ಸಾಗರ :ಬೆಳಿಗ್ಗೆಯಿಂದ ಬಿಡುವುಕೊಟ್ಟಿದ್ದ ಮಳೆರಾಯ ಸಂಜೆಯ ವೇಳೆಯಲಿ ಧಾರಾಕಾರವಾಗಿ ಸುರಿದ ಮಳೆ..

ಶಿವಮೊಗ್ಗ :ಸತತ 20 ದಿನಗಳಿಗೂ ಹೆಚ್ಚು  ಕಾಲ ಮಲೆನಾಡಲ್ಲಿ ಅವಾಂತರ ಸೃಷ್ಟಿಸಿ, ಜನ ಜೀವನ ಅಸ್ತವ್ಯಸ್ಥ ಮಾಡಿದ ಮಳೆ ಇಂದು ಕೊಂಚ ಬೆಳಿಗ್ಗೆಯಿಂದ ಕಡಿಮೆಯಾದಂತೆ ಕಂಡರೂ ಸಂಜೆ ವೇಳೆಗೆ ಮತ್ತೆ ಅದೇ ಆರ್ಭಟವನ್ನ ಮುಂದುವರಿಸಿದ್ದು,, ಧಾರಾಕಾರ ಮಳೆಗೆ ಸಂಪೂರ್ಣ ಜನ ಜೀವನ ಅಸ್ತವ್ಯಸ್ತ!!

ಹೌದು  ಇಂದು ಸಂಜೆ ಸಾಗರ ಬಿ ಎಚ್ ರಸ್ತೆಯಲ್ಲಿ ಸುರಿದ ಬಾರಿ ಮಳೆಗೆ ಜನರು ಸಂಪೂರ್ಣ ನಲುಗಿ ಹೋಗಿದ್ದು, ರೈತರ ಪಾಡು ಅಂತೂ ತೀವ್ರ ಶೋಚನೀಯವಾಗಿದ್ದು, ಭತ್ತ ಬೆಳೆ ಮಳೆಯ ಆರ್ಭಟಕ್ಕೆ ನೆಲಕಚ್ಚಿದೆ.ಮೋಡಕವಿದ ವಾತಾವರಣದಿಂದ ಸೂರ್ಯನ ನೀರಿಕ್ಷೆಯಲ್ಲಿ ಇದ್ದ ಮಲ್ನಾಡ್ ರೈತರಿಗೆ ಮತ್ತೆ ವರುಣ ಬಿಸಿ ಮುಟ್ಟಿಸಿದಂತೆ ಕಾಣುತ್ತಿದೆ..

ಹವಾಮಾನ ಇಲಾಖೆ ವರದಿಯಂತೆ ಇನ್ನು ನಾಲ್ಕು -ಐದು ದಿನಗಳ ಕಾಲಗಳ ಮಳೆಯ ವಾತಾವರಣದ ಮುನ್ಸೂಚನೆ ನೀಡಿದ್ದು..ಮುಂಜಾಗ್ರತೆ ಕ್ರಮ ವಹಿಸಲು ಕೋರಲಾಗಿದೆ...


ನವೆಂಬರ್‍ನಲ್ಲಿ ಇಷ್ಟೊಂದು ಮಳೆಯಾಗಿರುವುದು ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ  ಹೇಳಿದ್ದಾರೆ.

ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತ ಇಂದು ಸಂಜೆ ಹಾಗೂ ರಾತ್ರಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಇನ್ನು ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ. ನ.26ಕ್ಕೆ ಮತ್ತೊಂದು ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ಆನಂತರವೂ ಮತ್ತೊಂದು ಸುತ್ತಿನ ಮಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದುವರೆಯುವುದು ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.



ಬೆಳಿಗ್ಗೆಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಂಜೆಯ ಹೊತ್ತಿಗೆ ಸಾಗರ ನಗರದಲ್ಲಿ ಮಳೆ ಸುರಿಸುತ್ತಿದೆ...

ಸಾಗರದ ಜೋಗ ರಸ್ತೆಯ ಎಚ್ ಪಿ ಪೆಟ್ರೋಲ್ ಬಂಕ್ ಮುಂಭಾಗದ ದೃಶ್ಯವಿದು




Post a Comment

Previous Post Next Post