅಜಯ್ ಕುಮಾರ್ ಶರ್ಮ,ವ ಮುಖಂಡರು ಅತಿಥಿ ಉಪನ್ಯಾಸಕರು ಆದ ಅಭಿಷೇಕ್ ಹುಂಚ ಪಾಲ್ಗೊಂಡಿದ್ದರು.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಬಗರ್ಕುಂ ಸದಸ್ಯರೂ, ಪತ್ತಿನ ಸಂಘದ ಅಧ್ಯಕ್ಷರು, ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು

Post a Comment

Previous Post Next Post